ಪದವಿ ಪೂರ್ವ ಪ್ರೇಮಿಗಳ ʼಯಾಕೆ ಸಿಕ್ಕೆʼ ಸಾಂಗ್ ರಿಲೀಸ್ ಮಾಡಿದ ಕಿಚ್ಚ..!
ಸ್ಯಾಂಡಲ್‌ವುಡ್‌ನಲ್ಲಿ ಹೊಸ ಹೊಸ ಪ್ರಯೋಗಾತ್ಮಕ ಸಿನಿಮಾಗಳು ಬಿಡುಗಡೆಯಾಗಿ ದೇಶಾದ್ಯಂತ ಸಿನಿ ಪ್ರೇಕ್ಷಕರ ಗಮನಸೆಳೆಯುವಲ್ಲಿ ಯಶಸ್ವಿಯಾಗುತ್ತಿವೆ. ಇನ್ನು ಮುಂಗಾರು ಮಳೆಯಂತಹ ಅದ್ಭುತ ಸಿನಿಮಾ ನಿರ್ದೇಶಿಸಿ ಕನ್ನಡಿಗರ ಮನಗೆದ್ದಿದ್ದ ಯೋಗರಾಜ್ ಭಟ್ ಅವರು ಇದೀಗ ನಿರ್ಮಾಪಕರಾಗಿದ್ದು, ʼಪದವಿ ಪೂರ್ವʼ ಎಂಬ ಲವ್ ಸ್ಟೋರಿ ನಿರ್ಮಾಣಮಾಡಿದ್ದಾರೆ. ಇತ್ತೀಚಿಗೆ ಸಿನಿಮಾದ ಹಾಡು ಒಂದನ್ನು ಕಿಚ್ಚ ಸುದೀಪ್ ಅವರು ಬಿಡುಗಡೆ ಮಾಡಿದರು.
Kiccha Sudeep : ಸ್ಯಾಂಡಲ್‌ವುಡ್‌ನಲ್ಲಿ ಹೊಸ ಹೊಸ ಪ್ರಯೋಗಾತ್ಮಕ ಸಿನಿಮಾಗಳು ಬಿಡುಗಡೆಯಾಗಿ ದೇಶಾದ್ಯಂತ ಸಿನಿ ಪ್ರೇಕ್ಷಕರ ಗಮನಸೆಳೆಯುವಲ್ಲಿ ಯಶಸ್ವಿಯಾಗುತ್ತಿವೆ. ಇನ್ನು ಮುಂಗಾರು ಮಳೆಯಂತಹ ಅದ್ಭುತ ಸಿನಿಮಾ ನಿರ್ದೇಶಿಸಿ ಕನ್ನಡಿಗರ ಮನಗೆದ್ದಿದ್ದ ಯೋಗರಾಜ್ ಭಟ್ ಅವರು ಇದೀಗ ನಿರ್ಮಾಪಕರಾಗಿದ್ದು, ʼಪದವಿ ಪೂರ್ವʼ ಎಂಬ ಲವ್ ಸ್ಟೋರಿ ನಿರ್ಮಾಣಮಾಡಿದ್ದಾರೆ. ಇತ್ತೀಚಿಗೆ ಸಿನಿಮಾದ ಹಾಡು ಒಂದನ್ನು ಕಿಚ್ಚ ಸುದೀಪ್ ಅವರು ಬಿಡುಗಡೆ ಮಾಡಿದರು.
ಯೋಗರಾಜ್ ಭಟ್ ಅವರ ಗರಡಿಯಲ್ಲಿ ಪಳಗಿರುವ ನಿರ್ದೇಶಕ ಹರಿಪ್ರಸಾದ್ ಪದವಿ ಪೂರ್ವಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಈ ಸಿನಿಮಾದ ʼಯಾಕೆ ಸಿಕ್ಕೆʼ ಎಂಬ ಪ್ರಣಯ ಗೀತೆಯನ್ನು ಅಭಿನಯ ಚಕ್ರವರ್ತಿ ಬಾದ್ ಶಾ ಕಿಚ್ಚ ಸುದೀಪ್ ಅವರಿಂದ ಬಿಡುಗಡೆ ಮಾಡಿಸಲಾಯಿತು. ಸುದೀಪ್, ತಮ್ಮ ನೆಚ್ಚಿನ ನಿರ್ದೇಶಕ ಯೋಗರಾಜ್ ಭಟ್ ರವಿಶ್ಯಾಮನೂರು ನಿರ್ಮಾಣದ ಹದಿಹರೆಯದ ಕಾಲೇಜು, ಫ್ರೆಂಡ್ ಶಿಫ್, ಪ್ರೇಮ ಕಾವ್ಯ ಪದವಿ ಪೂರ್ವ ಚಿತ್ರದ ರೊಮ್ಯಾಂಟಿಕ್ ಸಾಂಗ್‌ನ ರಿಲೀಸ್ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ರು.
ಇದನ್ನೂ ಓದಿ: ರಜನಿ 72ನೇ ವರ್ಷದ ಬರ್ತ್‌ಡೇಗೆ ಬಿಗ್ ಗಿಫ್ಟ್ : ʼತಲೈವಾ 171ʼ ಸೀಕ್ರೆಟ್ ರಿವೀಲ್..!
ಕಿಚ್ಚ ಸುದೀಪ್ ಅವರ ನಿವಾಸದಲ್ಲಿ ಸಾಂಗ್ ರಿಲೀಸ್ ಮಾಡಲಾಯಿತು. ಈ ವೇಳೆ ಯೋಗರಾಜ್ ಭಟ್, ನಿರ್ದೇಶಕ ಹರಿಪ್ರಸಾದ್ ಜಯಣ್ಣ, ನಾಯಕಿ ಪೃಥ್ವಿ ಶ್ಯಾಮನೂರು, ನಾಯಕಿ ಅಂಜಲಿ ಅನೀಶ್ ಇದ್ದರು. ಪದವಿ ಪೂರ್ವ ಚಿತ್ರದ ಪ್ರಮೋಷನ್ಸ್ ಜೋರಾಗೇ ನಡೀತಿದ್ದು, ಸಿನಿಮಾ ಇದೇ ತಿಂಗಳು ಅಂದ್ರೆ ಡಿಸೆಂಬರ್ 30ರಂದು ರಾಜ್ಯಾದ್ಯಂತ ತೆರೆಕಾಣಲಿದೆ. ಮೊದಲ ಬಾರಿಗೆ ಪೃಥ್ವಿ ಶಾಮನೂರು ನಾಯಕ ನಟನಾಗಿ ನಟಿಸಿದ್ದು, ಪ್ರೇಕ್ಷಕರು ಭಟ್ಟರ ಸಿನಿಮಾಗೆ ಹೇಗೆ ಪ್ರತಿಕ್ರಿಯೆ ನೀಡ್ತಾರೆ ಅಂತ ಕಾಯ್ದು ನೋಡಬೇಕಿದೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.