Art director Milan dies : ದಕ್ಷಿಣ ಭಾರತದ ಜನಪ್ರಿಯ ಕಲಾ ನಿರ್ದೇಶಕರ ಮಿಲನ್‌ ಫರ್ನಾಂಡಿಸ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ನಟ ಅಜಿತ್‌ ಮುಂಬರುವ ʼವಿಡಮುಯಾರ್ಚಿʼ ಚಿತ್ರದ ಚಿತ್ರೀಕರಣದ ವೇಳೆ ಈ ಘಟನೆ ನಡೆದಿದೆ. ಈ ಚಿತ್ರದ ಶೂಟಿಂಗ್‌ ಅಜೆರ್ಬೈಜಾನ್‌ ದೇಶದಲ್ಲಿ ನಡೆಯುತ್ತಿದೆ.


COMMERCIAL BREAK
SCROLL TO CONTINUE READING

ಹೌದು.. ಕಾಲಿವುಡ್‌ ನಟ ಅಜಿತ್ ಕುಮಾರ್ ಅಭಿನಯದ 'ವಿಡಮುಯಾರ್ಚಿ' ಸಿನಿಮಾದ ಶೂಟಿಂಗ್‌ ಅಜೆರ್ಬೈಜಾನ್ ದೇಶದಲ್ಲಿ ಮಾಡಲಾಗುತ್ತಿದೆ. ಈ ಸಿನಿಮಾಗಾಗಿ ಮಿಲನ್‌ ಕಲಾ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಎಂದಿನಂತೆ ಚಿತ್ರೀಕರಣಕ್ಕೆ ಬಂದಿದ್ದ ಕಲಾ ನಿರ್ದೇಶಕ ಹಠಾತ್ ಹೃದಯಘಾತದಿಂದ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ. 


ಇದನ್ನೂ ಓದಿ: ನಟ ಪ್ರಭಾಸ್‌ ಇನ್‌ಸ್ಟಾಗ್ರಾಮ್‌ ಖಾತೆ ಹ್ಯಾಕ್‌..! ಡಾರ್ಲಿಂಗ್‌ ಅಕೌಂಟ್‌ ಹೈಜಾಕ್‌


ಮಿಲನ್‌ ಫರ್ನಾಂಡಿಸ್‌ ದಕ್ಷಿಣ ಭಾರತದ ಖ್ಯಾತ ಕಲಾ ನಿರ್ದೇಶಕರಲ್ಲಿ ಒಬ್ಬರು. ಅಜಿತ್ ಕುಮಾರ್ ನಟಿಸಿದ ಬಿಗ್ ಬಜೆಟ್ ಸಿನಿಮಾಗಳಿಗೂ ಸಹ ಇವರು ಕಲಾ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಎಂದಿನಂತ ಇಂದು ಬೆಳಿಗ್ಗೆ (ಅ.15) ವಿಡಮುಯಾರ್ಚಿ ಸಿನಿಮಾದ ಚಿತ್ರೀಕರಣ ಸ್ಥಳಕ್ಕೆ ಮಿಲನ್‌ ಬಂದಿದ್ದರು. ಈ ವೇಳೆ ಅವರು ಆಯಾಸಗೊಂಡು ಸಿಕ್ಕಾಪಟ್ಟೆ ಬೆವರುತ್ತಿದ್ದರಂತೆ. ತಕ್ಷಣವೇ ಅವರನ್ನು ಚಿತ್ರತಂಡ ಕಾರಿನಲ್ಲಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿದೆ. ಆದರೆ, ಆಸ್ಪತ್ರೆ ತಲುಪುವ ಮಾರ್ಗ ಮಧ್ಯ ಮಿಲನ್ ನಿಧನರಾಗಿದ್ದರು ಎಂದು ಇ ಟೈಮ್ಸ್‌ಗೆ ಚಿತ್ರತಂಡ ಮಾಹಿತಿ ನೀಡಿದೆ.


ಮಿಲನ್ ಸುಮಾರು 30ಕ್ಕೂ ಅಧಿಕ ಸಿನಿಮಾಗಳಿಗೆ ಕಲಾ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. 54 ವರ್ಷದ ಮಿಲನ್‌ ಪತ್ನಿ ಹಾಗೂ ಮಗನನ್ನು ಅಗಲಿದ್ದಾರೆ. ಅವರ ಮಗ ಅವರಿಗೆ ಸಹಾಯಕನಾಗಿ ಅಜೆರ್ಬೈಜಾನ್‌ನಲ್ಲಿದ್ದರು. ಶೀಘ್ರವೇ ಮಿಲನ್ ಮೃತದೇಹವನ್ನು ಭಾರತಕ್ಕೆ ತರಲು ಯತ್ನಿಸಲಾಗುತ್ತಿದೆ ಎಂದು ತಿಳಿದು ಬಂದಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.