₹1000 ಕೋಟಿ ಕ್ಲಬ್ ಸೇರಿದ `ರಾಕಿ ಭಾಯ್` ಸಿನಿಮಾ ಕೆಜಿಎಫ್ ಚಾಪ್ಟರ್-2..?
ಎಲ್ಲೆಲ್ಲೂ ಕೆಜಿಎಫ್ ಜಪ.. ಕೆಜಿಎಫ್ ಚಾಪ್ಟರ್ 2 ಬಿಡುಗಡೆಯಾಗಿ 2 ವಾರ ಕಳೆದರೂ ರಾಕಿ ಭಾಯ್ ಹವಾ ಮಾತ್ರ ಇನ್ನೂ ಹೆಚ್ಚಾಗುತ್ತಲೇ ಇದೆ. ಅದರಲ್ಲೂ ಬಾಕ್ಸ್ ಆಫೀಸ್‌ನಲ್ಲಿ ರಾಕಿ ಸುಲ್ತಾನನ ರೀತಿ ಮೆರೆಯುತ್ತಿದ್ದಾರೆ.
ಬೆಂಗಳೂರು : ಕನ್ನಡಿಗರ ಪಾಲಿನ ಹೆಮ್ಮೆಯ ಸಿನಿಮಾ ಕೆಜಿಎಫ್ ಎಲ್ಲೆಲ್ಲೂ ಸದ್ದು ಮಾಡುತ್ತಿದೆ. ಕೆಜಿಎಫ್ ಚಾಪ್ಟರ್ 2 ಮಾಡಿದ ಮೋಡಿಗೆ ಇಡೀ ಜಗತ್ತೇ ಫಿದಾ ಆಗಿದ್ದು, ಎಲ್ಲರೂ ನಮ್ಮ ಹೆಮ್ಮೆಯ ಕನ್ನಡದ ಚಿತ್ರವನ್ನ ಕೊಂಡಾಡುತ್ತಿದ್ದಾರೆ. ಅದರಲ್ಲೂ ಸಾವಿರ ಕೋಟಿ ಕ್ಲಬ್ ಸೇರುವ ಮೂಲಕ ಕೆಜಿಎಫ್ ಚಾಪ್ಟರ್ 2 ಹೊಸ ದಾಖಲೆ ನಿರ್ಮಿಸಿದ್ದು, ಅಧಿಕೃತ ಘೋಷಣೆಯೊಂದೇ ಈಗ ಬಾಕಿ ಎನ್ನಲಾಗ್ತಿದೆ.
ಎಲ್ಲೆಲ್ಲೂ ಕೆಜಿಎಫ್ ಜಪ.. ಕೆಜಿಎಫ್ ಚಾಪ್ಟರ್ 2 ಬಿಡುಗಡೆಯಾಗಿ 2 ವಾರ ಕಳೆದರೂ ರಾಕಿ ಭಾಯ್ ಹವಾ ಮಾತ್ರ ಇನ್ನೂ ಹೆಚ್ಚಾಗುತ್ತಲೇ ಇದೆ. ಅದರಲ್ಲೂ ಬಾಕ್ಸ್ ಆಫೀಸ್‌ನಲ್ಲಿ ರಾಕಿ ಸುಲ್ತಾನನ ರೀತಿ ಮೆರೆಯುತ್ತಿದ್ದಾರೆ. ಹಿಂದಿ ಬಾಕ್ಸ್ ಆಫೀಸ್‌ನಲ್ಲಿ ಬಾಲಿವುಡ್ ಸಿನಿಮಾಗಳೇ ಮಾಡಲಾಗದ ದಾಖಲೆಯನ್ನ ರಾಕಿ ಭಾಯ್ ಮಾಡಿ ತೋರಿಸಿದ್ದು, ಸಾವಿರ ಕೋಟಿ ಕ್ಲಬ್ ಸೇರಿದೆಯಂತೆ ಕನ್ನಡದ ಹೆಮ್ಮೆಯ ಸಿನಿಮಾ.
ಇದನ್ನೂ ಓದಿ : Manasmita Movie Release : ಅಪ್ಪಣ್ಣ ಸಂತೋಷ್ ನಿರ್ದೇಶನದ 'ಮನಸ್ಮಿತ' ಚಿತ್ರ ಜೂ.3ಕ್ಕೆ ತೆರೆಗೆ!
