Keerthy Suresh : ಸೌತ್‌ ನಟಿ ಕೀರ್ತಿ ಸುರೇಶ್‌ ಸಖತ್‌ ಗ್ಲಾಮರಸ್‌ ರೋಲ್‌ಗಳಲ್ಲಿ ಮಿಂಚುವುದರ ಜೊತೆಗೆ ಗಟ್ಟಿ ಕಂಟೆಟ್‌ ಇರುವ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಇದಲ್ಲದೇ ನಟಿ ಹಲವಾರು ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇದೆಲ್ಲದರ ನಡುವೆ ಕೀರ್ತಿ ಸುರೇಶ್‌ ರಾಜಕೀಯ ಅಖಾಡಕ್ಕೆ ಇಳಿಯಲಿದ್ದಾರೆ ಎನ್ನಲಾಗುತ್ತಿದೆ. 


COMMERCIAL BREAK
SCROLL TO CONTINUE READING

ಇನ್ನು ಈ ನಟಿ ಲವ್‌ ಮಾಡ್ತಿದ್ದಾರಾ..? ಇವರೇ ಲವರ್..?‌ ದಳಪತಿ ಅವರ ಜೀವನದಲ್ಲಿ ಎಂಟ್ರಿಯಾಗಿದ್ದಾರೆ? ಎಂದೆಲ್ಲಾ ವದಂತಿಗಳು ಹರಿದಾಡುತ್ತಿದ್ದವು. ಜೊತೆಗೆ ಈ ವಿಚಾರವಾಗಿ ಕೀರ್ತಿ ಸುರೇಶ್‌ ಸುದ್ದಿಯಲ್ಲಿದ್ದರು. ಈ ವಿಚಾರವಾಗಿ ಪ್ರತಿಕ್ರಿಯಿಸಿದ ನಟಿ ಇಂತಹ ಸುದ್ದಿ ಕೇಳಿದ್ರೆ ಬೇಸರ ಆಗುತ್ತೆ, ಮದುವೆ ಡೇಟಿಂಗ್‌, ಈ ಬಗ್ಗೆ ಏನೇ ವಿಷಯ ಇದ್ದರೂ ನಾನೇ ಹೇಳ್ತಿನಿ ಎಂದು ಸ್ಪಷ್ಟನೆಯನ್ನು ಸಹ ನೀಡಿದ್ದರು. 


ಇದನ್ನೂ ಓದಿ-ʼದಿ ಕೇರಳ ಸ್ಟೋರಿʼ ನಿರ್ಮಾಪಕರ ಮುಂದಿನ ಸಿನಿಮಾ ಯಾವುದು ಗೊತ್ತಾ..ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್‌ ..!


ಸದ್ಯ ನಟಿ ಕೀರ್ತಿ ಸುರೇಶ್‌ ʼಮಾಮನನ್‌ʼ ಸಿನಿಮಾವನ್ನು ಈ ವಾರ ಎದುರು ನೋಡುತ್ತಿದ್ದಾರೆ. ಚಿತ್ರದಲ್ಲಿ ಸ್ಟಾಲಿನ್‌ ಜೊತೆ ಕೀರ್ತಿ ಸುರೇಶ್‌ ನಟಿಟಿದ್ದಾರೆ. ಈ ಸಿನಿಮಾ ಮಾರಿ ಸೆಲ್ವರಾಜ್‌ ನಿರ್ದೇಶನದಲ್ಲಿ ಮೂಡಿಬಂದಿದ್ದು, ಸಾಕಷ್ಟು ಕೂತುಹಲ ಕೆರಳಿಸಿದೆ. ಅದರಲ್ಲೂ ನಟ ಉದಯನಿಧಿ ನನ್ನ ಕೊನೆಯ ಸಿನಿಮಾ ಎಂದು ಹೇಳಿದ್ದು, ಸಿನಿಮಾ ಭಾರೀ ನಿರೀಕ್ಷೆ ಹುಟ್ಟು ಹಾಕಿದೆ.


ಸದ್ಯಕ್ಕೆ ತಮಿಳು ಸರ್ಕಾರದಲ್ಲಿ ಸಚಿವರಾಗಿರುವ ಉದಯನಿಧಿ ಮುಂದಿನ ದಿನಗಳಲ್ಲಿ ಸಂಪೂರ್ಣವಾಗಿ ರಾಜಕೀಯದಲ್ಲಿ ತೊಡಗಲು ನಿರ್ಧರಿಸಿದ್ದಾರೆ. ಇವರ ಜೊತೆ ಕೀರ್ತಿ ಸುರೇಶ್‌ ʼಮಾಮನನ್‌ʼ ಚಿತ್ರದಲ್ಲಿ ನಟಿಸಿದ್ದಾರೆ. ಇಬ್ಬರ ನಡುವೆ ಉತ್ತಮ ಸ್ನೇಹವಿದೆ. ಹೀಗಾಗಿ ಕೀರ್ತಿ ಸುರೇಶ್‌ ಕೂಡ ರಾಜಕೀಯ ಪ್ರವೇಶಿಸುತ್ತಾರೆ, ಇಲ್ಲವಾದರೆ ಮುಂದಿನ ಚುನಾವಣೆಗಳಲ್ಲಿ ಚುನಾವಣೆ ಪ್ರಚಾರಗಳಲ್ಲಾದರೂ ನಟಿ ಭಾಗಿಯಾಗಲಿದ್ದಾರೆ ಎನ್ನಲಾಗುತ್ತಿದೆ. 


ಇದನ್ನೂ ಓದಿ-Guntur Kaaram: ಮಹೇಶ್ ಬಾಬು ಸಿನಿಮಾದಿಂದ ಪೂಜಾ ಹೆಗ್ಡೆ ಔಟ್, ಮತ್ತೊಬ್ಬ ಸ್ಟಾರ್ ನಟಿ ಎಂಟ್ರಿ!?


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.