ವಿಕ್ರಾಂತ್ ರೋಣ’ ಸಾಂಗ್‌ ರಿಲೀಸ್..!‌ ಅಭಿನಯ ಚಕ್ರವರ್ತಿ ಅಭಿಮಾನಿಗಳ ಸಂಭ್ರಮಾಚರಣೆ..!

ಜಗತ್ತಿನಾದ್ಯಂತ ಹೈಪ್‌ ಕ್ರಿಯೇಟ್‌ ಮಾಡಿ, ಅಭಿಮಾನಿಗಳ ಎದೆಬಡಿತ ಹೆಚ್ಚಿಸಿರುವ ‘ವಿಕ್ರಾಂತ್ ರೋಣ’ ಸಿನಿಮಾದ ಮೊದಲ ಹಾಡು ಇಂದು ಭರ್ಜರಿಯಾಗಿ ರಿಲೀಸ್‌ ಆಗಿದೆ. 

Written by - Malathesha M | Edited by - Manjunath N | Last Updated : May 23, 2022, 03:34 PM IST
  • ಜಗತ್ತಿನಾದ್ಯಂತ ಹೈಪ್‌ ಕ್ರಿಯೇಟ್‌ ಮಾಡಿ, ಅಭಿಮಾನಿಗಳ ಎದೆಬಡಿತ ಹೆಚ್ಚಿಸಿರುವ ‘ವಿಕ್ರಾಂತ್ ರೋಣ’ ಸಿನಿಮಾದ ಮೊದಲ ಹಾಡು ಇಂದು ಭರ್ಜರಿಯಾಗಿ ರಿಲೀಸ್‌ ಆಗಿದೆ.
  • ಸರಿಯಾಗಿ ಮಧ್ಯಾಹ್ನ 3 ಗಂಟೆ 5 ನಿಮಿಷಕ್ಕೆ ‘ರಾ ರಾ ರಕ್ಕಮ್ಮ’ ಸಾಂಗ್‌ ರಿಲೀಸ್‌ ಆಗಿದೆ.
ವಿಕ್ರಾಂತ್ ರೋಣ’ ಸಾಂಗ್‌ ರಿಲೀಸ್..!‌ ಅಭಿನಯ ಚಕ್ರವರ್ತಿ ಅಭಿಮಾನಿಗಳ ಸಂಭ್ರಮಾಚರಣೆ..! title=

ಬೆಂಗಳೂರು: ಜಗತ್ತಿನಾದ್ಯಂತ ಹೈಪ್‌ ಕ್ರಿಯೇಟ್‌ ಮಾಡಿ, ಅಭಿಮಾನಿಗಳ ಎದೆಬಡಿತ ಹೆಚ್ಚಿಸಿರುವ ‘ವಿಕ್ರಾಂತ್ ರೋಣ’ ಸಿನಿಮಾದ ಮೊದಲ ಹಾಡು ಇಂದು ಭರ್ಜರಿಯಾಗಿ ರಿಲೀಸ್‌ ಆಗಿದೆ. ಸರಿಯಾಗಿ ಮಧ್ಯಾಹ್ನ 3 ಗಂಟೆ 5 ನಿಮಿಷಕ್ಕೆ ‘ರಾ ರಾ ರಕ್ಕಮ್ಮ’ ಸಾಂಗ್‌ ರಿಲೀಸ್‌ ಆಗಿದ್ದು, ಇಂಟರ್‌ನೆಟ್‌ನಲ್ಲಿ ಸುನಾಮಿ ಎಬ್ಬಿಸಿದೆ. ನಟ ಕಿಚ್ಚ ಸುದೀಪ್‌ ಅವರ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ. ಮತ್ತೊಂದು ರೆಕಾರ್ಡ್‌ ಕ್ರಿಯೇಟ್‌ ಮಾಡಲು ಕನ್ನಡ ಸಿನಿಮಾ ‘ವಿಕ್ರಾಂತ್ ರೋಣ’ ಸಿದ್ಧವಾಗಿದೆ.

ಅಂದಹಾಗೆ ‘ವಿಕ್ರಾಂತ್ ರೋಣ’ ಜುಲೈ 28ಕ್ಕೆ ರಿಲೀಸ್‌ ಆಗುತ್ತಿದ್ದು, ಚಿತ್ರತಂಡ ಭರ್ಜರಿ ಪ್ರಚಾರ ನಡೆಸುತ್ತಿದೆ.ಇನ್ನು ಇದೇ ಸಿನಿಮಾದಲ್ಲಿ ಬಾಲಿವುಡ್ ಬೆಡಗಿ ಜಾಕ್ವೆಲಿನ್ ಫರ್ನಾಂಡಿಸ್ ನಟಿಸಿದ್ದು, ಮೊದಲ ಬಾರಿ ಕನ್ನಡ ಸಿನಿಮಾದಲ್ಲಿ ಆಕ್ಟಿಂಗ್‌ ಮಾಡಿದ್ದಾರೆ. ‘ವಿಕ್ರಾಂತ್ ರೋಣ’ ಸಿನಿಮಾದಲ್ಲಿ ಜಾಕ್ವೆಲಿನ್‌ ಪಾತ್ರದ ಹೆಸರು ಗಡಂಗ್ ರಕ್ಕಮ್ಮ. ಹೀಗಾಗಿ ಇದೇ ಹೆಸರನ್ನು ಬಳಸಿ ‘ರಾ ರಾ ರಕ್ಕಮ್ಮ..’ ಎಂಬ ಸ್ಪೆಷಲ್‌ ಸಾಂಗ್ ಶೂಟ್‌ ಮಾಡಲಾಗಿತ್ತು. ಇಂದು ಮಧ್ಯಾಹ್ನ 3 ಗಂಟೆ 5 ನಿಮಿಷಕ್ಕೆ ‘ರಾ ರಾ ರಕ್ಕಮ್ಮ..’ ರಿಲೀಸ್‌ ಆಗಿ ಟ್ರೆಂಡ್‌ ಕ್ರಿಯೇಟ್‌ ಮಾಡಿದೆ.

