ಟಾಲಿವುಡ್‌ ಮೆಗಾಸ್ಟಾರ್‌ಗೆ ಕ್ಯಾನ್ಸರ್‌? ಸ್ಪಷ್ಟನೆ ನೀಡಿದ ಚಿರಂಜೀವಿ

Megastar Chiranjeevi : ಟಾಲಿವುಡ್‌ ನಟ ಚಿರಂಜೀವಿಗೆ ಕ್ಯಾನ್ಸರ್‌ ಎನ್ನುವ ಸುದ್ದಿಯೊಂದು ತೆಲುಗು ಸಿನಿರಂಗದಲ್ಲಿ ದೊಡ್ಡ ಸದ್ದು ಮಾಡುತ್ತಿತ್ತು. ಈ ಸುದ್ದಿಗೆ ಸ್ವತಃ ಮೆಗಾಸ್ಟಾರ್‌ ಸ್ಪಷ್ಟನೆ ನೀಡಿದ್ದು, ಭಯಪಡಬೇಡಿ ಎಂದಿದ್ದಾರೆ.  

Written by - Zee Kannada News Desk | Last Updated : Jun 4, 2023, 11:22 AM IST
  • ಟಾಲಿವುಡ್‌ನ ಮೆಗಾಸ್ಟಾರ್‌ ಚಿರಂಜೀವಿ 60ಕ್ಕಿಂತ ಹೆಚ್ಚು ವಯಸ್ಸಾದರೂ ಸಹ ಇಂದಿಗೂ ಸಖತ್‌ ಫಿಟ್‌ ಆಗಿದ್ದಾರೆ.
  • ಚಿರಂಜೀವಿ ಕ್ಯಾನ್ಸ್‌ರ್ ನಿಂದ ಬಳಲುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು.
  • ಹರಿದಾಡುತ್ತಿದ್ದ ಕ್ಯಾನ್ಸರ್‌ ವದಂತಿಗೆ ಸ್ಪಷ್ಟನೆ ನೀಡಿದ್ದಾರೆ.
ಟಾಲಿವುಡ್‌ ಮೆಗಾಸ್ಟಾರ್‌ಗೆ ಕ್ಯಾನ್ಸರ್‌? ಸ್ಪಷ್ಟನೆ ನೀಡಿದ ಚಿರಂಜೀವಿ  title=

Tollywood : ಟಾಲಿವುಡ್‌ನ ಮೆಗಾಸ್ಟಾರ್‌ ಚಿರಂಜೀವಿ 60ಕ್ಕಿಂತ ಹೆಚ್ಚು ವಯಸ್ಸಾದರೂ ಸಹ ಇಂದಿಗೂ ಸಖತ್‌ ಫಿಟ್‌ ಆಗಿದ್ದಾರೆ. ಸಾಲು ಸಾಲು ಹಿಟ್‌ ಸಿನಿಮಾಗಳಲ್ಲಿ ನಾಯಕರಾಗಿ ನಟಿಸುವ ಮೂಲಕ ಎಲ್ಲರ ಮನಸ್ಸನ್ನು ಕದ್ದಿರುವ ಸ್ಟಾರ್‌ ನಟನ ಆರೋಗ್ಯದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಗುಸುಗುಸು ಸುದ್ದಿಗಳು ಹರಿದಾಡುತ್ತಿದ್ದವು. 

ಚಿರಂಜೀವಿ ಕ್ಯಾನ್ಸ್‌ರ್ ನಿಂದ ಬಳಲುತ್ತಿದ್ದಾರೆ ಎಂಬ ಸುದ್ದಿ ಜಾಲತಾಣ ಪ್ರವೇಶಿಸುತ್ತಿದಂತೆ ಅವರ ಅಪಾರ ಅಭಿಮಾನಿಗಳು ಕಳವಳ ವ್ಯಕ್ತಪಡಿಸಿದ್ದಾರೆ. ಶೀಘ್ರ ಗುಣಮುಖರಾಗಿ ಬನ್ನಿ ಎಂದು ಟ್ವೀಟ್‌ ಮಾಡುತ್ತಿದ್ದಾರೆ. ಕೆಲವರು ದೇವರು ನಿಮ್ಮನ್ನು ಕಾಪಾಡಲಿ ಎಂದು ಟ್ವೀಟ್‌ ಮಾಡಿದ್ದಾರೆ. ಈ ವಿಚಾರ ನಟ ಚಿರಂಜೀವಿಯ ಗಮನಕ್ಕೂ ಬಂದಿದೆ. ಹರಿದಾಡುತ್ತಿದ್ದ ಕ್ಯಾನ್ಸರ್‌ ವದಂತಿಗೆ ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ-Prashanth Neel : ಯಶಸ್ಸಿನ ಮೂಲಕವೇ ಸಿನಿ ಜಗತ್ತಿಗೆ ಪರಿಚಯವಾದ ಪ್ರತಿಭಾನ್ವಿತ ನಿರ್ದೇಶಕರಿವರು

