ಎಲ್ಲೆಲ್ಲೂ ಕೆಜಿಎಫ್‌2 (KGF2) ಹವಾ ಬಲು ಜೋರಾಗಿದೆ. ರಾಕಿ ಭಾಯ್‌ ಅಬ್ಬರಕ್ಕೆ ಎಲ್ಲರೂ ದಂಗಾಗಿ ಹೋಗಿದ್ದಾರೆ. ರಣ ಬೇಟೆಗಾರನ ರೌದ್ರಾವತಾರಕ್ಕೆ ಯೂಟ್ಯೂಬ್​ ಕ್ರ್ಯಾಶ್ (Youtube Crash) ಆಗಿದ್ದೀ ಆಯ್ತು. ಕೆಜಿಎಫ್​ 2 ಸಿನಿಮಾ ಮಾಡಿದ್ದ ಕ್ರೇಜ್ ಅನ್ನು ಟ್ರೈಲರ್​ ಡಬಲ್​ ಮಾಡಿದೆ. ಈ ಬೆನ್ನಲ್ಲೇ ಕೆಜಿಎಫ್‌ ಚಿತ್ರತಂಡ ಅಭಿಮಾನಿಗಳಿಗೆ ಮತ್ತೊಂದು ಸಂತಸದ ಸುದ್ದಿ ನೀಡಿದೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: KGF2 Trailer:ಯುಟ್ಯೂಬ್‌ನಲ್ಲಿ ಡಿಲೀಟ್‌ ಆಗಿತ್ತಾ ಕೆಜಿಎಫ್‌2 ಟ್ರೇಲರ್‌!?


ಇಲ್ಲಿವರೆಗೂ ಸೈಲೆಂಟಾಗಿದ ಕೆಜಿಎಫ್ ತಂಡ ಟ್ರೈಲರ್ (KGF 2 Trailer) ರಿಲೀಸ್‌ ಆದ ಮೇಲೆ ಫುಲ್‌ ವೈಲೆಂಟ್‌ ಆಗಲು ಸಜ್ಜಾಗಿದೆ. ಸಿನಿಮಾ ಪ್ರಚಾರಕ್ಕಾಗಿ ಒಂದೊಂದೇ ತಂತ್ರವನ್ನು ಪ್ರಯೋಗಿಸಲು ಸಜ್ಜಾಗಿದೆ.


'ಕೆಜಿಎಫ್ 2' ಟ್ರೈಲರ್ ನೋಡಿ ಥ್ರಿಲ್ ಆದವರಿಗೆ ಮತ್ತೊಂದು ಸಿಹಿ ಸುದ್ದಿ ದೊರೆತಿದೆ. ಮಾರ್ಚ್ 30ಕ್ಕೆ ಹೊಸ ತಂತ್ರಜ್ಞಾನದ (Metaverse) ಮೂಲಕ ಅಭಿಮಾನಿಗಳನ್ನು ರಂಜಿಸಲು ಮುಂದಾಗಿದೆ ಕೆಜಿಎಫ್ ತಂಡ.


ಕೆಜಿಎಫ್‌ ಚಿತ್ರತಂಡ ಹೊಸ ಟೆಕ್ನಾಲಜಿಯನ್ನು ಪ್ರಚಾರಕ್ಕೆ ಬಳಸಿಕೊಳ್ಳಲು ಮುಂದಾಗಿದೆ. ಈ ತಂತ್ರಜ್ಞಾನವನ್ನು ಬಳಸಿಕೊಂಡು 'ಕೆಜಿಎಫ್ ವರ್ಸ್' (KGF verse) ಅನ್ನು ಮಾರ್ಚ್‌ 30 ಕ್ಕೆ ರಿಲೀಸ್ ಮಾಡಲಿದೆ. 


ಇದನ್ನೂ ಓದಿ: "ನಾವಿಲ್ಲ ಅಂದರೂ ನಮ್ಮ ಕೆಲಸ ಇರುತ್ತೆ ಅಂತ ತಿಳಿಸಿದ": ಅಪ್ಪು ನೆನೆದು ಭಾವುಕರಾದ ರಾಘವೇಂದ್ರ ರಾಜ್‌ಕುಮಾರ್‌


ಕೆಜಿಎಫ್‌ (KGF) ಸಿನಿಮಾ ಮೆಟಾ ವರ್ಸ್ ಲೋಕಕ್ಕೆ ಕಾಲಿಡಲು ರೆಡಿಯಾಗಿದೆ. ಅಲ್ಲಿ ಕೆಜಿಎಫ್ ನೀವು ನರಾಚಿ ಲೋಕದೊಳಗೆ ಹೋಗಬಹುದು. ಓಡಾಡಬಹುದು. ನಿಮಗೆ ಬೇಕಾದ ಹಾಗೆ ಇರಬಹುದು. ಇಂತಹದೊಂದು ಪ್ರಪಂಚದೊಳಗೆ ಕೆಜಿಎಫ್ ತಂಡ ಮಾರ್ಚ್ 30ಕ್ಕೆ ಕರೆದೊಯ್ಯಲು ಸಕಲ ಸಿದ್ಧತೆ ಮಾಡಿಕೊಂಡಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.