KGF 2 Release: ಗರುಡ ಫಿನಿಶ್..‌ ಅಧೀರ ಉಡೀಸ್..!‌ ಹೇಗಿತ್ತು ಗೊತ್ತಾ ರಾಕಿಭಾಯ್‌ ರಿಯಲ್‌ ಸಾಮ್ರಾಜ್ಯ..?

ಚಿತ್ರವೊಂದು ಹೇಗಿರುತ್ತೆ ಅನ್ನೋದನ್ನ ಫಸ್ಟ್‌ ಶೋನಲ್ಲೇ ತಿಳಿಯಬಹುದು. ಹೀಗೆ 'ಕೆಜಿಎಫ್‌-2'‌ ಕೂಡ ಫಸ್ಟ್‌ ಶೋನಲ್ಲೇ ತನ್ನ ರೇಂಜ್‌ ಏನು ಅನ್ನೋದನ್ನ ಪ್ರೂವ್‌ ಮಾಡಿದೆ. ಮಧ್ಯರಾತ್ರಿ 12 ಗಂಟೆಗೆ ಶುರು ಆದ 'ಕೆಜಿಎಫ್‌-2'‌ ಮೊದಲ ಶೋ, ಅಭಿಮಾನಿಗಳ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಕೊಡುವ ಜೊತೆಗೆ ರಾಕಿಭಾಯ್‌ ಅಬ್ಬರಿಸಿದ್ದು ಹೇಗೆ ಅನ್ನೋದನ್ನೂ ತೋರಿಸಿದೆ.

Written by - Malathesha M | Edited by - Yashaswini V | Last Updated : Apr 14, 2022, 07:09 AM IST
  • ಒಂದೇ ಪದದಲ್ಲಿ ಹೇಳುವುದಾದರೆ 'ಕೆಜಿಎಫ್‌-2'‌ ಮತ್ತೊಂದು ಅದ್ಭುತ ಸಿನಿಮಾ.
  • ಖಡಕ್‌ ವಿಲನ್‌ ಗರುಡ ಹತ್ಯೆ ಬಳಿಕ ಮುಗಿದು ಹೋಗುವ 'ಕೆಜಿಎಫ್‌'‌ ಚಾಪ್ಟರ್‌ 1, ಹಲವರ ತಲೆಗೆ ಹುಳು ಬಿಟ್ಟು ಸದಾ ಕಾಡುತ್ತಿತ್ತು.
  • 'ಕೆಜಿಎಫ್‌'‌ ಚಾಪ್ಟರ್‌ 1 ಪಾತ್ರಗಳು ಇಡೀ ಜಗತ್ತನ್ನೇ ಆವರಿಸಿದ್ದವು.
KGF 2 Release: ಗರುಡ ಫಿನಿಶ್..‌ ಅಧೀರ ಉಡೀಸ್..!‌ ಹೇಗಿತ್ತು ಗೊತ್ತಾ ರಾಕಿಭಾಯ್‌ ರಿಯಲ್‌ ಸಾಮ್ರಾಜ್ಯ..? title=
KGF Chapter 2 Review

ಬೆಂಗಳೂರು: ಅದು 2018ರ ಡಿಸೆಂಬರ್‌ 21, ಅಂದು ಮೂಡಿದ್ದ ಬಿಲಿಯನ್‌ ಡಾಲರ್ ಪ್ರಶ್ನೆಗೆ ಇವತ್ತು ಉತ್ತರ ಸಿಕ್ಕಿದೆ. 'ಕೆಜಿಎಫ್‌'‌ ಎಂಬ ಸಿಡಿಲಬ್ಬರದ ಸಿನಿಮಾ ಕನ್ನಡ ಸಿನಿಮಾ ರಂಗವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದ ದಿನ 2018ರ ಡಿಸೆಂಬರ್‌ 21. ಆದರೆ ಅಂದು ಮೂಡಿದ್ದ ಅದೊಂದು ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು 'ಕೆಜಿಎಫ್‌'‌ ಫ್ಯಾನ್ಸ್ ಬರೋಬ್ಬರಿ‌ 4 ವರ್ಷಗಳ ಕಾಲ ಕಾಯಬೇಕಾಯಿತು. ಹಾಗಾದ್ರೆ ಗರುಡ ಹತ್ಯೆಯಾದ ನಂತರ 'ಕೆಜಿಎಫ್‌'‌ನಲ್ಲಿ ಏನಾಯ್ತು..? ರಾಕಿಭಾಯ್‌ ಬದುಕಿ ಉಳಿದನಾ..? ಅದನ್ನು ತಿಳಿಯಲು ಮುಂದೆ ಓದಿ.