"ಸ್ವಲ್ಪ ಸಮಯದ ಹಿಂದೆ ನಾನು ಕ್ಯಾನ್ಸರ್‌ ಕೆಂದ್ರವನ್ನು ಉದ್ಘಾಟಿಸಿದೆ. ಆಗ ಕ್ಯಾನ್ಸರ್‌ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯತೆಯ ಬಗ್ಗೆ ಮಾತನಾಡಿದ್ದೆ. ನಿಯಮಿತವಾಗಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದರೆ ಕ್ಯಾನ್ಸರ್ ನ್ನು ಬರದಂತೆ ತಡೆಯಬಹುದು ಎಂದು ಹೇಳಿದ್ದೆ. ಕ್ಯಾನ್ಸರ್‌ ಬಗ್ಗೆ ನಾನೂ ಅಲರ್ಟ್‌ ಆಗಿದ್ದರಿಂದ ಕೊಲೊನ್‌ ಸ್ಕೋಪ್‌ ಪರೀಕ್ಷೆ ಮಾಡಿಸಿ, ಕ್ಯಾನ್ಸರ್‌ ರಹಿತ ಪೊಲಿಪ್ಸ್‌ ಪತ್ತೆ ಹ್ಚಿ ತೆಗೆಯಲಾಗುತ್ತಿತ್ತು ಎಂದು ಹೇಳಿದ್ದೆ. ಮೊದಲು ಪರೀಕ್ಷೆ ಮಾಡದೇ ಇದ್ದಿದ್ದರೆ ಕ್ಯಾನ್ಸರ್‌ ಆಗಿಬಿಡುತ್ತಿತ್ತು ಎಂದು ಮಾತ್ರ ಹೇಳಿದ್ದೆ ಅದಕ್ಕೆ ಎಲ್ಲರೂ ಮುಂಜಾಗ್ರತೆ ವಹಿಸಿ ವೈದ್ಯಕೀಯ ಪರೀಕ್ಷೆ ಸ್ಕ್ರೀನಿಂಗ್‌ ಮಾಡಿಸಿಕೊಳ್ಳಬೇಕು ಎಂದಿದ್ದೆ.

ಆದರೆ ಕೆಲ ಮಾದ್ಯಮ ಸಂಸ್ಥೆಗಳು ಇದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೇ ನನಗೆ ಕ್ಯಾನ್ಸರ್‌ ಬಂದಿದೆ ಮತ್ತು ನಾನು ಚಿಕಿತ್ಸೆಯಿಂದ ಬದುಕುಳಿದೆ ಎಂದು ಸುದ್ದಿ ಮಾಡಿದ್ದಾರೆ. ಇದರಿಂದ ಅನಗತ್ಯ ಗೊಂದಲ ಉಂಟಾಗಿದ್ದು, ಅನೇಕ ಹಿತೈಷಿಗಳು ನನ್ನ ಆರೋಗ್ಯದ ಬಗ್ಗೆ ಸಂದೇಶಗಳನ್ನು ಕಳುಹಿಸುತ್ತಿದ್ದಾರೆ. ಅವರೆಲ್ಲರಿಗೂ ಈ ಸ್ಪಷ್ಟನೆ. ವಿಷಯ ಅರ್ಥವಾಗದೇ ಅಸಂಬದ್ದವಾಗಿ ಬರೆಯಬೇಡಿ ಇದರಿಂದ ಅನೇಕ ಜನರು ಭಯಬೀತರಾಗುತ್ತಾರೆ" ಎಂದು ಮನವಿ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ-Happy Birthday Prashanth Neel: ಬಾಕ್ಸ್ ಆಫೀಸ್ ಸುಲ್ತಾನ ʻಪ್ರಶಾಂತ್‌ ನೀಲ್‌ʼ ಹೆಸರಲ್ಲಿರುವ ರೆಕಾರ್ಡ್‌ಗಳಿವು!

Trending News