'ಕೆಜಿಎಫ್‌-2' ಜೊತೆ 'ಕೆಜಿಎಫ್‌-1' ರೀ ರಿಲೀಸ್..!‌ ಕೇರಳದಲ್ಲಿ ಹೇಗಿದೆ ಗೊತ್ತಾ ಯಶ್‌ ಹವಾ..?

ಕನ್ನಡ ಸಿನಿಮಾಗಳಿಗೆ ಈ ಮಾಡರ್ನ್ ಜಗತ್ತಿನಲ್ಲಿ ವರ್ಲ್ಡ್‌ ಲೆವೆಲ್‌ ಮಾರ್ಕೆಟ್‌ ಕ್ರಿಯೇಟ್‌ ಮಾಡಿದ್ದೇ 'ಕೆಜಿಎಫ್‌'.  'ಕೆಜಿಎಫ್‌' ದೊಡ್ಡ ಹಿಟ್‌ ಆದ ಬಳಿಕ 'ಕೆಜಿಎಫ್‌-2'ಗಾಗಿ ಇಡೀ ಜಗತ್ತು ಕಾಯುತ್ತಿದೆ. ಇದೀಗ ಏಪ್ರಿಲ್‌ 14ಕ್ಕೆ 'ಕೆಜಿಎಫ್‌-2' ರಿಲೀಸ್‌ ಆಗೋದು ಗ್ಯಾರಂಟಿ ಆಗಿದ್ದು, ಇದರ ಜೊತೆಗೆ 'ಕೆಜಿಎಫ್‌-1' ಕೂಡ ರೀ ರಿಲೀಸ್‌ ಆಗಲಿದೆಯಂತೆ.

Written by - Malathesha M | Edited by - Zee Kannada News Desk | Last Updated : Mar 27, 2022, 03:19 PM IST
  • 'ಕೆಜಿಎಫ್‌-2' ಜೊತೆ 'ಕೆಜಿಎಫ್‌-1' ರೀ ರಿಲೀಸ್..!‌
  • ಕೇರಳದಲ್ಲಿ ಹೇಗಿದೆ ಗೊತ್ತಾ ಯಶ್‌ ಹವಾ..?
  • 'ಕೆಜಿಎಫ್‌-2' ಬಿಡುಗಡೆಗೆ ಕಾಯ್ತಿದ್ದಾರೆ ಫ್ಯಾನ್ಸ್‌
  • ಅಕ್ಕಪಕ್ಕದ ರಾಜ್ಯದಲ್ಲೂ 'ಕೆಜಿಎಫ್‌-2' ಹವಾ
'ಕೆಜಿಎಫ್‌-2' ಜೊತೆ 'ಕೆಜಿಎಫ್‌-1' ರೀ ರಿಲೀಸ್..!‌ ಕೇರಳದಲ್ಲಿ ಹೇಗಿದೆ ಗೊತ್ತಾ ಯಶ್‌ ಹವಾ..? title=
ಕೆಜಿಎಫ್‌-1

ರಾಕಿ ಭಾಯ್‌ ಕಥೆಯನ್ನ ಅರ್ಧವಷ್ಟೇ ಹೇಳಿದ್ದ 'ಕೆಜಿಎಫ್‌-1' (KGF1) ಇನ್ನರ್ಧ ಕಥೆಯನ್ನ ತನ್ನಲ್ಲೇ ಉಳಿಸಿಕೊಂಡಿತ್ತು. ಹೀಗೆ ಅರ್ಧ ಕಥೆಯನ್ನ ತನ್ನೊಟ್ಟಿಗೆ ಉಳಿಸಿಕೊಳ್ಳುವ ಜೊತೆಗೆ ನೂರಾರು ಕೋಟಿ ಅಭಿಮಾನಿಗಳ ತಲೆಯಲ್ಲಿ ಹುಳು ಓಡಾಡುವಂತೆ ಮಾಡಿದೆ. ಗರುಡಾ ಮರ್ಡರ್‌ ಬಳಿಕ ರಾಕಿಭಾಯ್‌ ಏನಾದ..? ರಾಕಿ ಕಥೆ ಏನಾಯ್ತು..? ಮಿಕ್ಕ ವಿಲನ್‌ ಗಳು ಎಲ್ಲೋದ್ರೂ..? ಹೀಗೆ ಸುಮಾರು 3 ವರ್ಷಕ್ಕೂ ಹೆಚ್ಚು ಕಾಲ ಜನರ ತಲೆಯಲ್ಲಿ ಇಂತಹ ಪ್ರಶ್ನೆಯ ಹುಳು ಓಡಾಡುತ್ತಲೇ ಇದೆ. ಆದ್ರೆ ಆ ಬಿಲಿಯನ್‌ ಡಾಲರ್‌ ಪ್ರಶ್ನೆಗೆ ಏಪ್ರಿಲ್‌ 14ರಂದು ಉತ್ತರ ಸಿಗಲಿದೆ.