ಒಂದೇ ಪದದಲ್ಲಿ ಹೇಳುವುದಾದರೆ 'ಕೆಜಿಎಫ್‌-2'‌ ಮತ್ತೊಂದು ಅದ್ಭುತ ಸಿನಿಮಾ. ಖಡಕ್‌ ವಿಲನ್‌ ಗರುಡ ಹತ್ಯೆ ಬಳಿಕ ಮುಗಿದು ಹೋಗುವ 'ಕೆಜಿಎಫ್‌'‌ ಚಾಪ್ಟರ್‌ 1, ಹಲವರ ತಲೆಗೆ ಹುಳು ಬಿಟ್ಟು ಸದಾ ಕಾಡುತ್ತಿತ್ತು. 'ಕೆಜಿಎಫ್‌'‌ ಚಾಪ್ಟರ್‌ 1 ಪಾತ್ರಗಳು ಇಡೀ ಜಗತ್ತನ್ನೇ ಆವರಿಸಿದ್ದವು. ಯಾವಾಗ 'ಕೆಜಿಎಫ್‌'‌ ಚಾಪ್ಟರ್‌ 2 ಬರುತ್ತೋ ಅಂತಾ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದರು. ಕಡೆಗೂ ಆ ದಿನ ಇಂದು ಬಂದೇ ಬಿಟ್ಟಿದೆ. ಗರುಡನ ತಲೆ ಉರುಳಿದ ನಂತರ ರಾಕಿಭಾಯ್‌ ಕಥೆ ಏನಾಯ್ತು ಅನ್ನೋದು ರಿವೀಲ್‌ ಆಗಿದೆ.

ಇದನ್ನೂ ಓದಿ- KGF 2 Release: 10 ಸಾವಿರ ಥಿಯೇಟರ್‌, ಕೋಟಿ ಕೋಟಿ ಅಭಿಮಾನಿಗಳು..! ಹೇಗಿದೆ 'ಕೆಜಿಎಫ್‌-2'‌ ಹವಾ..?

ಅಬ್ಬರಿಸಿದ ರಾಕಿಭಾಯ್..!‌
ಎಲ್ಲವೂ ಸೂಪರ್..‌ ಅಷ್ಟಕ್ಕೂ ಈ ಮಾತು ಹೇಳಿದ್ದು ಅಭಿಮಾನಿಗಳು. ಹೌದು, ಚಿತ್ರವೊಂದು ಹೇಗಿರುತ್ತೆ ಅನ್ನೋದನ್ನ ಫಸ್ಟ್‌ ಶೋನಲ್ಲೇ ತಿಳಿಯಬಹುದು. ಹೀಗೆ 'ಕೆಜಿಎಫ್‌-2'‌ ಕೂಡ ಫಸ್ಟ್‌ ಶೋನಲ್ಲೇ ತನ್ನ ರೇಂಜ್‌ ಏನು ಅನ್ನೋದನ್ನ ಪ್ರೂವ್‌ ಮಾಡಿದೆ. ಮಧ್ಯರಾತ್ರಿ 12 ಗಂಟೆಗೆ ಶುರು ಆದ 'ಕೆಜಿಎಫ್‌-2'‌ ಮೊದಲ ಶೋ, ಅಭಿಮಾನಿಗಳ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಕೊಡುವ ಜೊತೆಗೆ ರಾಕಿಭಾಯ್‌ ಅಬ್ಬರಿಸಿದ್ದು ಹೇಗೆ ಅನ್ನೋದನ್ನೂ ತೋರಿಸಿದೆ.

