Boat: 'ಬೋಟ್' ಸಿನಿಮಾ ಕನ್ನಡ ಸೇರಿದಂತೆ ದಕ್ಷಿಣ ಭಾರತದ ಎಲ್ಲಾ ಭಾಷೆಯಲ್ಲೂ ತೆರೆಗೆ ಬರುತ್ತಿದೆ. ವಿಶೇಷ ಎಂದರೆ ಕನ್ನಡದಲ್ಲೂ ಸಿನಿಮಾ ತೆರೆಗೆ ಬರುತ್ತಿದ್ದು ಈ ಮೂಲಕ ಯೋಗಿ ಸ್ಯಾಂಡಲ್ ವುಡ್ ಗೂ ಪದಾರ್ಪಣೆ ಮಾಡಿದ್ದಾರೆ. ಕನ್ನಡಕ್ಕೆ ಎಂಟ್ರಿ ಕೊಟ್ಟಿರುವ ಯೋಗಿ ಬಾಬು ಅವರಿಗೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸಾಥ್ ನೀಡಿದ್ದಾರೆ.


ನಟ ಕಿಚ್ಚ ಸುದೀಪ್ ತಂದೆ-ತಾಯಿ ಯಾರು ಗೊತ್ತಾ? ಕರುನಾಡ ಮಾಣಿಕ್ಯನ ಅಪ್ಪ ಸ್ಯಾಂಡಲ್ವುಡ್’ನಲ್ಲಿ ಸಖತ್ ಫೇಮಸ್


COMMERCIAL BREAK
SCROLL TO CONTINUE READING

ವಿಶೇಷ ಎಂದರೆ ಸಂಪೂರ್ಣ ಸಿನಿಮಾ ಸಮುದ್ರದಲ್ಲಿಯೇ ಚಿತ್ರೀಕರಣಗೊಂಡಿದೆ. ಜಪಾನ್, ಚೆನ್ನೈ ಮೇಲೆ ಬಾಂಬ್ ದಾಳಿ ಮಾಡಿದಾಗ ಹತ್ತು ಜನರು ಚಿಕ್ಕ ಬೋಟ್ ಏರಿ ಪರಾರಿಯಾಗುತ್ತಾರೆ. ಬೋಟ್ ನಲ್ಲಿ ಚಿಕ್ಕ ರಂಧ್ರವಾಗುತ್ತೆ. ಬಳಿಕ ಈ ಹತ್ತು ಜನ ಏನೆಲ್ಲ ಸಮಸ್ಯೆಗಳನ್ನು ಎದುರಿಸುತ್ತಾರೆ, ಸಮುದ್ರದಿಂದ ಹೇಗೆ ಭೂಮಿ ಸೇರುತ್ತಾರೆ ಎನ್ನುವುದೇ ಚಿತ್ರದ ತಿರುಳು.ಸದ್ಯ ರಿಲೀಸ್ ಆಗಿರುವ ಟೀಸರ್ ಗೆ ಖ್ಯಾತ ನಿರ್ದೇಶಕ ಗೌತಮ್ ಮೆನನ್ ನಿರೂಪಣೆ ಮಾಡಿರುವುದು ವಿಶೇಷ.


ಯೋಗಿ ಬಾಬು ಹಾಗೂ ಗೌರಿ ಜಿ ಕಿಶನ್ ಸೇರಿದಂತೆ ದೊಡ್ಡ ತಾರಬಳಗವೇ ಬೋಟ್ ಚಿತ್ರದಲ್ಲಿದೆ. ಘಿಬ್ರಾನ್ ಸಂಗೀತ ಸಂಯೋಜಿಸಿರುವ ಬೋಟ್ ಚಿತ್ರಕ್ಕೆ ಮಾದೇಶ್ ಮಾಣಿಕ್ಕಂ ಅವರ ಛಾಯಾಗ್ರಹಣವಿದೆ. ದಿನೇಶ್ ಅವರ ಸಂಕಲನ ಮತ್ತು ಟಿ ಸಂತಾನಂ ಅವರ ಕಲಾ ನಿರ್ದೇಶನವಿದೆ. ಈ ಚಿತ್ರವನ್ನು ಮಾಲಿ ಮತ್ತು ಮಾನ್ವಿ ಮೂವೀ ಮೇಕರ್ಸ್ ಬ್ಯಾನರ್‌ನಲ್ಲಿ ಪ್ರಭಾ ಪ್ರೇಮಕುಮಾರ್ ಅವರು ಅದ್ಧೂರಿಯಾಗಿ ನಿರ್ಮಿಸಿದ್ದಾರೆ. ಎಲ್ಲವೂ ಅಂದುಕಂಡಂತೆ ಆದರೆ 'ಬೋಟ್'  ಸಿನಿಮಾ ಫೆಬ್ರವರಿಯಲ್ಲಿ ತೆಲುಗು, ಮಲಯಾಳಂ, ಕನ್ನಡ ಮತ್ತು ಹಿಂದಿ ಭಾಷೆಯಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲಿದೆ.


ಇದನ್ನೂ ಓದಿ-ವಿನಯ್, ನಮ್ರತಾ ಅಲ್ಲ… ಇವರಾಗ್ತಾರೆ ಬಿಗ್ ಬಾಸ್ ಸೀಸನ್ 10ರ ವಿನ್ನರ್ ಎಂದ ಸ್ನೇಹಿತ್ ಗೌಡ!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.