ಬೆಂಗಳೂರು: ಕನ್ನಡ ಸಿನಿಮಾ 'ಕೆಜಿಎಫ್‌-2'‌ ರಿಲೀಸ್‌ಗೆ ಉಸಿರು ಬಿಗಿ ಹಿಡಿದು ಕಾಯುತ್ತಿದ್ದ ಅಭಿಮಾನಿಗಳಿಗೆ ಇವತ್ತು ಮರೆಯಲಾಗದ ದಿನ. ಕಾರಣ 4 ವರ್ಷದ ಬಳಿಕ ಕಡೆಗೂ 'ಕೆಜಿಎಫ್‌'‌ ಚಾಪ್ಟರ್‌ 2 ಕಣ್ತುಂಬಿಕೊಳ್ಳುವ ಭಾಗ್ಯ ಅಭಿಮಾನಿಗಳಿಗೆ ಒಲಿದು ಬಂದಿದೆ. ಹೀಗಾಗಿಯೇ ಅಭಿಮಾನಿಗಳು ತುಂಬಾ ಡಿಫರೆಂಟ್‌ ಆಗಿ, 'ಕೆಜಿಎಫ್‌-2'‌ ಬರಮಾಡಿಕೊಂಡರು. ಅದರಲ್ಲೂ ಬೆಂಗಳೂರಿನ ಹಲವು ಥಿಯೇಟರ್‌ಗಳ ಎದುರು ಮಧ್ಯರಾತ್ರಿ 12 ಗಂಟೆಗೆ ಫಸ್ಟ್‌ ಶೋ ಶುರುವಾಗಿದ್ದು, ಎಲ್ಲೆಲ್ಲೂ ಹಬ್ಬದ ವಾತಾವರಣ ಸೃಷ್ಟಿಯಾಗುವಂತೆ ಮಾಡಿತ್ತು.


COMMERCIAL BREAK
SCROLL TO CONTINUE READING

ಪಟಾಕಿ ಸಿಡಿಸಿ, ಯಶ್‌ ಕಟೌಟ್‌ಗೆ ಹಾಲಿನ ಅಭಿಷೇಕ ಮಾಡುವ ಮೂಲಕ 'ಕೆಜಿಎಫ್‌'‌ ಚಾಪ್ಟರ್‌ 2 ಎಂಟ್ರಿ ಸಂಭ್ರಮಿಸಿದ ಅಭಿಮಾನಿಗಳು. ಸಿನಿಮಾದ ಒಂದೊಂದು ಸೀನ್‌ ನೋಡಿದಾಗಲೂ ಕುಣಿದಾಡಿದರು. ಇನ್ನು ಶೋ ಮುಗಿದ ಬಳಿಕ ಪ್ರತಿಯೊಬ್ಬರ ಪ್ರತಿಕ್ರಿಯೆ ‌'ಸೂಪರ್'‌ ಅನ್ನೋದೆ ಆಗಿತ್ತು.


ಇದನ್ನೂ ಓದಿ- KGF 2 Release: 10 ಸಾವಿರ ಥಿಯೇಟರ್‌, ಕೋಟಿ ಕೋಟಿ ಅಭಿಮಾನಿಗಳು..! ಹೇಗಿದೆ 'ಕೆಜಿಎಫ್‌-2'‌ ಹವಾ..?


ತೆರೆಯಿತು 'ನರಾಚಿ'‌ ಬಾಗಿಲು
ಹಲವು ದಿನಗಳಿಂದ 'ಕೆಜಿಎಫ್‌'‌ ಚಾಪ್ಟರ್‌ 2 ಬರಮಾಡಿಕೊಳ್ಳಲು ಯಶ್ ಫ್ಯಾನ್ಸ್‌ ಕಾಯುತ್ತಿದ್ದರು. ಆದರೆ ಕೊರೊನಾ ಕಾರಣಕ್ಕೆ 'ಕೆಜಿಎಫ್‌'‌ ಚಾಪ್ಟರ್‌ 2 ಬಿಡುಗಡೆ ಒಂದಷ್ಟು ದಿನ ಮುಂದಕ್ಕೆ ಹೋಗುತ್ತಾ ಬಂದಿತ್ತು. ಆದರೆ ರಿಲೀಸ್‌ ಮಾಡಲು ಡೆಡ್‌ಲೈನ್‌ ಫಿಕ್ಸ್ ಮಾಡಿಕೊಂಡಿದ್ದ 'ಕೆಜಿಎಫ್‌'‌ ಚಾಪ್ಟರ್‌ 2 ಟೀಂ, ಏಪ್ರಿಲ್‌ 14ಕ್ಕೆ 'ನರಾಚಿ'‌ ಬಾಗಿಲು ತೆರೆಯುವ ಆಶ್ವಾಸನೆ ನೀಡಿತ್ತು. ಇಂದು ಆ ಆಶ್ವಾಸನೆ ಪೂರ್ಣಗೊಂಡಿದೆ.


ಇದನ್ನೂ ಓದಿ- KGF 2 Release: ಗರುಡ ಫಿನಿಶ್..‌ ಅಧೀರ ಉಡೀಸ್..!‌ ಹೇಗಿತ್ತು ಗೊತ್ತಾ ರಾಕಿಭಾಯ್‌ ರಿಯಲ್‌ ಸಾಮ್ರಾಜ್ಯ..?


ಕೋಟಿ ಕೋಟಿ ಅಭಿಮಾನಿಗಳು 'ಕೆಜಿಎಫ್‌'‌ ಚಾಪ್ಟರ್‌ 2 ನೋಡಲು ಕಾದು ಕುಳಿತಿದ್ದರು. ಅದ್ರಲ್ಲೂ ಮುಂಗಡ ಟಿಕೆಟ್‌ ಬುಕಿಂಗ್‌ ವಿಚಾರದಲ್ಲಿ 'ಕೆಜಿಎಫ್‌'‌ ಚಾಪ್ಟರ್‌ 2 ದೊಡ್ಡ ದಾಖಲೆ‌ ಸೃಷ್ಟಿಸಿದೆ. ಜೊತೆಗೆ ಮೊದಲ ದಿನದ ಗಳಿಕೆಯ ವಿಚಾರದಲ್ಲೂ ಹಲವು ದಾಖಲೆಗಳನ್ನು ಕನ್ನಡದ ಸಿನಿಮಾ ಮಾಡಿದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.