Tamannaah Bhatia : ಸದ್ಯ ಭಾರತೀಯ ಚಿತ್ರರಂಗದ ಟಾಪ್‌ ನಾಯಕಿಯರ ಪಟ್ಟಿಯಲ್ಲಿ ತಮನ್ನಾ ಹೆಸರು ಮೊದಲ ಸಾಲಿನಲ್ಲಿದೆ. ಈ ಮೋಹನಾಂಗಿ ಸ್ಟಾರ್ ಹೀರೋಗಳ ಜೊತೆ ಸಿನಿಮಾ ಮಾಡಿ ಪ್ರೇಕ್ಷಕರ ಮನಸೂರೆಗೊಳ್ಳುತ್ತಿದ್ದಾರೆ. ತೆಲುಗಿನಲ್ಲಿ ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿರುವ ತಮನ್ನಾ ಈಗ ಬಾಲಿವುಡ್‌ನಲ್ಲಿ ಮಿಂಚುತ್ತಿದ್ದಾರೆ.. ಅಲ್ಲಿಯೂ ನಟಿಸಿ ತಮ್ಮ ಸಾಮರ್ಥ್ಯವನ್ನು ತೋರುತ್ತಿದ್ದಾರೆ. 


COMMERCIAL BREAK
SCROLL TO CONTINUE READING

ಸದ್ಯ ತಮನ್ನಾ ಸೌತ್‌ ಚಿತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿಲ್ಲ.. ಕೊನೆಯದಾಗಿ ನಟಿ ಮೆಗಾಸ್ಟಾರ್ ಚಿರಂಜೀವಿ ಅಭಿನಯದ ಭೋಲಾಶಂಕರ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾ ಡಿಸಾಸ್ಟರ್ ಆಗಿದ್ದರಿಂದ ಈಗ ಇಲ್ಲಿ ಸ್ಪೀಡ್ ಕಡಿಮೆಯಾಗಿದೆ. ಆದರೆ ಈ ಮಧ್ಯೆ ಮಧ್ಯೆ ತಮಿಳಿನಲ್ಲಿ ಸಿನಿಮಾ ಮಾಡುತ್ತಿದ್ದಾರೆ. 


ಇದನ್ನೂ ಓದಿ:ಬಿಗ್ ಬಾಸ್ ಹೊಸ ಲೋಗೋ ಮತ್ತು ಪ್ರೋಮೋ ಬಿಡುಗಡೆ..! ಅಸಲಿ ಆಟ ಈಗ ಶುರು.. 


ಇತ್ತೀಚೆಗಷ್ಟೇ ತಮಿಳಿನಲ್ಲಿ ಪಾರ್ತಿಬನ್ ನಿರ್ದೇಶನದ ಸಿನಿಮಾದಲ್ಲಿ ನಟಿಸಿದ್ದರು.. ಟೀಂಜ್ ಎಂಬ ಶೀರ್ಷಿಕೆಯೊಂದಿಗೆ ಈ ಚಿತ್ರ ಪ್ರೇಕ್ಷಕರ ಮುಂದೆ ಬಂದಿತ್ತು. ಕಮಲ್ ಹಾಸನ್ ಅವರ ಭಾರತೀಯದುಡು 2 ಜೊತೆಗೆ ಈ ಚಿತ್ರವೂ ಬಿಡುಗಡೆಯಾಗಿದೆ. ಈ ನಡುವೆ ನಿರ್ದೇಶಕ ಪಾರ್ತಿಬನ್ ತಮನ್ನಾ ಬಗ್ಗೆ ಶಾಕಿಂಗ್ ಕಾಮೆಂಟ್ ಮಾಡಿದ್ದಾರೆ. 


ಇತ್ತೀಚಿನ ದಿನಗಳಲ್ಲಿ ತಮಿಳು ಬಾಷೆ ಬರದಿದ್ದರೂ ಪರವಾಗಿಲ್ಲ.. ಆದರೆ ಡ್ಯಾನ್ಸ್ ಚೆನ್ನಾಗಿ ಮಾಡಿದರೆ ಸಿನಿಮಾ ಹಿಟ್ ಆಗುತ್ತೆ. ಚಿತ್ರ ಹಿಟ್ ಆಗಬೇಕಾದರೆ ತಮನ್ನಾ ಡ್ಯಾನ್ಸ್ ಸಾಕು, ಕಥೆ ಬೇಕಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. ತಮನ್ನಾ ಡ್ಯಾನ್ಸ್ ಮಾಡಿದರೆ ಸಿನಿಮಾ ಹಿಟ್ ಆಗುತ್ತೆ ಎಂಬ ಅವರ ಕಾಮೆಂಟ್ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 


ಇದನ್ನೂ ಓದಿ:ನನ್ನಪ್ಪ ನಮ್ಮನ್ನು ಬಿಟ್ಟು ಹೋಗಿದ್ದು ಈ ಕಾರಣಕ್ಕೆ...! ಬಿಟ್ಹೋದ ತಂದೆಯ ಬಗ್ಗೆ ಇದೇ ಮೊದಲ ಬಾರಿ ಮಾತನಾಡಿದ ಅನುಶ್ರೀ


ಕೆಲವು ನೆಟ್ಟಿಗರು ಪಾರ್ತಿಬನ್ ಅವರ ಹೇಳಿಕೆಯನ್ನು ಟೀಕಿಸುತ್ತಿದ್ದಾರೆ.. ಇದರಿಂದ ಎಚ್ಚೆತ್ತುಕೊಂಡ ನಿರ್ದೇಶಕ, ಕ್ಷಮೆಯಾಚಿಸಿದರು. ಇತ್ತೀಚೆಗಷ್ಟೇ ಜೈಲರ್ ಸಿನಿಮಾದಲ್ಲಿ ತಮನ್ನಾ ವಿಶೇಷ ಗೀತೆಯೊಂದರಲ್ಲಿ ಕಾಣಿಸಿಕೊಂಡಿದ್ದರು.. ಕಾವಾಲಯ್ಯ ಎನ್ನುವ ಈ ಹಾಡು ಸಖತ್‌ ಹಿಟ್‌ ಆಗಿತ್ತು.. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.