Keerthy Suresh Mariage: ಮಲಯಾಳಂನ ಗೀತಾಂಜಲಿ ಚಿತ್ರದ ಮೂಲಕ ನಾಯಕಿಯಾಗಿ ಕೀರ್ತಿ ಸುರೇಶ್ ಸಿನಿ ರಂಗಕ್ಕೆ ಪರಿಚಯವಾದರು. ತೆಲುಗಿನಲ್ಲಿ ನೇನು ಲೋಕಲ್ ಚಿತ್ರದ ಮೂಲಕ ಪದಾರ್ಪಣೆ ಮಾಡಿದರು. ನಾನಿ ಅಭಿನಯದ ಈ ಸಿನಿಮಾ ಸೂಪರ್ ಹಿಟ್ ಆಗುತ್ತಿದ್ದಂತೆ ಕೀರ್ತಿ ಸುರೇಶ್ ಲಕ್ಕೇ ಬದಲಾಯ್ತು. ಆ ಬಳಿಕ ಸಾಲು ಸಾಲು ಅವಕಾಶಗಳು ಕೀರ್ತಿ ಪಾಲಾದವು. ಆದರೆ ಕೀರ್ತಿ ಸುರೇಶ್‌ ವೃತ್ತಿಜೀವನದಲ್ಲಿ ಮಹಾನಟಿ ಸಿನಿಮಾ ಅವರಿಗೆ ಉತ್ತಮ ಹಿಟ್‌ ತಂದುಕೊಟ್ಟಿತು.


COMMERCIAL BREAK
SCROLL TO CONTINUE READING

ಸೌತ್‌ ಸಿನಿ ಇಂಡಸ್ಟ್ರಿಯಲ್ಲಿ ಕೀರ್ತಿ ಸುರೇಶ್‌ ಜನಪ್ರಿಯ ನಟಿಯಾಗಿದ್ದಾರೆ. ಆದರೆ ಇತ್ತೀಚೆಗೆ  ಲೇಡಿ ಓರಿಯೆಂಟೆಡ್ ಚಲನಚಿತ್ರಗಳನ್ನೇ ಮಾಡುತ್ತಿದ್ದಾರೆ. ಪ್ರಸ್ತುತ, ಭೋಲಾ ಶಂಕರ್ ಚಿತ್ರದಲ್ಲಿ ಕೀರ್ತಿ ಸುರೇಶ್ ಮೆಗಾಸ್ಟಾರ್ ಚಿರಂಜೀವಿ ಅವರ ಸಹೋದರಿಯ ಪಾತ್ರದಲ್ಲಿ ನಟಿಸಲಿದ್ದಾರೆ. ‌ಇವರ ಸಿನಿಮಾಗಳ ಸುದ್ದಿ ಒಂದೆಡೆಯಾದರೆ ಮದುವೆಯ ವದಂತಿಗಳು ಹಬ್ಬುತ್ತಿವೆ.


ಇದನ್ನೂ ಓದಿ: ಬಾಕ್ಸ್ ಆಫೀಸ್ ಸುಲ್ತಾನ ʻಪ್ರಶಾಂತ್‌ ನೀಲ್‌ʼ ಹೆಸರಲ್ಲಿರುವ ರೆಕಾರ್ಡ್‌ಗಳಿವು!


ಆದರೆ ಕೀರ್ತಿ ಸುರೇಶ್ ಮದುವೆಗೆ ಸಿದ್ಧವಾಗಿದ್ದಾರೆ ಎಂಬ ವದಂತಿಗಳು ಹಬ್ಬುತ್ತಿವೆ. ಅದು ನಿಶ್ಚಿತ ವ್ಯಕ್ತಿಯೊಂದಿಗೆ ನಡೆಯಲಿದೆ ಎಂದು ಹೇಳಲಾಗ್ತಿದೆ. ಇತ್ತೀಚೆಗಷ್ಟೇ ತಮಿಳು ಸಿನಿಮಾವೊಂದರ ಪ್ರಚಾರದ ಭಾಗವಾಗಿ ಮಾತನಾಡುತ್ತಾ, ಕೀರ್ತಿ ಸುರೇಶ್ ತಮ್ಮ ಮದುವೆಯ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.


ತನ್ನ ಮದುವೆ ಕುರಿತ ಪ್ರಶ್ನೆಗಳಿಗೆ ಉತ್ತರಿಸಿದ ಕೀರ್ತಿ ಸುರೇಶ್‌, ನನ್ನ ಮದುವೆಯ ಬಗ್ಗೆ ಹಲವು ಸುದ್ದಿಗಳು ಮುನ್ನೆಲೆಗೆ ಬರುತ್ತಿವೆ. ಹಾಗಾಗಿಯೇ ಅವರೆಲ್ಲರಿಗೂ ಸ್ಪಷ್ಟತೆ ಸಿಗುವಂತೆ ಶೀಘ್ರದಲ್ಲೇ ನನ್ನ ಮದುವೆಯನ್ನು ಅಧಿಕೃತವಾಗಿ ಪ್ರಕಟಿಸುತ್ತೇನೆ. ನನ್ನನ್ನು ಮದುವೆಯಾಗಲು ಸಾಕಷ್ಟು ಜನರು ಕಾಯುತ್ತಿದ್ದಾರೆ. ತನ್ನ ಮದುವೆಯ ಬಗ್ಗೆ ಯಾವುದೇ ರೀತಿಯ ಸುದ್ದಿಗಳನ್ನು ಪ್ರಸಾರ ಮಾಡದಂತೆ ಮಾಧ್ಯಮಗಳಿಗಕೋರುತ್ತೇನೆ ಎಂದು ಕೀರ್ತಿ ಸುರೇಶ್‌ ಹೇಳಿದರು. 


ಇದನ್ನೂ ಓದಿ: ಟಾಲಿವುಡ್‌ ಮೆಗಾಸ್ಟಾರ್‌ಗೆ ಕ್ಯಾನ್ಸರ್‌? ಸ್ಪಷ್ಟನೆ ನೀಡಿದ ಚಿರಂಜೀವಿ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.