ಇದನ್ನೂ ಓದಿ: KGF2 Trailer: ‘ಕೆಜಿಎಫ್​ 2’ ಟ್ರೇಲರ್‌ ರಿಲೀಸ್‌ಗೆ ಕೌಂಟ್​ಡೌನ್ ಶುರು!

ಪ್ರಶಾಂತ್‌ ನೀಲ್‌ ನಿರ್ದೇಶನ ಹಾಗೂ ಯಶ್‌ (Yash) ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ್ದ 'ಕೆಜಿಎಫ್‌' ಸಿನಿಮಾ ಅದ್ಧೂರಿಯಾಗಿ ನಿರ್ಮಾಣವಾಗಿತ್ತು. ಆದರೆ ಈ ಸಿನಿಮಾದ ಟ್ರೈಲರ್‌ ಬಿಡುಗಡೆಯಾಗುವವರೆಗೂ ಯಾರಿಗೂ ಈ ಚಿತ್ರದ ವ್ಯಾಲ್ಯೂ ಗೊತ್ತೇ ಇರಲಿಲ್ಲ. ಆದ್ರೆ ಯಾವಾಗ 'ಕೆಜಿಎಫ್‌' ಟ್ರೈಲರ್‌ ರಿಲೀಸ್‌ ಆಯ್ತೋ, ಅಂದಿನಿಂದ ಇಂದಿನವರೆಗೂ 'ಕೆಜಿಎಫ್‌' ಸಿನಿಮಾಗೆ ನೂರಾರು ಕೋಟಿ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ. 2018ರ ಡಿಸೆಂಬರ್‌ ತಿಂಗಳಿನಿಂದ ಇಲ್ಲಿಯವರೆಗೂ ಅಭಿಮಾನಿಗಳ ಪಟ್ಟಿ ಆಕಾಶ ಮುಟ್ಟುತ್ತಿದೆ.

ಹೀಗೆ 'ಕೆಜಿಎಫ್‌' ಸಿನಿಮಾಗೆ ಫಿದಾ ಆಗಿ ಕೋಟಿ ಕೋಟಿ ಅಭಿಮಾನಿಗಳು ಕೇವಲ ಕರುನಾಡಲ್ಲೇ ಇಲ್ಲ. ನೆರೆ ರಾಜ್ಯಗಳಲ್ಲೂ ಯಶ್‌ ಹಾಗೂ ಕೆಜಿಎಫ್‌ (KGF) ಸಿನಿಮಾಗೆ ದೊಡ್ಡ ಅಭಿಮಾನಿ ಬಳಗವಿದೆ. ಅದರಲ್ಲೂ ಕೇರಳದಲ್ಲಿ ರಾಕಿಭಾಯ್‌ ಗೆ ದೊಡ್ಡ ಫ್ಯಾನ್‌ ಫಾಲೋವರ್ಸ್‌ ಇದ್ದಾರೆ. ಹೀಗಾಗಿ 'ಕೆಜಿಎಫ್‌-2' ರಿಲೀಸ್‌ ಆಗುವ ದಿನವೇ ಭರ್ಜರಿ ಪ್ಲ್ಯಾನ್‌ ಮಾಡಿಕೊಂಡಿದ್ದಾರೆ ಕೇರಳದ ಯಶ್‌ ಅಭಿಮಾನಿಗಳು.

