ಕಿಚ್ಚನ ಕನ್ನಡ ಚಾಲೆಂಜ್ ಸ್ವೀಕರಿಸಿದ ಶ್ರೀಲಂಕಾ ಬೆಡಗಿ ಜಾಕ್ವೆಲಿನ್..!

'ಕಿಚ್ಚ ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ.ಪ್ರತಿಯೊಬ್ಬರೂ ಕೂಡ ಕಿಚ್ಚ ಸುದೀಪ್ ರನ್ನ ಇಷ್ಟಪಡುತ್ತಾರೆ. ಅವರ ಅವರ ನಟನೆ ವ್ಯಕ್ತಿತ್ವ ಎಲ್ಲರಿಗೂ ತಟ್ಟನೆ ಇಷ್ಟವಾಗುತ್ತೆ. ಒಂದು ಸಮಾಜಸೇವೆಯನ್ನು ಕೂಡ ಮಾಡ್ತಾರೆ.ಬರೀ ಕರ್ನಾಟಕವಷ್ಟೇ ಅಲ್ಲದೆ ಎಲ್ಲೆಡೆ ಅಭಿಮಾನಿ ಬಳಗವನ್ನು ಹೊಂದಿದ್ದಾರೆ ಕಿಚ್ಚ.

Written by - YASHODHA POOJARI | Edited by - Manjunath N | Last Updated : May 27, 2022, 07:47 PM IST
  • ಇದ್ರಲ್ಲಿ ಕಿಚ್ಚ ಸುದೀಪ್ ಗೆ ಇರೋ ಕನ್ನಡ ಪ್ರೇಮ ಎಂತದ್ದು ಅನ್ನೋದು ಅರಿವಿಗೆ ಬರುತ್ತೆ.
  • ಸ್ಟಾರ್ ಆದ್ರೆ ಸಾಕು ನಾವು ನಿಂತ ನೆಲವನ್ನೇ ಮರೆಯೋ ಮಂದಿ ಸಾಕಷ್ಟು ಮಂದಿಯಿದ್ದಾರೆ.ಆದ್ರೆ ಕಿಚ್ಚ ಮಾತ್ರ ಎಲ್ಲರಿಗೂ ಮಾದರಿಯಾಗೋ ವ್ಯಕ್ತಿ ಅಂದ್ರೆ ತಪ್ಪಾಗಲ್ಲ.
  ಕಿಚ್ಚನ ಕನ್ನಡ ಚಾಲೆಂಜ್ ಸ್ವೀಕರಿಸಿದ ಶ್ರೀಲಂಕಾ ಬೆಡಗಿ ಜಾಕ್ವೆಲಿನ್..! title=
Photo Courtsey: Twitter

ಬೆಂಗಳೂರು: 'ಕಿಚ್ಚ ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ.ಪ್ರತಿಯೊಬ್ಬರೂ ಕೂಡ ಕಿಚ್ಚ ಸುದೀಪ್ ರನ್ನ ಇಷ್ಟಪಡುತ್ತಾರೆ. ಅವರ ಅವರ ನಟನೆ ವ್ಯಕ್ತಿತ್ವ ಎಲ್ಲರಿಗೂ ತಟ್ಟನೆ ಇಷ್ಟವಾಗುತ್ತೆ. ಒಂದು ಸಮಾಜಸೇವೆಯನ್ನು ಕೂಡ ಮಾಡ್ತಾರೆ.ಬರೀ ಕರ್ನಾಟಕವಷ್ಟೇ ಅಲ್ಲದೆ ಎಲ್ಲೆಡೆ ಅಭಿಮಾನಿ ಬಳಗವನ್ನು ಹೊಂದಿದ್ದಾರೆ ಕಿಚ್ಚ.

