KGF: Chapter 2: ಹೇಗಿದೆ ಗೊತ್ತಾ ರಾಕಿ ಭಾಯ್ ಮತ್ತು ಅಧೀರನ ಘೋರ ಕಾಳಗ?

ಪ್ರಪಂಚದಾದ್ಯಂತ  ಸುಮಾರು 10 ಸಾವಿರಕ್ಕೂ ಹೆಚ್ಚು ಥಿಯೇಟರ್‍ಗಳಲ್ಲಿ ಚಿತ್ರ ತೆರೆಕಂಡಿದ್ದು, ಗಲ್ಲಾಪೆಟ್ಟಿಗೆಯನ್ನು ಕೊಳ್ಳೆ ಹೊಡೆಯುತ್ತಿದೆ.

Written by - Puttaraj K Alur | Last Updated : Apr 14, 2022, 04:08 PM IST
  • ಕೆಜಿಎಫ್ ವಶಪಡಿಸಿಕೊಳ್ಳಲು ರಾಕಿಭಾಯ್ ಮತ್ತು ಅಧೀರನ ನಡುವೆ ಘೋರ ಕಾಳಗ!
  • ತೆರೆಮೇಲೆ ರಾಕಿಂಗ್ ಸ್ಟಾರ್ ಯಶ್ ಮತ್ತು ಸಂಜಯ್ ದತ್ ಭರ್ಜರಿ ಮಿಂಚಿಂಗ್
  • ಕೆಜಿಎಫ್-2 ಆ್ಯಕ್ಷನ್ ದೃಶ್ಯಗಳನ್ನು ಕಣ್ತುಂಬಿಕೊಂಡು ದಿಲ್‍ಖುಷ್ ಆದ ಸಿನಿಪ್ರಿಯರು
KGF: Chapter 2: ಹೇಗಿದೆ ಗೊತ್ತಾ ರಾಕಿ ಭಾಯ್ ಮತ್ತು ಅಧೀರನ ಘೋರ ಕಾಳಗ? title=
ರಾಕಿಭಾಯ್ ಮತ್ತು ಅಧೀರನ ನಡುವೆ ಘೋರ ಕಾಳಗ!

ಬೆಂಗಳೂರು: ಬಹುನಿರೀಕ್ಷಿತ ‘ಕೆಜಿಎಫ್: ಚಾಪ್ಟರ್ 2’ ಸಿನಿಮಾ ತೆರೆಗೆ ಅಪ್ಪಳಿಸಿದ್ದು, ಹಿಂದಿನ ದಾಖಲೆಗಳನ್ನೆಲ್ಲಾ ಉಡೀಸ್ ಮಾಡುತ್ತಿದೆ. ತೆರೆಮೇಲೆ ರಾಕಿಂಗ್ ಸ್ಟಾರ್ ಯಶ್ ಅಬ್ಬರಿಸಿದ್ದು ಸಿನಿಪ್ರೇಮಿಗಳಿಗೆ ಭರಪೂರ ಮನರಂಜನೆ ಸಿಕ್ಕಂತಾಗಿದೆ. ಇಡೀ ಭಾರತೀಯ ಚಿತ್ರರಂಗವೇ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿದ್ದ ‘ಕೆಜಿಎಫ್-1’ರ ಮುಂದುವರಿದ ಭಾಗವೇ ‘ಕೆಜಿಎಫ್-2’. ಸಿನಿಮಾ ವೀಕ್ಷಿಸಿದ ಪ್ರತಿಯೊಬ್ಬರೂ 'ಸಲಾಂ ರಾಕಿಭಾಯ್' ಎನ್ನುತ್ತಿದ್ದಾರೆ.

