Guntur Kaaram: ಮಹೇಶ್ ಬಾಬು ಸಿನಿಮಾದಿಂದ ಪೂಜಾ ಹೆಗ್ಡೆ ಔಟ್, ಮತ್ತೊಬ್ಬ ಸ್ಟಾರ್ ನಟಿ ಎಂಟ್ರಿ!?

Guntur Kaaram: ಸೂಪರ್ ಸ್ಟಾರ್ ಮಹೇಶ್ ಬಾಬು ಮತ್ತು ತ್ರಿವಿಕ್ರಮ್ ಕಾಂಬಿನೇಷನ್‌ನಲ್ಲಿ ರೆಡಿಯಾಗ್ತಿರುವ ಸಿನಿಮಾ ಗುಂಟೂರು ಖಾರಂ ಬಗ್ಗೆ ಸುದ್ದಿಯೊಂದು ಹರಿದಾಡುತ್ತಿದೆ.   

Written by - Chetana Devarmani | Last Updated : Jun 26, 2023, 01:25 PM IST
  • ಮಹೇಶ್ ಬಾಬು ಸಿನಿಮಾದಿಂದ ಪೂಜಾ ಹೆಗ್ಡೆ ಔಟ್!
  • ಗುಂಟೂರು ಖಾರಂ ಸಿನಿಮಾಗೆ ಸ್ಟಾರ್ ನಟಿ ಎಂಟ್ರಿ?
  • ಮಹೇಶ್ ಬಾಬು - ತ್ರಿವಿಕ್ರಮ್ ಕಾಂಬಿನೇಷನ್‌ನ ಚಿತ್ರ
Guntur Kaaram: ಮಹೇಶ್ ಬಾಬು ಸಿನಿಮಾದಿಂದ ಪೂಜಾ ಹೆಗ್ಡೆ ಔಟ್, ಮತ್ತೊಬ್ಬ ಸ್ಟಾರ್ ನಟಿ ಎಂಟ್ರಿ!? title=
Pooja hegde

Guntur Kaaram: ಸುಮಾರು 12 ವರ್ಷಗಳ ನಂತರ ಈ ಕ್ರೇಜಿ ಕಾಂಬಿಯೊದಲ್ಲಿ ಚಿತ್ರ ಬರುತ್ತಿರುವುದರಿಂದ ಅಭಿಮಾನಿಗಳು ಹೆಚ್ಚಿನ ನಿರೀಕ್ಷೆಯನ್ನು ಹೊಂದಿದ್ದಾರೆ. ಆದರೆ ಈ ಚಿತ್ರಕ್ಕೆ ಆರಂಭದಿಂದಲೂ ಅಡೆತಡೆಗಳು ಎದುರಾಗುತ್ತಿವೆ. ಈ ನಡುವೆ ಕೆಲ ದಿನಗಳ ಕಾಲ ಚಿತ್ರೀಕರಣ ಸ್ಥಗಿತಗೊಂಡಿದೆ ಎಂಬ ಸುದ್ದಿ ಹಬ್ಬಿತ್ತು. ಆ ಬಳಿಕ ಸಂಗೀತ ನಿರ್ದೇಶಕ ಥಮನ್ ಬಗ್ಗೆ ಮಹೇಶ್ ಬಾಬು ಸೀರಿಯಸ್ ಆಗಿದ್ದಾರೆ. ಅವರನ್ನು ಚಿತ್ರದಿಂದ ಕೈಬಿಡಲಾಗಿದೆ ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ ಚಿತ್ರತಂಡ ಇದನ್ನು ನಿರಾಕರಿಸಿದೆ. ಇತ್ತೀಚೆಗಷ್ಟೇ ಸಿನಿಮಾ ವಲಯದಲ್ಲಿ ಮತ್ತೊಂದು ಸುದ್ದಿ ವೈರಲ್ ಆಗಿದೆ. ಗುಂಟೂರು ಖಾರಂ ಸಿನಿಮಾದಿಂದ ನಟಿ ಪೂಜಾ ಹೆಗ್ಡೆ ಸ್ಥಾನಕ್ಕೆ ಮತ್ತೊಬ್ಬ ನಾಯಕಿ ಆಯ್ಕೆಯಾಗಿದ್ದಾರೆ ಎಂಬ ಗುಸುಗುಸು ಕೇಳಿಬರುತ್ತಿದೆ.

ಸಿನಿಮಾ ಘೋಷಣೆಯ ವೇಳೆ ಪೂಜಾ ಹೆಗ್ಡೆ ಮಾತ್ರ ನಾಯಕಿ ಎಂದು ಚಿತ್ರತಂಡ ಘೋಷಿಸಿತ್ತು. ಆ ನಂತರ ಶ್ರೀಲೀಲಾ ಸಹ ಎಂಟ್ರಿ ಕೊಟ್ಟರು. ಇದೀಗ ಪೂಜಾ ಪೂಜಾ ಹೆಗ್ಡೆ ಅವರ ಸ್ಥಾನಕ್ಕೆ ಮಲಯಾಳಿ ಬ್ಯೂಟಿ ಸಂಯುಕ್ತಾ ಮೆನನ್ ಆಯ್ಕೆಯಾಗಿದ್ದಾರೆ ಎಂಬ ಸುದ್ದಿ ಕಳೆದೆರಡು ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ಬಗ್ಗೆ ಸಿನಿಮಾ ತಂಡ ಯಾವ ಸ್ಪಷ್ಟನೆಯನ್ನೂ ನೀಡಿಲ್ಲ.  

