ಬೆಂಗಳೂರು: ಖಡಕ್ ಲುಕ್, ಜಬರ್ದಸ್ತ್​ ಡೈಲಾಗ್​ಗಳ ಮೂಲಕ ವಿಶ್ವದಾದ್ಯಂತ ಆರ್ಭಟಿಸಿದ್ದ ರಾಕಿ ಭಾಯ್​ ಅಬ್ಬರದ ಎಂಟ್ರಿಗೆ ಇಡೀ ಬಾಲಿವುಡ್ ಶೇಕ್ ಶೇಕ್ ಆಗಿದೆ. ಪೋಸ್ಟರ್,​ ಟೀಸರ್ ಮತ್ತು ಟ್ರೇಲರ್ ಮೂಲಕ ಸಿನಿಪ್ರಿಯರಲ್ಲಿ ತೀವ್ರ ಕುತೂಹಲ ಮೂಡಿಸಿದ್ದ ‘ಕೆಜಿಎಫ್: ಚಾಪ್ಟರ್ 2’ ದೇಶ-ವಿದೇಶಗಳಲ್ಲಿ ಭರ್ಜರಿ ಹವಾ ಸೃಷ್ಟಿಸಿದೆ. ಸುಮಾರು 10 ಸಾವಿರಕ್ಕೂ ಹೆಚ್ಚು ಥಿಯೇಟರ್‍ಗಳಲ್ಲಿ ರಾಕಿ ಭಾಯ್ ಅಬ್ಬರ ಜೋರಾಗಿದೆ.


COMMERCIAL BREAK
SCROLL TO CONTINUE READING

ರಾಕಿಂಗ್ ಸ್ಟಾರ್ ಯಶ್ ಮತ್ತು ಬಾಲಿವುಡ್ ಖ್ಯಾತ ನಟ ಸಂಜಯ್ ದತ್ ಅವರ ಖಡಕ್ ಲುಕ್‍ಗೆ​ ಸಿನಿಪ್ರಿಯರು ಫಿದಾ ಆಗಿದ್ದಾರೆ. ರಾಕಿ ಅಬ್ಬರಕ್ಕೆ ಕೇವಲ ಬಾಲಿವುಡ್ ಮಾತ್ರವಲ್ಲ ಇಡೀ ಭಾರತೀಯ ಚಿತ್ರರಂಗದ ಬಾಕ್ಸ್‍ ಆಫೀಸ್ ಉಡೀಸ್ ಆಗಿದೆ. ಕಲೆಕ್ಷನ್‍ನಲ್ಲಿ ‘ಕೆಜಿಎಫ್-2’ ಹೊಸ ದಾಖಲೆಯನ್ನೇ ಸೃಷ್ಟಿಸುತ್ತಿದೆ. ಸಿನಿಮಾ ನೋಡಿದ ಬಾಲಿವುಡ್ ಮಂದಿ ಬಾಯ್ ಮೇಲೆ ಬೆರಳು ಇಟ್ಟುಕೊಂಡಿದ್ದಾರೆ.


ಇದನ್ನೂ ಓದಿ: ವೀರೇಶ್ ಥಿಯೇಟರ್​ನಲ್ಲಿ ಮಹಾ ಯಡವಟ್ಟು.. ಕೆಜಿಎಫ್ 2 ಬದಲು ಕೆಜಿಎಫ್ 1 ರಿಲೀಸ್!


ರಾಮ್‍ ಗೋಪಾಲ್ ವರ್ಮಾ ಟ್ವೀಟ್


ಕೆಜಿಎಫ್-2 ಸಿನಿಮಾವನ್ನು ಸಿನಿಪ್ರಿಯರು ಮೆಚ್ಚಿಕೊಂಡಿದ್ದಾರೆ. ರಾಕಿ ಭಾಯ್ ಮತ್ತು ಅಧೀರನ ಕಾಳಗವನ್ನು ಕಣ್ತುಂಬಿಕೊಂಡು ಖುಷಿ ವ್ಯಕ್ತಪಡಿಸಿದ್ದಾರೆ. ಚಿತ್ರದ ಕೊನೆಯಲ್ಲಿ ‘ಕೆಜಿಎಫ್: ಚಾಪ್ಟರ್ 3’ ಕೂಡ ಬರಲಿದೆ ಎಂಬ ಹಿಂಟ್ ನೀಡಲಾಗಿದ್ದು, ಅದಕ್ಕಾಗಿ ಈಗ ಅಭಿಮಾನಿಗಳು ಕಾಯುವಂತಾಗಿದೆ.


ಇದನ್ನೂ ಓದಿ: KGF 2: ತೆರೆಯಲ್ಲಿ ಅಬ್ಬರಿಸಿದ ʼಜ್ಯೂನಿಯರ್‌ ರಾಕಿಭಾಯ್‌ʼ: ಕೆಜಿಎಫ್‌ ಬಗ್ಗೆ ಅನ್ಮೋಲ್‌ ಹೀಗೆ...


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.