ಕೆಜಿಎಫ್-2’ ವೀಕ್ಷಿಸಲು ಸಿನಿಪ್ರಿಯರು ಬಹಳ ಕಾತುರದಿಂದ ಕಾಯುತ್ತಿದ್ದರು. ಅದರಂತೆ ಪ್ರಪಂಚದಾದ್ಯಂತ  ಸುಮಾರು 10 ಸಾವಿರಕ್ಕೂ ಹೆಚ್ಚು ಥಿಯೇಟರ್‍ಗಳಲ್ಲಿ ಚಿತ್ರ ತೆರೆಕಂಡಿದ್ದು, ಗಲ್ಲಾಪೆಟ್ಟಿಗೆಯನ್ನು ಕೊಳ್ಳೆ ಹೊಡೆಯುತ್ತಿದೆ. ಪೋಸ್ಟರ್, ಟೀಸರ್ ಮತ್ತು ಟ್ರೇಲರ್​ಗಳ ಮೂಲಕ ದೊಡ್ಡ ಕಿಡಿಯನ್ನೇ ಹೊತ್ತಿಸಿದ್ದ ಸಿನಿಮಾವನ್ನು ವೀಕ್ಷಿಸಿದ ಪ್ರೇಕ್ಷಕ ಪ್ರಭುವಿಗೆ ದಿಲ್‍ಖುಷ್ ಆಗಿದೆ.

ಇದನ್ನೂ ಓದಿ: KGF 3: ಕೆಜಿಎಫ್‌ 2 ಬಳಿಕ ಬರಲಿದ್ಯಾ ಕೆಜಿಎಫ್ 3! ಚಿತ್ರದ ಕೊನೆಯಲ್ಲಿ ಟ್ವಿಸ್ಟ್‌ ಬಿಚ್ಚಿಟ್ಟ ಗುಟ್ಟೇನು?

ಮಧ‍್ಯರಾತ್ರಿಯಿಂದಲೇ ಅಭಿಮಾನಿಗಳು 'ಕೆಜಿಎಫ್-2' ಸಿನಿಮಾವನ್ನು ವೀಕ್ಷಿಸುತ್ತಿದ್ದಾರೆ. ರಾಕಿಭಾಯ್ ಮತ್ತು ಅಧೀರನ ನಡುವೆ ನಡೆದ ಘೋರ ಸೆಣಸಾಟವನ್ನು ಕಣ್ತುಂಬಿಕೊಂಡು ಸಿನಿಪ್ರೇಮಿಗಳು ಹುಚ್ಚೆದ್ದು ಸಂಭ್ರಮಿಸಿದ್ದಾರೆ. ರಾಕಿಭಾಯ್ ಯಶ್ ಮತ್ತು ಅಧೀರನ ಖಡಕ್ ಖಳನಾಯಕನ ಪಾತ್ರದಲ್ಲಿ ಬಾಲಿವುಡ್ ಖ್ಯಾತ ನಟ ಸಂಜಯ್ ದತ್ ಮಿಂಚಿದ್ದಾರೆ. ಇಬ್ಬರ ನಡುವಿನ ಸೆಣಸಾಟದ ರೋಚಕ ದೃಶ್ಯಗಳು ನೋಡುಗರ ಮೈನವಿರೇಳಿಸುವಂತಿದೆ. ರವಿ ಬಸ್ರೂರ್ ಅವರ ಮ್ಯೂಸಿಕ್ ಮಾಂತ್ರಿಕತೆ ಮತ್ತು ಭುವನ್ ಗೌಡ ಅವರ ಕ್ಯಾಮೆರಾ ಕೈಚಳಕದಲ್ಲಿ ಈ ಆ್ಯಕ್ಷನ್ ದೃಶ್ಯಗಳು ಅದ್ಭುತವಾಗಿ ಮೂಡಿಬಂದಿವೆ.