ಅರೆರೆ ಏನಪ್ಪಾ ಅದು ದೊಡ್ಡ ಪ್ಲ್ಯಾನ್‌ ಅಂದ್ರಾ..? ಅಷ್ಟಕ್ಕೂ ಹೀಗೆ ಅಭಿಮಾನಿಗಳು ಸಂಭ್ರಮಿಸೋದಕ್ಕೆ ಕಾರಣವಿದೆ. ಅದೇನೆಂದರೆ ಮೊದಲ ಭಾಗ ನೋಡಿ 3 ವರ್ಷ ಉರುಳಿದೆ. ಹೀಗಾಗಿ 'ಕೆಜಿಎಫ್‌-2' (KGF 2) ನೋಡೋದಕ್ಕೆ ಮೊದಲು ಮೊದಲ ಭಾಗವನ್ನು ಮತ್ತೊಮ್ಮೆ ಕಣ್ತುಂಬಿಕೊಳ್ಳಲು ಫ್ಯಾನ್ಸ್‌ ಪ್ಲಾನ್‌ ಮಾಡಿದ್ದಾರೆ.

ಇದನ್ನೂ ಓದಿ: ಜೇಮ್ಸ್‌ ರಿಲೀಸ್‌ ಆಗಿ 10 ದಿನ ಕಳೆದರೂ ಕುಂದಿಲ್ಲ ಅಭಿಮಾನಿಗಳ ಉತ್ಸಾಹ!

ಅಂದಹಾಗೆ ಕೇರಳದ (Kerala) ಕೆಲವೆಡೆ ಯಶ್‌ ಅಭಿಮಾನಿಗಳು ಏಪ್ರಿಲ್‌ 14ರಂದು ಅಂದ್ರೆ  'ಕೆಜಿಎಫ್‌-2'  ರಿಲೀಸ್‌ ಆಗುವ ದಿನ 'ಕೆಜಿಎಫ್‌-1' ಮೊದಲು ನೋಡಿ ನಂತರ 'ಕೆಜಿಎಫ್‌-2' ನೋಡಲಿದ್ದಾರೆ. ಬೆಳಗ್ಗೆ 4 ಗಂಟೆಗೆ 'ಕೆಜಿಎಫ್‌-1' ಪ್ರದರ್ಶನಗೊಳ್ಳಲಿದ್ದು, ಆ ನಂತರ ಅಂದರೆ ಬೆಳಗ್ಗೆ 8 ಗಂಟೆಗೆ ಫ್ಯಾನ್ಸ್‌ ಶೋನಲ್ಲಿ 'ಕೆಜಿಎಫ್‌-2' ಕಣ್ತುಂಬಿಕೊಳ್ಳಬಹುದು. ಹೀಗೆ ಕನ್ನಡ ಹಾಗೂ ಕನ್ನಡಿಗರ ಸಿನಿಮಾ ನೆರೆ ರಾಜ್ಯದಲ್ಲೂ ದೊಡ್ಡ ಹಿಟ್‌ ಆಗುವ ಮುನ್ಸೂಚನೆ ನೀಡಿದೆ. 'ಕೆಜಿಎಫ್‌-2' ಬಗ್ಗೆ ಆಕಾಶದಷ್ಟು ನಿರೀಕ್ಷೆಗಳು ಬೆಳೆದಿವೆ.

ಒಟ್ಟಾರೆ ಹೇಳೋದಾದ್ರೆ ಕೆಜಿಎಫ್‌ ಪಾರ್ಟ್‌ 2 ಕಣ್ತುಂಬಿಕೊಳ್ಳಲು ಇಡೀ ಜಗತ್ತೇ ಕಾತರದಿಂದ ಕಾಯುತ್ತಿದೆ. ರಾಕಿಭಾಯ್‌ ಕಥೆ ಏನಾಗುತ್ತೆ, ಗರುಡ ಸತ್ತ ನಂತರ ಏನೆಲ್ಲಾ ಸಂಭವಿಸುತ್ತೆ. ಅಧೀರನ ಆರ್ಭಟ ಹೇಗಿರುತ್ತೆ ಅನ್ನೋದೆ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಚಿತ್ರದ ಬಿಡುಗಡೆಗೆ ಕೌಂಟ್‌ಡೌನ್‌ ಶುರುವಾಗಿದ್ದು, 'ಕೆಜಿಎಫ್‌-2' ರಿಲೀಸ್‌ ದಿನ‌ ಜಗತ್ತಿನಾದ್ಯಂತ ಹಬ್ಬದ ವಾತಾವರಣ ಸೃಷ್ಟಿಯಾಗೋದು ಗ್ಯಾರಂಟಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News