ರಜನಿ 72ನೇ ವರ್ಷದ ಬರ್ತ್‌ಡೇಗೆ ಬಿಗ್‌ ಗಿಫ್ಟ್‌ : ʼತಲೈವಾ 171ʼ ಸೀಕ್ರೆಟ್ ರಿವೀಲ್‌..!

ಭಾರತೀಯ ಚಿತ್ರರಂಗದ ಸೂಪರ್‌ ಸ್ಟಾರ್‌, ಕನ್ನಡ, ತಮಿಳು, ತೆಲುಗು ಪ್ರೇಕ್ಷಕರ ಪ್ರೀತಿಯ ನಟ, ತಲೈವಾ ರಜಿನಿಕಾಂತ್‌ ಅವರಿಗೆ ಇಂದು ಜಸ್ಟ್‌ 72ನೇ ವರ್ಷದ ಹುಟ್ಟು ಹಬ್ಬದ ಸಂಭ್ರಮ. ಚಿತ್ರರಂಗದಲ್ಲಿ ಅಪಾರ ಅಭಿಮಾನಿ ಬಳಗ ಹೊಂದಿರುವ ಸೂಪರ್‌ಸ್ಟಾರ್ 72ರ ಹರೆಯದಲ್ಲೂ ಚಿಕ್ಕವರಿದ್ದಾಗ ಇದ್ದ ಅದೇ ಎನರ್ಜಿ ಕಾಪಾಡಿಕೊಂಡು ಬಂದಿದ್ದಾರೆ. ಇದೀಗ ಬಾಕ್ಸ್ ಆಫೀಸ್ ಕಿಂಗ್‌ನ ಹುಟ್ಟು ಹಬ್ಬದ ಪ್ರಯುಕ್ತ ಅಭಿಮಾನಿಗಳಿಗೆ ಒಂದು ಗುಡ್‌ ನ್ಯೂಸ್‌ ಕಾದಿದೆ.

Written by - Krishna N K | Last Updated : Dec 12, 2022, 10:59 AM IST
  • ಸೂಪರ್‌ ಸ್ಟಾರ್‌ ರಜಿನಿಕಾಂತ್‌ ಅವರಿಗೆ ಇಂದು ಜಸ್ಟ್‌ 72ನೇ ವರ್ಷದ ಹುಟ್ಟು ಹಬ್ಬದ ಸಂಭ್ರಮ
  • ಬಾಕ್ಸ್ ಆಫೀಸ್ ಕಿಂಗ್‌ನ ಹುಟ್ಟು ಹಬ್ಬದ ಪ್ರಯುಕ್ತ ಅಭಿಮಾನಿಗಳಿಗೆ ಒಂದು ಗುಡ್‌ ನ್ಯೂಸ್‌
  • ರಜನಿ ʼತಲೈವಾ 171ʼ ಗೆ ತಯಾರಿ
ರಜನಿ 72ನೇ ವರ್ಷದ ಬರ್ತ್‌ಡೇಗೆ ಬಿಗ್‌ ಗಿಫ್ಟ್‌ : ʼತಲೈವಾ 171ʼ ಸೀಕ್ರೆಟ್ ರಿವೀಲ್‌..! title=

Rajinikanth birthday : ಭಾರತೀಯ ಚಿತ್ರರಂಗದ ಸೂಪರ್‌ ಸ್ಟಾರ್‌, ಕನ್ನಡ, ತಮಿಳು, ತೆಲುಗು ಪ್ರೇಕ್ಷಕರ ಪ್ರೀತಿಯ ನಟ, ತಲೈವಾ ರಜಿನಿಕಾಂತ್‌ ಅವರಿಗೆ ಇಂದು ಜಸ್ಟ್‌ 72ನೇ ವರ್ಷದ ಹುಟ್ಟು ಹಬ್ಬದ ಸಂಭ್ರಮ. ಚಿತ್ರರಂಗದಲ್ಲಿ ಅಪಾರ ಅಭಿಮಾನಿ ಬಳಗ ಹೊಂದಿರುವ ಸೂಪರ್‌ಸ್ಟಾರ್ 72ರ ಹರೆಯದಲ್ಲೂ ಚಿಕ್ಕವರಿದ್ದಾಗ ಇದ್ದ ಅದೇ ಎನರ್ಜಿ ಕಾಪಾಡಿಕೊಂಡು ಬಂದಿದ್ದಾರೆ. ಇದೀಗ ಬಾಕ್ಸ್ ಆಫೀಸ್ ಕಿಂಗ್‌ನ ಹುಟ್ಟು ಹಬ್ಬದ ಪ್ರಯುಕ್ತ ಅಭಿಮಾನಿಗಳಿಗೆ ಒಂದು ಗುಡ್‌ ನ್ಯೂಸ್‌ ಕಾದಿದೆ.