ಇದನ್ನೂ ಓದಿ: Rashmika Mandanna: ರಶ್ಮಿಕಾ - ವಿಜಯ್ ಸೀಕ್ರೆಟ್ ಡೇಟ್? ಪ್ಯಾಚ್‌ಅಪ್‌ ವದಂತಿಗೆ ಸಾಕ್ಷಿ ಈ ವಿಡಿಯೋ!

ಸಂಯುಕ್ತಾ ಮೆನನ್ ಸತತ ಹಿಟ್‌ಗಳ ಮೂಲಕ ಗೋಲ್ಡನ್ ಬ್ಯೂಟಿಯಾಗಿ ಖ್ಯಾತಿಯನ್ನು ಪಡೆದರು. ಭೀಮ್ಲಾ ನಾಯಕ್ ಸಿನಿಮಾ ಮೂಲಕ ಟಾಲಿವುಡ್‌ಗೆ ಪರಿಚಿತರಾದರು. ಅವರು ಬಿಂಬಿಸಾರ ಮತ್ತು ಸರ್ ಚಿತ್ರಗಳಲ್ಲಿ ಹಿಟ್ ಪಡೆದರು. ಇತ್ತೀಚಿನ ವಿರೂಪಾಕ್ಷ ಚಿತ್ರದ ಮೂಲಕ ಮತ್ತೊಂದು ಬ್ಲಾಕ್ ಬಸ್ಟರ್ ಹಿಟ್‌ ಅವರ ಪಾಲಾಯಿತು. ಭೀಮ್ಲಾ ನಾಯಕ್ ಚಿತ್ರದ ಸಮಯದಲ್ಲಿ ಸಂಯುಕ್ತಾ ಮೆನನ್ ನಟನೆಯ ಬಗ್ಗೆ ತ್ರಿವಿಕ್ರಮ್ ಉತ್ತಮ ಅಭಿಪ್ರಾಯವನ್ನು ಸೃಷ್ಟಿಸಿದಂತಿದೆ. ಈ ಹಿನ್ನೆಲೆಯಲ್ಲಿ ಅವರಿಗೆ ಗುಂಟೂರು ಖಾರಂ ಸಿನಿಮಾದಲ್ಲಿ ಅವಕಾಶ ನೀಡಲಾಗಿದೆ ಎಂದು ಹೇಳಲಾಗಿದೆ ಎಂಬ ವರದಿಗಳು ಹರಿದಾಡುತ್ತಿವೆ.

ಸದ್ಯ ಪೂಜಾ ಹೆಗ್ಡೆ ಕನ್ನಡ, ತಮಿಳು ಹಾಗೂ ಹಿಂದಿ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಆದರೆ, ಈ ಸಿನಿಮಾಗಳ ಶೆಡ್ಯೂಲ್ ಸ್ವಲ್ಪ ಏರುಪೇರಾಗಿರುವುದರಿಂದ ಗುಂಟೂರು ಖಾರಂ ಸಿನಿಮಾಕ್ಕೆ ಡೇಟ್ಸ್ ಕೊಡುವುದು ಕಷ್ಟವಂತೆ. ಡೇಟ್ಸ್ ಕ್ಲ್ಯಾಶ್ ಆಗಬಾರದು ಎಂಬ ಉದ್ದೇಶದಿಂದ ಪೂಜಾ ಗುಂಟೂರು ಖಾರಂನಿಂದ ದೂರ ಸರಿದಿದ್ದಾರೆ ಎನ್ನಲಾಗಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: 'ಸಪ್ತ ಸಾಗರದಾಚೆ ಎಲ್ಲೋ' ಎರಡೂ ಪಾರ್ಟ್‌ಗಳ ಬಿಡುಗಡೆ ದಿನಾಂಕ ಅನೌನ್ಸ್‌

ಮಹೇಶ್ ಬಾಬು ಸುಮಾರು 12 ವರ್ಷಗಳ ನಂತರ ತ್ರಿವಿಕ್ರಮ್ ಜೊತೆ ಸಿನಿಮಾ ಮಾಡುತ್ತಿದ್ದಾರೆ. ಹರಿಕಾ ಮತ್ತು ಹಾಸಿನಿ ಕ್ರಿಯೇಷನ್ಸ್‌ನಲ್ಲಿ ಎಸ್.ರಾಧಾಕೃಷ್ಣ (ಚೀನಾ ಬಾಬು) ನಿರ್ಮಿಸುತ್ತಿದ್ದಾರೆ. ಜಗಪತಿ ಬಾಬು ವಿಲನ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಬಿಡುಗಡೆಯಾದ ಟೈಟಲ್ ಗ್ಲಿಂಪ್ಸ್ ಗೆ ಅಭಿಮಾನಿಗಳಿಂದ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮಹೇಶ್ ಬಾಬು ಅವರ ಲುಕ್ ಗೆ ಫ್ಯಾನ್ಸ್‌ ಫಿದಾ ಆಗಿದ್ದಾರೆ. ಗುಂಟೂರು ಖಾರಂ ಮುಂದಿನ ವರ್ಷ ಜನವರಿ 13 ರಂದ ರಿಲೀಸ್‌ ಆಗುವ ನಿರೀಕ್ಷೆಯಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News