ಇದನ್ನೂ ಓದಿ: ರಕ್ತಸಿಕ್ತ ಕೈಯಲ್ಲಿ ಲಾಂಗ್ ಹಿಡಿದು ವಸಿಷ್ಠ ಎಂಟ್ರಿ.. ʻLove..ಲಿʼ ರಾ ಲುಕ್‌ಗೆ ಫ್ಯಾನ್ಸ್‌ ಫಿದಾ!

ಕುಣಿದಾಡಿದ ಫ್ಯಾನ್ಸ್..!‌ 

‘ರಾ ರಾ ರಕ್ಕಮ್ಮ..’ ಸಾಂಗ್‌ ಎಷ್ಟು ಜಬರ್ದಸ್ತ್ ಆಗಿದೆ ಅಂದ್ರೆ, ಒಂದೊಂದು ಬೀಟ್‌ಗೂ ಅಭಿಮಾನಿಗಳು ಫಿದಾ ಆಗಿದ್ದಾರೆ. ಇನ್ನು ಲಿರೀಕ್ಸ್‌ ಬಗ್ಗೆ ಬೇರೆ ಮಾತೇ ಬೇಡ. ಒಟ್ಟಾರೆ ‘ರಾ ರಾ ರಕ್ಕಮ್ಮ..’ ಸಾಂಗ್‌ ‘ವಿಕ್ರಾಂತ್ ರೋಣ’ ಎಂಟ್ರಿಗೂ ಮುನ್ನ ನಿರೀಕ್ಷೆಗಳ ಭಾರವನ್ನ ಮುಗಿಲೆತ್ತರಕ್ಕೆ ಕೊಂಡೊಯ್ದಿದೆ. ಕೆಲವೇ ದಿನಗಳಲ್ಲಿ ‘ವಿಕ್ರಾಂತ್ ರೋಣ’ ಸಿಲ್ವರ್‌ ಸ್ಕ್ರೀನ್‌ ಮೇಲೆ ಕಮಾಲ್‌ ಮಾಡಲು ಎಂಟ್ರಿ ಕೊಡಲಿದ್ದು, ಅಭಿಮಾನಿಗಳು ಈ ಸಂಭ್ರಮದ ಕ್ಷಣಕ್ಕಾಗಿ ಉಸಿರು ಬಿಗಿ ಹಿಡಿದು ಕಾಯುತ್ತಿದ್ದಾರೆ.

ಇದನ್ನೂ ಓದಿ: ʼವಿಕ್ರಾಂತ್‌ ರೋಣಾʼ ನೋಡಿದ ರಾಮ್‌ಗೋಪಾಲ್‌ ವರ್ಮಾ ಸಿನಿರಂಗಕ್ಕೆ ಎಚ್ಚರಿಕೆ ಕೊಟ್ಟಿದ್ಯಾಕೆ?

ಇದಿಷ್ಟೇ ಅಲ್ಲ, ಇಂದು ಮಧ್ಯಾಹ್ನ ಅಂದ್ರೆ ಮೇ 23ರ ಮಧ್ಯಾಹ್ನ 3 ಗಂಟೆ 5 ನಿಮಿಷಕ್ಕೆ ಕನ್ನಡದಲ್ಲಿ ‘ರಾ ರಾ ರಕ್ಕಮ್ಮ..’ ಹಾಡು ರಿಲೀಸ್‌ ಆಗಿದ್ದರೆ. ನಾಳೆ ಅಂದ್ರೆ ಮೇ 24ರಿಂದ ಕ್ರಮವಾಗಿ ದಿನಕ್ಕೊಂದು ಭಾಷೆಯಲ್ಲಿ ಹಾಡು ರಿಲೀಸ್‌ ಆಗಲಿದೆ. ಹೀಗೆ ಒಟ್ಟು 5 ಭಾಷೆಗಳಲ್ಲಿ ಸಾಂಗ್‌ ಕಮಾಲ್‌ ಮಾಡಲಿದೆ. ಮೇ 24ರ ಮಧ್ಯಾಹ್ನ 1 ಗಂಟೆ 5 ನಿಮಿಷಕ್ಕೆ ಹಿಂದಿ, 25ರ ಮಧ್ಯಾಹ್ನ 1 ಗಂಟೆ 5 ನಿಮಿಷಕ್ಕೆ ತೆಲುಗು, 26ರ ಮಧ್ಯಾಹ್ನ 1 ಗಂಟೆ 5 ನಿಮಿಷಕ್ಕೆ ತಮಿಳು ಹಾಗೂ 27ರ ಮಧ್ಯಾಹ್ನ 1 ಗಂಟೆ 5 ನಿಮಿಷಕ್ಕೆ ಮಲಯಾಳಂನಲ್ಲಿ ‘ವಿಕ್ರಾಂತ್ ರೋಣ’ ಸಿನಿಮಾದ ‘ರಾ ರಾ ರಕ್ಕಮ್ಮ..’ ಸಾಂಗ್‌ ರಿಲೀಸ್‌ ಆಗಲಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News