‘ಕೆಜಿಎಫ್-2’ ಕೊನೆಗೊಂಡ ಸ್ಥಳದಿಂದಲೇ ‘ಕೆಜಿಎಫ್-2’ ಆರಂಭವಾಗುತ್ತದೆ. ತಾಯಿಗೆ ಕೊಟ್ಟ ಮಾತಿನಂತೆ ನಡೆದುಕೊಳ್ಳುವ ನಿಟ್ಟಿನಲ್ಲಿ ರಾಕಿ KGF ಮೇಲೆ ಹಕ್ಕು ಸಾಧಿಸಿರುತ್ತಾನೆ. KGF ಗಣಿಗಳಲ್ಲಿ ಅಡಗಿರುವ ಚಿನ್ನವನ್ನು ಹೆಕ್ಕಿ ತೆಗೆದು ತನ್ನ ಸಾಮ್ರಾಜ್ಯವನ್ನು ಮತ್ತಷ್ಟು ವಿಸ್ತರಿಸಿಕೊಳ್ಳಲು ರಾಕಿ ಮಾಸ್ಟರ್ ಪ್ಲಾನ್ ಮಾಡಿರುತ್ತಾನೆ. ಇದಕ್ಕೆ ಸವಾಲಾಗಿ ಅಧೀರನ ಎಂಟ್ರಿಯಾಗುತ್ತದೆ. ಚಿತ್ರದ ಮೊದಲಾರ್ಧದಲ್ಲಿಯೇ ಅಧೀರ ಮತ್ತು ರಾಕಿಭಾಯ್ ನಡುವೆ ಕಾದಾಟ ಆರಂಭವಾಗುತ್ತದೆ. ಇದು ಸೆಕೆಂಡ್ ಹಾಫ್‍ನಲ್ಲಿಯೂ ಮುಂದುವರಿದು ಕೆಜಿಎಫ್ ವಶಪಡಿಸಿಕೊಳ್ಳಲು ಇಬ್ಬರ ನಡುವೆ ಘೋರ ಯುದ್ಧವೇ ನಡೆಯುತ್ತದೆ. ಈ ಯುದ್ಧದಲ್ಲಿ ರಾಕಿ ತನ್ನ ರೀನಾ(ಶ್ರೀನಿಧಿ ಶೆಟ್ಟಿ)ಳನ್ನು ಕಳೆದುಕೊಳ್ಳುತ್ತಾನೆ.

ಇದನ್ನೂ ಓದಿ: KGF 2: ಕೇರಳದಲ್ಲಿ ಚಿಂಗಾರಿ ಮೇಳದ ಮೂಲಕ ರಾಕಿಭಾಯ್‌ಗೆ ಸ್ವಾಗತ ಕೋರಿದ ಫ್ಯಾನ್ಸ್‌!

ಅಧೀರನ ಗುಂಡಿಗೆ ರೀನಾ ಬಲಿಯಾಗುತ್ತಾಳೆ. ಇದೇ ಕೋಪದಲ್ಲಿ ರಾಕಿ, ಅಧೀರನನ್ನು ಮುಗಿಸಿಬಿಡುತ್ತಾನೆ. ರಾಕಿ ಮತ್ತು ಅಧೀರ ಅಂದರೆ ಯಶ್ ಮತ್ತು ಸಂಜಯ್ ದತ್ ಅವರ ನಡುವಿನ ಘೋರ ಕಾಳಗವು ಸಿನಿಪ್ರೇಯರಿಗೆ ಭರ್ಜರಿ ಮನರಂಜನೆ ನೀಡುತ್ತದೆ. 'ಕೆಜಿಎಫ್-2'ರ ಆ್ಯಕ್ಷನ್​ ಸೀನ್​ಗಳು ಪ್ರೇಕ್ಷಕರಿಗೆ ರೋಮಾಂಚನಕಾರಿ ಅನುಭವ ನೀಡುತ್ತವೆ. ಮಾಸ್ ಸಿನಿಮಾ ಪ್ರೀಯರಿಗೆ ಇದು ಪಕ್ಕಾ ಪೈಸಾ ವಸೂಲ್ ಸಿನಿಮಾ ಆಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News