KGF 2 Release: 10 ಸಾವಿರ ಥಿಯೇಟರ್‌, ಕೋಟಿ ಕೋಟಿ ಅಭಿಮಾನಿಗಳು..! ಹೇಗಿದೆ 'ಕೆಜಿಎಫ್‌-2'‌ ಹವಾ..?

ಕನ್ನಡಿಗರ ಪಾಲಿನ ಪ್ರೀತಿಯ 'ಅಪ್ಪು'‌ ಅವರಿಗೆ ಗೌರವ ನಮನ ಸಲ್ಲಿಸುವ ಮೂಲಕ ಆರಂಭವಾಗುವ 'ಕೆಜಿಎಫ್‌-2'‌ ಚಿತ್ರ ಪ್ರತಿಯೊಂದು ಸೀನ್‌ನಲ್ಲೂ ಅಬ್ಬರಿಸಿದೆ. ಅದರಲ್ಲೂ ಅಭಿಮಾನಿಗಳ ಸಂಭ್ರಮಾಚರಣೆ ಎಲ್ಲೆಲ್ಲೂ ರಾರಾಜಿಸುತ್ತಿದೆ. ಕರುನಾಡು ಮಾತ್ರವಲ್ಲ, ಜಗತ್ತಿನಾದ್ಯಂತ ಇದೇ ರೀತಿಯ ಸಂಭ್ರಮಾಚರಣೆ ನಡೆಯುತ್ತಿದೆ. ಥಿಯೇಟರ್‌ಗಳು ತುಂಬಿ ತುಳುಕುತ್ತಿವೆ.

Written by - Malathesha M | Edited by - Yashaswini V | Last Updated : Apr 14, 2022, 05:56 AM IST
  • ರಾಕಿಭಾಯ್‌ ಎಂಟ್ರಿಗಾಗಿ 4 ವರ್ಷ ಕಾದಿದ್ದ ಅಭಿಮಾನಿಗಳಿಗೆ 10 ಸಾವಿರಕ್ಕೂ ಹೆಚ್ಚು ಸ್ಕ್ರೀನ್‌ಗಳು ಇಂದು ತೆರೆದುಕೊಂಡಿವೆ. '
  • ಥಿಯೇಟರ್‌ಗಳ ಎದುರು ಹಾಲಿನ ಅಭಿಷೇಕ, ಪಟಾಕಿ ಸಿಡಿಸಿ ರಾಕಿಂಗ್‌ ಸ್ಟಾರ್ ಯಶ್‌ ಹಾಗೂ 'ಕೆಜಿಎಫ್‌'‌ ಅಭಿಮಾನಿಗಳು ಸಂಭ್ರಮಿಸಿದ್ದಾರೆ.
  • ನರಾಚಿ'‌ ಬಾಗಿಲು ತೆರೆಯುತ್ತಿದ್ದಂತೆ ಕೋಟಿ ಕೋಟಿ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ.
KGF 2 Release: 10 ಸಾವಿರ ಥಿಯೇಟರ್‌, ಕೋಟಿ ಕೋಟಿ ಅಭಿಮಾನಿಗಳು..! ಹೇಗಿದೆ  'ಕೆಜಿಎಫ್‌-2'‌ ಹವಾ..? title=
KGF Chapter 2 Released

ಬೆಂಗಳೂರು: ಕನ್ನಡ ಸಿನಿಮಾಗಳು ಜಾಗತಿಕ ಮಟ್ಟದಲ್ಲಿ ಅಬ್ಬರಿಸುತ್ತಿವೆ. ಈ ಮೂಲಕ ಸ್ಯಾಂಡಲ್‌ವುಡ್‌ನ ಗತಕಾಲದ ವೈಭವ ಮರುಕಳಿಸಿದೆ. 'ಕೆಜಿಎಫ್‌-2'‌ ಸಿನಿಮಾ ಜಗತ್ತಿನಾದ್ಯಂತ ದೊಡ್ಡ ಸಂಚಲನ ಸೃಷ್ಟಿಸಿದ್ದು, ಸುಮಾರು 10 ಸಾವಿರಕ್ಕೂ ಹೆಚ್ಚು ಥಿಯೇಟರ್‌ಗಳಲ್ಲಿ ರಾಕಿಭಾಯ್‌ ಅಬ್ಬರ ಶುರುವಾಗಿದೆ. ಕರುನಾಡ ರಾಜಧಾನಿ ಬೆಂಗಳೂರಲ್ಲಿ ಮಧ್ಯರಾತ್ರಿ 12 ಗಂಟೆಗೆ 'ನರಾಚಿ'‌ಯ ಬಾಗಿಲು ತೆರೆದಿತ್ತು, ಹಾಗೇ ರಾಕಿಭಾಯ್‌ ಅಬ್ಬರವೂ ಶುರುವಾಗಿತ್ತು.