ಕಿಚ್ಚ ಸುದೀಪ್ ಬಗ್ಗೆ ಎಷ್ಟು ಹೇಳಿದ್ರೂ ಸಾಲಲ್ಲ ಬಿಡಿ. ಪದಗಳು ಕೂಡ ಸಾಲೋದಿಲ್ಲ.ತಾವಾಯಿತು ತಮ್ಮ ಕೆಲಸವಾಯಿತು ಅನ್ನೋ ಹಾಗೇ ಇರುತ್ತಾರೆ ಸುದೀಪ್.ಏನೇ ವಿಚಾರವಿದ್ದರೂ ಅದನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಾರೆ.ಇದೀಗ ಒಂದು ವಿಡಿಯೋ ಶೇರ್ ಮಾಡಿ ಅಭಿಮಾನಿಗಳಿಗೆ ಖುಷಿ ಕೊಟ್ಟಿದ್ದಾರೆ.ಇದ್ರಲ್ಲಿ ಕಿಚ್ಚ ಸುದೀಪ್ ಗೆ ಇರೋ ಕನ್ನಡ ಪ್ರೇಮ ಎಂತದ್ದು ಅನ್ನೋದು ಅರಿವಿಗೆ ಬರುತ್ತೆ. ಸ್ಟಾರ್ ಆದ್ರೆ ಸಾಕು ನಾವು ನಿಂತ ನೆಲವನ್ನೇ ಮರೆಯೋ ಮಂದಿ ಸಾಕಷ್ಟು ಮಂದಿಯಿದ್ದಾರೆ.ಆದ್ರೆ ಕಿಚ್ಚ ಮಾತ್ರ ಎಲ್ಲರಿಗೂ ಮಾದರಿಯಾಗೋ ವ್ಯಕ್ತಿ ಅಂದ್ರೆ ತಪ್ಪಾಗಲ್ಲ.ಯಾಕಂದ್ರೆ ಬಾಲಿವುಡ್ ನಟಿ ರಾ ರಾ ರಕ್ಕಮ್ಮ ಜಾಕ್ವೆಲಿನ್ ಗೆ ಕನ್ನಡದಲ್ಲಿ ಮಾತನಾಡುವಂತೆ ಪ್ರೆರೇಪಿಸಿದ್ದಾರೆ ಕಿಚ್ಚ.

ಇದನ್ನೂ ಓದಿ: 'ವ್ಹೀಲ್‌ಚೇರ್' ಮೇಲೆ ಕೂತು ಹೊಟ್ಟೆ ನೋಯುವಂತೆ ನಗಿಸುತ್ತಾನೆ 'ರೋಮಿಯೋ'..!

ವಿಕ್ರಾಂತ್ ರೋಣ' ಕಿಚ್ಚ ಸುದೀಪ್ ಅಭಿನಯದ ಬಹುನೀರಿಕ್ಷೆಯ ಸಿನಿಮಾ. ಜೂಲೈ 28 ರಂದು ಈ ಸಿನಿಮಾ ಭರ್ಜರಿಯಾಗಿ ತೆರೆಮೇಲೆ ಅಪ್ಪಳಿಸೋಕೆ ಸಕಲ ರೀತಿಯಲ್ಲಿ ಸಜ್ಜಾಗಿದೆ.ಮೊನ್ನೆಮೊನ್ನೆಯಷ್ಟೇ ರಿಲೀಸ್ ಆದ "ರಾ ರಾ ರಕ್ಕಮ್ಮ" ಹಾಡು ನಿದ್ದೆಯಲ್ಲಿದ್ದರೂ ಎಚ್ಚರಿಸಿ ಕುಣಿಸುವಂತೆ ಮಾಡಿಬಿಟ್ಟಿದೆ. ಪ್ರತಿಯೊಬ್ಬರ ಬಾಯಲ್ಲೂ ರಾ ರಾ ರಕ್ಕಮ್ಮ ಹಾಡು ಓಡಾಡುತ್ತಿದೆ.

ಇದನ್ನೂ ಓದಿ: RCB vs RR ಫೈನಲ್‌ ಮ್ಯಾಚ್ ಬಗ್ಗೆ ಆಘಾತಕಾರಿ ಹೇಳಿಕೆ ನೀಡಿದ ರವಿ ಶಾಸ್ತ್ರಿ

ವಿಶ್ವದ್ಯಾಂತ್ಯ ತೆರೆ ಕಾಣುತ್ತಿರೋ ಈ ಸಿನಿಮಾ ಬಗ್ಗೆ ದಿನದಿಂದ ದಿನಕ್ಕೆ ನಿರೀಕ್ಷೆ ಹೆಚ್ಚಾಗಿದೆ.ವಿಕ್ರಾಂತ್ ರೋಣ ಸಿನಿಮಾದ ನಿರ್ದೇಶಕ ಅನೂಪ್ ಭಂಡಾರಿ ಮ್ಯಾಜಿಕ್ ಮಾಡಿದ್ದಾರೆ.ಜಾಕ್ ಮಂಜು ನಿರ್ಮಿಸಿದ್ದಾರೆ.ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನವಿದೆ.