ಎಲ್ಲೆಲ್ಲೂ 'ಕೆಜಿಎಫ್'
ಅಂದಹಾಗೆ ಟಿವಿ ರೈಟ್ಸ್, ಒಟಿಟಿ ಹಕ್ಕುಗಳು ಹಾಗೂ ಸ್ಯಾಟಲೈಟ್ ರೈಟ್ಸ್ ಎಲ್ಲವನ್ನೂ ಸೇರಿಸಿದರೆ ಕೆಜಿಎಫ್ ಚಾಪ್ಟರ್ 2 ಸಾವಿರ ಕೋಟಿಯ ಗಡಿಯನ್ನ ಉಡೀಸ್ ಮಾಡಿ ಆಗಿದೆ. ಅದರಲ್ಲೂ ಥಿಯೇಟರ್‌ಗಳ ಮೂಲಕವೇ ಕೆಜಿಎಫ್ ಚಾಪ್ಟರ್ 2 ಸಾವಿರ ಕೋಟಿ ಗಳಿಸಿದೆ ಎನ್ನಲಾಗುತ್ತಿದ್ದು, ಅಧಿಕೃತ ಮಾಹಿತಿ ಮಾತ್ರ ಬಾಕಿ ಉಳಿದಿದೆ. ಈ ಮೂಲಕ ಕನ್ನಡಿಗರ ಸಿನಿಮಾವೊಂದು ಹೊಸ ಇತಿಹಾಸವನ್ನೇ ಸೃಷ್ಟಿ ಮಾಡಿದೆ.
ರಾಕಿ ಭಾಯ್ ಅಬ್ಬರ ಭಾರತದಲ್ಲಿ ಮಾತ್ರವಲ್ಲ, ಅಮೆರಿಕಾ, ಆಫ್ರಿಕಾ, ಆಸ್ಟ್ರೇಲಿಯಾ, ಕೆನಡಾ, ಯುರೋಪ್ ಸೇರಿದಂತೆ ಜಗತ್ತಿನ ಮೂಲೆಮೂಲೆಗೂ ತಲುಪಿದೆ. ಈಗಾಗಲೇ ಅಮೆರಿಕಾದಲ್ಲಿ ಭಾರತೀಯ ಸಿನಿಮಾವೊಂದು ಈವರೆಗೆ ಮಾಡಲಾಗದ ದಾಖಲೆಯನ್ನೂ ಕೆಜಿಎಫ್ ಚಾಪ್ಟರ್ 2 ಮಾಡಿ ತೋರಿಸಿದೆ. ರಾಕಿ ಆಕ್ಟಿಂಗ್ ಖದರ್ ಕಣ್ತುಂಬಿಕೊಂಡು ಪ್ರೇಕ್ಷಕ ಪ್ರಭು ಫಿದಾ ಆಗಿದ್ದಾನೆ. ಅಮೆರಿಕಾ ಬಾಕ್ಸ್ ಆಫೀಸ್‌ನಲ್ಲಿ ಕೆಜಿಎಫ್ ಚಾಪ್ಟರ್ 2 ಹಾಲಿವುಡ್ ಸಿನಿಮಾಗಳ ಸಾಲಿನಲ್ಲಿ ನಿಂತಿದೆ.
ಇದನ್ನೂ ಓದಿ : ‘1975’ ಸ್ಪೆಷಲ್ ಹಾಡಿಗೆ ಹೆಜ್ಜೆ ಹಾಕಿದ ಸಿಂಧೂ ಲೋಕನಾಥ್..
ಒಟ್ಟಾರೆ ಹೇಳೋದಾದ್ರೆ ಕೆಜಿಎಫ್ ದಾಖಲೆಗಳ ಮೇಲೆ ದಾಖಲೆಗಳನ್ನು ನಿರ್ಮಾಣ ಮಾಡುತ್ತಾ, ಭಾರತೀಯ ಚಿತ್ರರಂಗಕ್ಕೆ ಹೆಮ್ಮೆ ತರುತ್ತಿದೆ. ಅದರಲ್ಲೂ ಕನ್ನಡಿಗರಿಗೆ ಕೆಜಿಎಫ್ ಒಂದು ಹೆಮ್ಮೆಯ ವಿಚಾರವಾಗಿದ್ದು, ದೇಶಾದ್ಯಂತ ಕನ್ನಡ ಸಿನಿಮಾಗಳಿಗಾಗಿ ಪ್ರೇಕ್ಷಕರು ಕಾಯುವಂತಾಗಿದೆ. ಇನ್ನೇನು ಕನ್ನಡದಲ್ಲಿ ಸಾಲು ಸಾಲಾಗಿ ಪ್ಯಾನ್ ಇಂಡಿಯಾ ಸಿನಿಮಾಗಳು ರಿಲೀಸ್ ಆಗಲಿದ್ದು, ಪ್ರೇಕ್ಷಕರು ಈ ಸಿನಿಮಾಗಳನ್ನ ಕಣ್ತುಂಬಿಕೊಳ್ಳಲು ಕಾಯುತ್ತಿದ್ದಾರೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.