ರಾಕಿ.. ರಾಕಿ..!
ರಾಕಿಭಾಯ್‌ ಗರುಡನ ಕೊಲೆಗೈದು, ಕೆಜಿಎಫ್‌ ಸಾಮ್ರಾಜ್ಯದಲ್ಲಿ ಅಬ್ಬರಿಸಿ ಸಂಚಲನ ಸೃಷ್ಟಿಸುವುದನ್ನು ಇಲ್ಲಿ ಕಣ್ತುಂಬಿಕೊಳ್ಳಬಹುದು. ಪ್ರತಿಯೊಂದು ಸೀನ್‌ಗೂ 'ಕೆಜಿಎಫ್‌-2'‌ ತಂಡ ಪಟ್ಟಿರುವ ಕಷ್ಟವನ್ನೂ ನೋಡಬಹುದು. ಒಂದು ಲೆಕ್ಕದಲ್ಲಿ ಹೇಳುವುದಾದರೆ 'ಕೆಜಿಎಫ್‌-2'‌ ಸಿನಿಮಾದ ಪ್ರತಿಯೊಂದು ಸೀನ್‌ ಕೂಡ ಯಾವ ಹಾಲಿವುಡ್‌ ಸಿನಿಮಾಗೂ ಕಮ್ಮಿ ಇಲ್ಲ. ಎಲ್ಲೆಲ್ಲೂ ಅಬ್ಬರಿಸುತ್ತದೆ ಟೆಕ್ನಿಕಲ್‌ ಟೀಂನ ಪ್ರಾಮಾಣಿಕ ಪ್ರಯತ್ನ. ಇದರ ಜೊತೆಗೆ ರಾಕಿಭಾಯ್‌ ಪಂಚಿಂಗ್‌ ಡೈಲಾಗ್‌ ಮತ್ತು ರಾಕಿ ಕೊಡುವ ಶಾಕ್‌ಗಳು ಪ್ರೇಕ್ಷಕನ ಎದೆಯಲ್ಲಿ ಸಂಚಲನದ ಜೊತೆ, ಒಂದಷ್ಟು ಕಚಗುಳಿ ಇಡುತ್ತದೆ.

ಇದನ್ನೂ ಓದಿ- ಮೊದಲ ದಿನದಂದೇ ಆರ್ ಆರ್ ಆರ್ ದಾಖಲೆ ಧೂಳಿಪಟ ಮಾಡಲಿದೆ ಕೆಜಿಎಫ್ 2...!

ರಾಕಿಭಾಯ್‌ ಎಂಟ್ರಿಯೇ ಒಂದು ಅದ್ಭುತ. ನೋಡಲು ಎರಡು ಕಣ್ಣು ಸಾಲದು ಎಂಬಂತೆ ರಾಕಿಭಾಯ್‌ ಎಂಟ್ರಿಯನ್ನ ಚಿತ್ರಿಸಿದ್ದಾರೆ‌ ಡೈರೆಕ್ಟರ್ ಪ್ರಶಾಂತ್‌ ನೀಲ್.‌ ಹೀಗೆ ಪ್ರತಿಯೊಂದು ಸೀನ್‌ ಕೂಡ ಪ್ರೇಕ್ಷಕನ ಎದೆಬಡಿತ ಹಿಡಿದಿಟ್ಟುಕೊಳ್ಳುತ್ತದೆ. ಆದರೆ ಕ್ಲೈಮ್ಯಾಕ್ಸ್‌ ಏನಾಗುತ್ತೆ..? ರಾಕಿಭಾಯ್‌ ಕಥೆ ಏನಾಗುತ್ತೆ..? 'ಕೆಜಿಎಫ್‌'‌ ಚಾಪ್ಟರ್‌ 3 ಬರೋದು ಪಕ್ಕಾನಾ..? ಈ ಪ್ರಶ್ನೆಗಳಿಗೆ ನೀವು ಉತ್ತರ ಹುಡುಕಲು ಥಿಯೇಟರ್‌ಗೆ ಹೋಗಲೇಬೇಕು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News