ಬೆಂಗಳೂರು: ನಟ ಸುದೀಪ್‌ ಅಂದ್ರೆ ಫ್ಯಾನ್ಸ್‌ಗೆ ಸಿಕ್ಕಾಪಟ್ಟೆ ಪ್ರೀತಿ. ಅದೆಷ್ಟೋ ಸಿನಿ ಮಂದಿ ಪಾಲಿಗೂ ಕಿಚ್ಚ ಸುದೀಪ್‌ ಅವರೇ ಗಾಡ್‌ ಫಾದರ್.‌ ಸ್ಯಾಂಡಲ್‌ವುಡ್‌ನಿಂದ ಹಿಡಿದು ಹಾಲಿವುಡ್‌ ತನಕ ಈಗ ಕಿಚ್ಚ ಸುದೀಪ್‌ ಅವರದ್ದೇ ಸದ್ದು. ಇನ್ನೇನು ಕಿಚ್ಚ ಸುದೀಪ್‌ ನಟನೆಯ 'ವಿಕ್ರಾಂತ್‌ ರೋಣ' ರಿಲೀಸ್‌ಗೆ ರೆಡಿಯಾಗಿದ್ದು, ಈ ಹೊತ್ತಲ್ಲೇ ದೊಡ್ಡ ಸರ್ಪ್ರೈಸ್‌ ನೀಡಿದ್ದಾರೆ ಅಭಿಮಾನಿಗಳ ಪಾಲಿನ ಪ್ರೀತಿಯ ಅಭಿನಯ ಚಕ್ರವರ್ತಿ.


COMMERCIAL BREAK
SCROLL TO CONTINUE READING

ಕಿಚ್ಚ ಸುದೀಪ್‌ & ಅನೂಪ್ ಭಂಡಾರಿ ಕಾಂಬಿನೇಷನ್‌ನಲ್ಲಿ ಸದ್ಯ ವಿಕ್ರಾಂತ್‌ ರೋಣ ರಿಲೀಸ್‌ಗೆ ರೆಡಿಯಾಗಿದ್ದು, ಬಾಕ್ಸ್‌ ಆಫಿಸ್‌ನಲ್ಲಿ ದಾಖಲೆ ಸೃಷ್ಟಿಸಲು ಸಕಲ ರೀತಿಯಲ್ಲೂ ಸಜ್ಜಾಗಿದೆ. ಇದೇ ಸಿನಿಮಾದಲ್ಲಿ ಸ್ಪೆಷಲ್‌ ರೋಲ್‌ಗಾಗಿ ನಟಿ ಜಾಕ್ವೆಲಿನ್‌ ಫರ್ನಾಂಡಿಸ್‌‌ ಎಂಟ್ರಿಯಾಗಿದ್ದು, ಕನ್ನಡದಲ್ಲಿ ಮೊದಲ ಬಾರಿಗೆ ನಟಿಸಿದ್ದಾರೆ. ಮತ್ತೊಂದು ಕಡೆ ನಟಿ ಜಾಕ್ವೆಲಿನ್‌ ಫರ್ನಾಂಡಿಸ್‌ & ಕಿಚ್ಚ ಸುದೀಪ್‌ ನಡುವೆ ಉತ್ತಮ ಸ್ನೇಹವಿದ್ದು, ಜಾಕ್ವೆಲಿನ್‌ ಅವರಿಗೆ ಕೊಟ್ಟ ಮಾತನ್ನ ಉಳಿಸಿಕೊಳ್ಳಲು ನಟ ಕಿಚ್ಚ ಸುದೀಪ್‌ ಇದೇ ಮೊದಲ ಬಾರಿಗೆ ರೀಲ್ಸ್‌ ಮಾಡಿ ಫ್ಯಾನ್ಸ್‌ಗೆ ಸರ್ಪ್ರೈಸ್‌ ನೀಡಿದ್ದಾರೆ.


ಇದನ್ನೂ ಓದಿ: ವಿಕ್ರಾಂತ್ ರೋಣ’ ಸಾಂಗ್‌ ರಿಲೀಸ್..!‌ ಅಭಿನಯ ಚಕ್ರವರ್ತಿ ಅಭಿಮಾನಿಗಳ ಸಂಭ್ರಮಾಚರಣೆ..!ಕಿಚ್ಚನ ಕನ್ನಡ ಚಾಲೆಂಜ್ ಸ್ವೀಕರಿಸಿದ ಶ್ರೀಲಂಕಾ ಬೆಡಗಿ ಜಾಕ್ವೆಲಿನ್..!


ಒಟ್ಟಾರೆ ಹೇಳೋದಾದರೆ 'ವಿಕ್ರಾಂತ್‌ ರೋಣ' ಸಿನಿಮಾ ಮೊದಲ ಹಾಡಿನ ಮೂಲಕ ಸಿನಿಪ್ರಿಯರ ಮನ ಗೆದ್ದಿದ್ದು, ಕಿಚ್ಚ ಸುದೀಪ್‌ ತಮ್ಮದೇ ಸಿನಿಮಾ ಹಾಡಿಗೆ ಮೊದಲ ಬಾರಿಗೆ ರೀಲ್ಸ್‌ ಮಾಡಿರುವುದು ಅಭಿಮಾನಿಗಳಿಗೆ ಮತ್ತಷ್ಟು ಇಷ್ಟವಾಗಿದೆ.  'ವಿಕ್ರಾಂತ್‌ ರೋಣ' ರಿಲೀಸ್‌ಗೆ ಕೌಂಟ್‌ಡೌನ್ ಶುರುವಾಗಿದ್ದು, ದಿನಕ್ಕೊಂದು ಸರ್ಪ್ರೈಸ್‌ ಮೂಲಕ  'ವಿಕ್ರಾಂತ್‌ ರೋಣ' ಟೀಂ ಅಭಿಮಾನಿಗಳ ಮನರಂಜಿಸುತ್ತಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.