ನಟ ಪ್ರಭಾಸ್‌ ಇನ್‌ಸ್ಟಾಗ್ರಾಮ್‌ ಖಾತೆ ಹ್ಯಾಕ್‌..! ಡಾರ್ಲಿಂಗ್‌ ಅಕೌಂಟ್‌ ಹೈಜಾಕ್‌

Prabhas instagram hack : ಇನ್‌ಸ್ಟಾಗ್ರಾಮ್‌ನಿಂದಲೇ ಪ್ರಭಾಸ್ ಅಕೌಂಟ್‌ ನಾಪತ್ತೆಯಾಗಿದೆ. ಪ್ರಭಾಸ್‌ ಫ್ಯಾನ್ಸ್‌ ತೆರೆದ ಖಾತೆಗಳು ಮಾತ್ರ ಗೋಚರಿಸುತ್ತಿವೆ. ಡಾರ್ಲಿಂಗ್‌ ಮೂಲ ಮತ್ತು ಅಧಿಕೃತ ಖಾತೆ ಕಾಣೆಯಾಗಿದೆ. ತ್ತೀಚೆಗೆ ಡಾರ್ಲಿಂಗ್‌ ಇನ್‌ಸ್ಟಾಗ್ರಾಮ್‌ ಅನ್ನು ಹೆಚ್ಚು ಬಳಸುತ್ತಿದ್ದರು. ಹತ್ತು ಮಿಲಿಯನ್ ಜನ ಫಾಲೋವರ್ಸ್‌ಗಳು ಹೊಂದಿದ್ದಾರೆ.

Written by - Krishna N K | Last Updated : Oct 15, 2023, 05:44 PM IST
  • ಇನ್‌ಸ್ಟಾಗ್ರಾಮ್‌ನಿಂದಲೇ ಪ್ರಭಾಸ್ ಅಕೌಂಟ್‌ ನಾಪತ್ತೆ
  • ಪ್ರಭಾಸ್‌ ಫ್ಯಾನ್ಸ್‌ ತೆರೆದ ಖಾತೆಗಳು ಮಾತ್ರ ಗೋಚರಿಸುತ್ತಿವೆ
  • ಖಾತೆಯನ್ನು ಹಿಂಪಡೆಯಲು ಪ್ರಭಾಸ್ ತಂಡ ಪ್ರಯತ್ನಿಸುತ್ತಿದೆ
ನಟ ಪ್ರಭಾಸ್‌ ಇನ್‌ಸ್ಟಾಗ್ರಾಮ್‌ ಖಾತೆ ಹ್ಯಾಕ್‌..! ಡಾರ್ಲಿಂಗ್‌ ಅಕೌಂಟ್‌ ಹೈಜಾಕ್‌ title=

Prabhas instagram account hack : ಪ್ಯಾನ್‌ ಇಂಡಿಯಾ ಸ್ಟಾರ್‌ ನಟ ಪ್ರಭಾಸ್ ಸಾಮಾಜಿಕ ಜಾಲತಾಣಗಳಿಂದ ಕೊಂಚ ದೂರ ಉಳಿದಿದ್ದರು, ಫೇಸ್‌ಬುಕ್ ಖಾತೆ ಇದ್ದರೂ ಸಹ ಅದನ್ನು ಅವರು ಹೆಚ್ಚಾಗಿ ಬಳಸುತ್ತಿರಲಿಲ್ಲ. ಇತ್ತೀಚೆಗೆ ಡಾರ್ಲಿಂಗ್‌ ಇನ್‌ಸ್ಟಾಗ್ರಾಮ್‌ ಅನ್ನು ಹೆಚ್ಚು ಬಳಸುತ್ತಿದ್ದರು. ಹತ್ತು ಮಿಲಿಯನ್ ಜನ ಫಾಲೋವರ್ಸ್‌ಗಳು ಹೊಂದಿದ್ದಾರೆ. ಸಧ್ಯ ಈ ಖಾತೆಯನ್ನು ಹ್ಯಾಕ್ ಮಾಡಲಾಗಿದೆ.