ಯಸ್‌.. ರಜನಿ ಖದರ್‌ ಅಂದಿಗೂ.. ಇಂದಿಗೂ.. ಎಂದೆಂದಿಗೂ ತಗ್ಗಲ್ಲ. ಯುವ ನಟರ ಅಬ್ಬರದ ನಡುವೆಯೂ ಬಾಕ್ಸ್‌ ಆಫೀಸ್‌ನಲ್ಲಿ ತಲೈವಾ ದಾಖಲೆ ಮಾಡುತ್ತಿದ್ದಾರೆ. ಇನ್ನು ರಜನಿಕಾಂತ್ ಅವರ ಬರ್ತ್‌ಡೇ ಪ್ರಯುಕ್ತ 'ಬಾಬಾ' ಸಿನಿಮಾವನ್ನು ಬಿಡುಗಡೆ ಮಾಡಲಾಗಿದ್ದು, 2k ಮಕ್ಕಳು ಬಾಬಾ ನೋಡಿ ಶಾಕ್‌ ಆಗುತ್ತಿದ್ದಾರೆ. ಮಂಡೂಸ್ ಚಂಡಮಾರುತದ ನಡುವೆಯೂ 1.50 ಕೋಟಿ ರೂಪಾಯಿಗಳನ್ನು ಸಂಗ್ರಹಿಸುವ ಮೂಲಕ ಬಾಬಾ ಟ್ರೇಂಡ್‌ಗೆ ಮರಳಿದ್ದಾರೆ.

ಇದನ್ನೂ ಓದಿ: Trending Video : ಟಾಪ್‌ಲೆಸ್‌ ಆಗಿ ಬಾಲ್ಕನಿಗೆ ಬಂದ ನಟಿ.! ಚಳಿಯಲ್ಲಿ ಹೀಗೆಲ್ಲಾ ಮಾಡಿದ್ರೆ ಹೇಗ್‌ ಗುರು?

ಸದ್ಯ ನಟ ರಜನಿಕಾಂತ್ ಅವರು ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದ ʼಜೈಲರ್ʼ ಚಿತ್ರದಲ್ಲಿ ನಟಿಸುತ್ತಿದ್ದು, ಸನ್ ಪಿಕ್ಚರ್ಸ್ ನಿರ್ಮಾಣದ ಈ ಚಿತ್ರಕ್ಕೆ ಅನಿರುದ್ಧ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಕನ್ನಡದ ಖ್ಯಾತ ನಟ ಡಾ. ಶಿವರಾಜಕುಮಾರ್ ಮತ್ತು ರಮ್ಯಾಕೃಷ್ಣನ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲದೆ, ಈ ಚಿತ್ರದ ನಂತರ ನಟ ರಜನಿಕಾಂತ್ ತಮ್ಮ ಪುತ್ರಿ ಐಶ್ವರ್ಯಾ ರಜನಿಕಾಂತ್ ಅವರ 'ಲಾಲ್ ಸಿಂಗಂ' ಚಿತ್ರದಲ್ಲಿ ನಟಿಸಲಿದ್ದಾರೆ. ವಿಕ್ರಾಂತ್ ಮತ್ತು ವಿಷ್ಣು ವಿಶಾಲ್ ಲಾಲ್‌ ಸಿಂಗಂನಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಅಲ್ಲದೆ, ಲೈಕಾ ಪ್ರೊಡಕ್ಷನ್ಸ್ ನಿರ್ಮಾಣದ ಡಾನ್ ಖ್ಯಾತಿಯ ಚಕ್ರವರ್ತಿ ನಿರ್ದೇಶನದ ಚಿತ್ರದಲ್ಲಿ ರಜನಿಕಾಂತ್ ನಟಿಸುತ್ತಿದ್ದಾರೆ ಎಂದು ಹೇಳಲಾಗಿದ್ದರೂ, ಈಗ ಈ ಚಿತ್ರದ ನಿರ್ದೇಶಕ ಬದಲಾಗಿದ್ದಾರೆ ಎಂಬ ವರದಿಗಳು ಬಹಿರಂಗಗೊಂಡಿವೆ. ನಿರ್ದೇಶಕರು ಹೇಳಿದ ಕಥೆ ರಜನಿಕಾಂತ್ ಅವರಿಗೆ ಇಷ್ಟವಾಗದ ಕಾರಣ ಬೇರೆ ನಿರ್ದೇಶಕರನ್ನು ಆಯ್ಕೆ ಮಾಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಅಲ್ಲದೆ, ಮಾಹಿತಿ ಪ್ರಕಾರ, ʼತಲೈವಾ 171ʼ ಚಿತ್ರವನ್ನು ದೇಸಿಂಗ್ ಪೆರಿಯಾಸ್ವಾಮಿ ಅಥವಾ ʼಕಣ್ಣುಂ ಕಣ್ಣುಂ ಖೋಲಿಯಾಡಿತಾಳ್ʼ ನಿರ್ದೇಶಿಸಿದ ಕಾರ್ತಿಕ್ ಸುಬ್ಬರಾಜ್ ನಿರ್ದೇಶಿಸಬಹುದು ಎಂದು ಹೇಳಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News