ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿಗೆ ಸಂಬಂಧಿಸಿದ ಡ್ರಗ್ ಆಂಗಲ್ ಬಗ್ಗೆ ತನಿಖೆಯನ್ನು ವಿಸ್ತರಿಸಿರುವ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB) ಅನೇಕ ಬಾಲಿವುಡ್ ತಾರೆಯರಿಗೆ ಸಮನ್ಸ್ ಕಳುಹಿಸಲಿದೆ. ಕಳೆದ ರಾತ್ರಿಯಿಂದ ಇದೇ ಸರಣಿಯಲ್ಲಿ ದೀಪಿಕಾ ಪಡುಕೋಣೆ ಅವರ ವ್ಯವಸ್ಥಾಪಕಿ ಕರಿಷ್ಮಾ ಪ್ರಕಾಶ್ ಎಂಬ ಹೊಸ ಹೆಸರು ಸೇರ್ಪಡೆಯಾಗಿದೆ.  ಇದೇ ವೇಳೆ ನಮ್ಮ ಸಹಯೋಗಿ ವೆಬ್ಸೈಟ್ ಝೀ ನ್ಯೂಸ್  ಬಾಲಿವುಡ್ನಲ್ಲಿ  ದೀಪಿಕಾ ಪಡುಕೋಣೆ ನಡೆಸಿರುವ ಡ್ರಗ್ಸ್ ಪಾರ್ಟಿ 'ಹ್ಯಾಲೋವೀನ್ ಪಾರ್ಟಿ' ಯ ಸತ್ಯವನ್ನು ನಿಮ್ಮ ಮುಂದೆ ತರುತ್ತಿದೆ. ಇದರಲ್ಲಿ ಈಗ ಮೂರು ಹೊಸ ಹೆಸರುಗಳು ಶಾಮೀಲಾಗಿವೆ. ಈ ಹೆಸರುಗಳು ಸೋನಾಕ್ಷಿ ಸಿನ್ಹಾ, ಸಿದ್ಧಾರ್ಥ್ ಮಲ್ಹೋತ್ರಾ, ಆದಿತ್ಯ ರಾಯ್ ಕಪೂರ್. ಆಶ್ಚರ್ಯಪಡಬೇಡಿ! ಏಕೆಂದರೆ ಕೇವಲ ZEE NEWS ಮೇಲೆ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದ ಈ ದೊಡ್ಡ ಸದ್ಯ ಬಹಿರಂಗಗೊಳ್ಳಲಿದೆ.


COMMERCIAL BREAK
SCROLL TO CONTINUE READING

ದೀಪಿಕಾ ಪಡುಕೋಣೆ(Deepika Padukone) ನಡೆಸಿರುವ ಒಂದು ಚಾಟ್ ಇದೀಗ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಕೈ ಸೇರಿದೆ. ಈ ಚಾಟ್ ನಲ್ಲಿ ದೀಪಿಕಾ ಕ್ವಾನ್ ಟ್ಯಾಲೆಂಟ್ ಮ್ಯಾನೇಜ್ಮೆಂಟ್ ಕಂಪನಿಯಲ್ಲಿ ಕಾರ್ಯನಿರ್ವಹಿಸುವ ಕರೀಷ್ಮಾ ಪ್ರಕಾಶ್ ಜೊತೆಗೆ ಚಾಟ್ ನಡೆಸಿದ್ದಾರೆ. ಈ ಚಾಟ್ ನಲ್ಲಿ ದೀಪಿಕಾ ಕರಿಷ್ಮಾ ಗೆ 'ಆಶೀಶ್' ಹೆಸರಿನ ಡ್ರಗ್ಸ್  ಕೇಳುತ್ತಿದ್ದಾರೆ. ಆದರೆ, ಈ ಚಾಟ್ 28 ಅಕ್ಟೋಬರ್ 2017 ರಲ್ಲಿ ನಡೆದಿರುವುದು ಇಲ್ಲಿ ಗಮನಾರ್ಹ. ಈ ಚಾಟ್ ನಲ್ಲಿ ದೀಪಿಕಾಗೆ ನೀವು  ಕೋಕೋ ಯಾವಾಗ ತಲುಪಲಿರುವಿರಿ ಎಂದು ಕರಿಷ್ಮಾ ಕೇಳುತ್ತಿದ್ದಾಳೆ. ಇದಕ್ಕೆ ಉತ್ತರಿಸಿರುವ ದೀಪಿಕಾ ಸುಮಾರು 11.30 ರಿಂದ 12.00ರವರೆಗೆ ತಲುಪುವುದಾಗಿ ಹೇಳಿದ್ದಾರೆ.