ಹೌದು, ಕಳೆದ ತಿಂಗಳು ಕರ್ನಾಟಕ ರತ್ನ ಡಾ.ಪುನೀತ್‌ ರಾಜ್‌ಕುಮಾರ್‌ ಅವರ  'ಜೇಮ್ಸ್'‌ ‌ಅಬ್ಬರ ಕಣ್ತುಂಬಿಕೊಂಡಿದ್ದ ಕನ್ನಡಿಗರಿಗೆ ಇದೀಗ 'ಕೆಜಿಎಫ್‌-2'‌ ಸಂಭ್ರಮ ಕಣ್ಣ ಎದುರು ಬಂದು ನಿಂತಿದೆ. 'ಕೆಜಿಎಫ್‌-1'‌ ಜಗತ್ತಿನಾದ್ಯಂತ ದೊಡ್ಡ ಹಿಟ್‌ ಕಂಡು, 'ಕೆಜಿಎಫ್‌-2'‌ ಯಾವಾಗ ರಿಲೀಸ್‌ ಆಗುತ್ತೋ ಅಂತಾ ಅಭಿಮಾನಿ ಬಳಗ ಕಾಯುತ್ತಿತ್ತು. ಇಂದು ಅಭಿಮಾನಿಗಳ ಆಸೆ ಈಡೇರಿದೆ.

ಇದನ್ನೂ ಓದಿ- ಕೆಜಿಎಫ್‌-2'ಗೆ ಶುಭಕೋರಿದ ಅಣ್ಣಾವ್ರ ಪುತ್ರ..! ಏನ್‌ ಹೇಳಿದ್ರು ದೊಡ್ಮನೆ ಕುಡಿ ರಾಘಣ್ಣ..?

ಎಲ್ಲೆಲ್ಲೂ ಹೌಸ್‌ಫುಲ್..!
ಕನ್ನಡಿಗರ ಪಾಲಿನ ಪ್ರೀತಿಯ 'ಅಪ್ಪು'‌ ಅವರಿಗೆ ಗೌರವ ನಮನ ಸಲ್ಲಿಸುವ ಮೂಲಕ ಆರಂಭವಾಗುವ 'ಕೆಜಿಎಫ್‌-2'‌ ಚಿತ್ರ ಪ್ರತಿಯೊಂದು ಸೀನ್‌ನಲ್ಲೂ ಅಬ್ಬರಿಸಿದೆ. ಅದರಲ್ಲೂ ಅಭಿಮಾನಿಗಳ ಸಂಭ್ರಮಾಚರಣೆ ಎಲ್ಲೆಲ್ಲೂ ರಾರಾಜಿಸುತ್ತಿದೆ. ಕರುನಾಡು ಮಾತ್ರವಲ್ಲ, ಜಗತ್ತಿನಾದ್ಯಂತ ಇದೇ ರೀತಿಯ ಸಂಭ್ರಮಾಚರಣೆ ನಡೆಯುತ್ತಿದೆ. ಥಿಯೇಟರ್‌ಗಳು ತುಂಬಿ ತುಳುಕುತ್ತಿವೆ.

ಇದನ್ನೂ ಓದಿ- ಅಪ್ಪಿ ತಪ್ಪಿಯೂ ನೀವು ಕೆಜಿಎಫ್ 2 ಚಿತ್ರ ನೋಡುವಾಗ ಹೀಗೆ ಮಾಡದಿರಿ !

ಥಿಯೇಟರ್‌ಗಳ ಎದುರು ಹಾಲಿನ ಅಭಿಷೇಕ, ಪಟಾಕಿ ಸಿಡಿಸಿ ರಾಕಿಂಗ್‌ ಸ್ಟಾರ್ ಯಶ್‌ ಹಾಗೂ 'ಕೆಜಿಎಫ್‌'‌ ಅಭಿಮಾನಿಗಳು ಸಂಭ್ರಮಿಸಿದ್ದಾರೆ. ರಾಕಿಭಾಯ್‌ ಎಂಟ್ರಿಗಾಗಿ 4 ವರ್ಷ ಕಾದಿದ್ದ ಅಭಿಮಾನಿಗಳಿಗೆ 10 ಸಾವಿರಕ್ಕೂ ಹೆಚ್ಚು ಸ್ಕ್ರೀನ್‌ಗಳು ಇಂದು ತೆರೆದುಕೊಂಡಿವೆ. 'ನರಾಚಿ'‌ ಬಾಗಿಲು ತೆರೆಯುತ್ತಿದ್ದಂತೆ ಕೋಟಿ ಕೋಟಿ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ. ಬಾಕ್ಸ್‌ ಆಫಿಸ್‌ ಸೇರಿದಂತೆ ಎಲ್ಲಾ ದಾಖಲೆಗಳನ್ನು 'ಕೆಜಿಎಫ್‌-2'‌ ಉಡೀಸ್‌ ಮಾಡಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News