ಇನ್‌ಸ್ಟಾಗ್ರಾಮ್‌ನಿಂದಲೇ ಪ್ರಭಾಸ್ ಅಕೌಂಟ್‌ ನಾಪತ್ತೆಯಾಗಿದೆ. ಪ್ರಭಾಸ್‌ ಫ್ಯಾನ್ಸ್‌ ತೆರೆದ ಖಾತೆಗಳು ಮಾತ್ರ ಗೋಚರಿಸುತ್ತಿವೆ. ಡಾರ್ಲಿಂಗ್‌ ಮೂಲ ಮತ್ತು ಅಧಿಕೃತ ಖಾತೆ ಕಾಣೆಯಾಗಿದೆ. ಸದ್ಯ ಹ್ಯಾಕ್ ಆದ ಖಾತೆಯನ್ನು ಹಿಂಪಡೆಯಲು ಪ್ರಭಾಸ್ ತಂಡ ಪ್ರಯತ್ನಿಸುತ್ತಿದೆ.

ಇದನ್ನೂ ಓದಿ:ಕಿಚ್ಚನ ಪಂಚಾಯಿತಿಯಲ್ಲಿ ನಗೆ, ಹೊಗೆ, ಪಿನ್ನು ಮತ್ತು ಎಲಿಮಿನೇಷನ್‌ನ ಟೆನ್ಷನ್ನು!

ಪ್ರಭಾಸ್ ಅಭಿನಯದ 'ಸಾಲಾರ್' ಚಿತ್ರ ಡಿಸೆಂಬರ್ 22 ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಈ ಸಿನಿಮಾದ ಮೇಲೆ ಭಾರೀ ನಿರೀಕ್ಷೆಗಳಿವೆ. ಮತ್ತೊಂದೆಡೆ, ಶಾರುಖ್ ಖಾನ್ ಅವರ 'ಡಂಕಿ' ಕೂಡ ಅದೇ ದಿನಾಂಕದಂದು ಬಿಡುಗಡೆಯಾಗುತ್ತಿದೆ. ಇವೆರಡೂ ಚಿತ್ರಗಳ ನಡುವೆ ಪ್ರಬಲ ಪೈಪೋಟಿ ಏರ್ಪಡಲಿದೆ.

ಡಿಸೆಂಬರ್ 22 ರಂದು 'ಸಾಲಾರ್' ಬಿಡುಗಡೆಯಾಗಲಿರುವ ಕಾರಣ ಶಾರುಖ್ ಖಾನ್ ಅವರ 'ಡಂಕಿ' ಮುಂದೂಡಲಾಗಿದೆ ಎಂಬ ವದಂತಿಗಳು ಕೇಳಿ ಬಂದಿದ್ದವು. ಆದರೆ, ಅಂತಹದ್ದೇನೂ ಇಲ್ಲ ಎಂದು ಡಂಕಿ ಚಿತ್ರ ತಂಡ ಸ್ಪಷ್ಟಪಡಿಸಿದೆ. ಸಧ್ಯ ಎರಡು ಚಿತ್ರಗಳ ನಡುವೆ ಪೈಪೋಟಿ ಅನಿವಾರ್ಯವಾಗಿದೆ. 

ಇದನ್ನೂ ಓದಿ: Bigg Boss 10 Elimination: ಇಂದು ಮನೆಯಿಂದ ಹೊರ ಹೋದವರು ಇವರೇ..!

'ಸಾಲಾರ್' ಅಲ್ಲದೆ, ನಾಗ್ ಅಶ್ವಿನ್ ನಿರ್ದೇಶನದ 'ಕಲ್ಕಿ 2989 ಎಡಿ' ಟೈಮ್ ಟ್ರಾವೆಲ್ ಸಿನಿಮಾದಲ್ಲಿ ಪ್ರಭಾಸ್ ನಟಿಸುತ್ತಿದ್ದಾರೆ. 'ಸಾಲಾರ್' ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದೆ ಎಂಬುದು ಗೊತ್ತೇ ಇದೆ. ಸಧ್ಯ ಪ್ರಭಾಸ್‌ 'ರಾಧೆ ಶ್ಯಾಮ್' ಮತ್ತು 'ಆದಿಪುರುಷ' ಸಿನಿಮಾಗಳು ಸೋತ ನಂತರ ಮುಂಬರುವ ಸಿನಿಮಾಗಳ ಬಗ್ಗೆ ಹೆಚ್ಚು ಎಚ್ಚರಿಕೆ ವಹಿಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News