ಇದನ್ನು ಓದಿ- ಝೀ ನ್ಯೂಸ್ ಬಳಿ ದೀಪಿಕಾ ಪಡುಕೋಣೆ ಅವರ 'ಡ್ರಗ್ಸ್ ಚಾಟ್' EXCLUSIVE


ದೀಪಿಕಾ ಜೊತೆಗೆ ಈ ಬಾಲಿವುಡ್ ನ ಮೂರು ತಾರೆಯರ ಹೆಸರು ಕೇಳಿಬಂದಿದೆ
 ಕೊಕೊ ಎಂಬುದು ಮುಂಬೈನ ಅತ್ಯಂತ ಸೊಗಸಾದ ಪಬ್‌ನ ಹೆಸರು. ಬಾಲಿವುಡ್ ನ ದೊಡ್ಡ ದೊಡ್ಡ ಪಾರ್ಟಿಗಳು ಇಲ್ಲಿಯೇ ನಡೆಯುತ್ತವೆ. ಇಲ್ಲಿನ ಪಾರ್ಟಿಗಳಲ್ಲಿ ಬಾಲಿವುಡ್ ನ ಖ್ಯಾತನಾಮರು ಪಾಲ್ಗೊಳ್ಳುತ್ತಾರೆ. ಅಕ್ಟೋಬರ್ 28, 2017ರ ರಾತ್ರಿ ಇದೆ ಪಬ್ ನಲ್ಲಿ ಹ್ಯಾಲೊವಿನ್ ಪಾರ್ಟಿ ನಡೆದಿತ್ತು ಎಂಬುದು ಝೀ ನ್ಯೂಸ್ ಮೂಲಗಳಿಂದ ತಿಳಿದುಬಂದಿದೆ.  ಈ ಪಾರ್ಟಿಯಲ್ಲಿ ದೀಪಿಕಾ ಪಡುಕೋಣೆ ಜೊತೆಗೆ ಸೋನಾಕ್ಷಿ ಸಿನ್ಹಾ, ಸಿದ್ಧಾರ್ಥ್ ಮಲ್ಹೊತ್ರಾ ಹಾಗೂ ಆದಿತ್ಯ ರಾಯ್ ಕಪೂರ್ ಕೂಡ ಶಾಮೀಲಾಗಿದ್ದರು ಎನ್ನಲಾಗಿದೆ.


ಈ ಔತಣಕೂಟ ನಡೆದ ಎರಡು ದಿನಗಳ ಬಳಿಕ ಸ್ವತಃ ಹ್ಯಾಲೊವಿನ್ ಪಬ್ ಈ ಪಾರ್ಟಿ ಕುರಿತು ತನ್ನ ಫೇಸ್ಬುಕ್ ಪುಟದಲ್ಲಿ ಮಾಹಿತಿ ಹಂಚಿಕೊಂಡಿತ್ತು. ಅಂದಿನ ರಾತ್ರಿ ಈ ಪಾರ್ಟಿಯಲ್ಲಿ ನಡೆದಿದ್ದಾದರು ಏನು? ಎಂಬುದು ಸದ್ಯದ ಪ್ರಶ್ನೆ, ಇದೆ ಪಾರ್ಟಿಗಾಗಿ ದೀಪಿಕಾ, ಕರೀಷ್ಮಾ ಬಳಿಯಿಂದ ಡ್ರಗ್ಸ್ ಪಡೆದುಕೊಂಡಿದ್ದರೆ? ಈ ಹ್ಯಾಲೊವಿನ್ ಪಾರ್ಟಿ ರಹಸ್ಯ ಏನು? ಸೋನಾಕ್ಷಿ, ಆದಿತ್ಯ ರಾಯ್ ಕಪೂರ್ ಹಾಗೂ ಸಿದ್ಧಾರ್ಥ್ ಮಲ್ಹೊತ್ರಾ ಈ ಪಾರ್ಟಿಯ ಸತ್ಯವನ್ನು ಬಹಿರಂಗಪಡಿಸಲಿದ್ದಾರೆಯೇ?


ಇದನ್ನು ಓದಿ- Full Video: Karan Johar Drug Party ಮೇಲೆ NCB ಕಣ್ಣು... ದಿಗ್ಗಜ ಬಾಲಿವುಡ್ ನಟ-ನಟಿಯರು ಇದರಲ್ಲಿ ಶಾಮೀಲು


ಸೋನಾಕ್ಷಿ ಸಿನ್ಹಾ, ಸಿದ್ಧಾರ್ಥ್ ಮಲ್ಹೊತ್ರಾ, ಆದಿತ್ಯ ರಾಯ್ ಕಪೂರ್ ಉತ್ತರ
ಈ ಹಿನ್ನೆಲೆಯಲ್ಲಿ ಝೀ ನ್ಯೂಸ್ ಸೋನಾಕ್ಷಿ, ಆದಿತ್ಯ ಹಾಗೂ ಸಿದ್ಧಾರ್ಥ್ ಗೆ ಸಂದೇಶ ಕಳುಹಿಸಿ ಅವರ ಪ್ರತಿಕ್ರಿಯೆ ಪಡೆಯಲು ಯತ್ನಿಸಿದೆ. ಆದರೆ, ಇದುವರೆಗೆ ಅವರ ಬಳಿಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.