ಈಗ ಮ್ಯಾಟರ್ ಏನಪ್ಪಾ ಅಂದ್ರೆ "ರಾ ರಾ ರಕ್ಕಮ್ಮ" ಹಾಡು ಹಿಟ್ ಆದ ಬಳಿಕ ಕಿಚ್ಚ ಸುದೀಪ್ ಜಾಕ್ವೆಲಿನ್ ಫರ್ನಾಂಡಿಸ್ ಗೆ ವಿಡಿಯೋ ಕಾಲ್ ಮಾಡಿ ಸಾಂಗ್ ಜನಪ್ರಿಯತೆ ಆದ ವಿಚಾರವನ್ನ ತುಂಬಾ ಸ್ವೀಟ್ ಆಗಿ ಹಂಚಿ ಕೊಂಡಿದ್ದಾರೆ.ಜಾಕ್ವೆಲಿನ್ ಈ ಸಂದರ್ಭದಲ್ಲಿ ರಾ ರಾ ರಕ್ಕಮ್ಮ ಹಾಡಿಗೆ ರೀಲ್ಸ್ ಮಾಡುವಂತೆ ಕಿಚ್ಚನಿಗೆ ಕೇಳಿಕೊಂಡಿದ್ದಾರೆ.ಆಗ ಸುದೀಪ್ ಒಂದು ಷರತ್ತಿನ ಮೇಲೆ ವಿಡಿಯೋ ಮಾಡುವುದಾಗಿ ತಿಳಿಸಿದ್ದಾರೆ.ಅದೇನಪ್ಪ ಅಂದ್ರೆ ಕನ್ನಡದ ಸಾಲನ್ನ ಪುನರುಚ್ಚಾರ ಮಾಡುವಂತೆ ಹೇಳಿದ್ದಾರೆ.ಕರ್ನಾಟಕದ ಎಲ್ಲಾ ನನ್ನ ಸ್ನೇಹಿತರಿಗೆ ಈ ಜಾಕ್ವಲಿನ್ ಮಾಡುವ ನಮಸ್ಕಾರಗಳು.ರಕ್ಕಮ್ಮ ಬೇಗ ಬರ್ತಾ ಇದೀನಿ ಎಂದು ಕನ್ನಡದಲ್ಲಿ ಹೇಳುವಂತೆ ತಿಳಿಸಿದ್ದಾರೆ ಸುದೀಪ್.

ಇದನ್ನೂ ಓದಿ: ನವೀನ್ ಶಂಕರ್ ಈಗ "ಕ್ಷೇತ್ರಪತಿ"... ಇದರ ಅರ್ಥ ಏನು ಗೊತ್ತಾ..!?

ಉದ್ದನೆಯ ಸಾಲನ್ನ ಪುನರುಚ್ಛಾರ ಮಾಡುವುದು ಸ್ವಲ್ಪ ಕಷ್ಟ ಅಂತ ಹೇಳುತ್ತಲೇ ಕ್ಯೂಟ್ ಕ್ಯೂಟ್ ಆಗಿ ಪ್ರಯತ್ನಿಸಿದ್ದಾರೆ ನಟಿ ಜಾಕ್ಲಿನ್ ಫರ್ನಾಡಿಸ್.ಇದಾದ ಬಳಿಕ ಜಾಕ್ವೆಲಿನ್ ಫರ್ನಾಂಡಿಸ್ ಹೇಳಿದಂತೆ ರಿಲೀಸ್ ಮಾಡೋದಕ್ಕೆ ಕಿಚ್ಚ ಸುದೀಪ್ ಒಪ್ಪಿಕೊಂಡಿದ್ದಾರೆ.ಇದೀಗ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಕಿಚ್ಚನ ಮಾತಿಗೆ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News