ಲಡಾಖ್ ನಲ್ಲಿ ನಡೆಯಲಿದೆ Laal Singh Chaddha ಸಿನಿಮಾ ಚಿತ್ರೀಕರಣ ; ಕಾರ್ಗಿಲ್ ನಲ್ಲಿ Aamir Khan ತಂಡ
ಕಳೆದ ವರ್ಷ ಲಾಕ್ ಡೌನ್ ವೇಳೆ, ಅಮೀರ್ ಖಾನ್ ಮತ್ತು ಕರೀನಾ ಕಪೂರ್ ಖಾನ್ ಅಭಿನಯದ ಲಾಲ್ ಸಿಂಗ್ ಚಡ್ಡಾದ ಚಿತ್ರೀಕರಣ ಪಂಜಾಬ್‌ನಲ್ಲಿ ನಡೆಯುತ್ತಿತ್ತು. ಲಾಕ್‌ಡೌನ್ ತೆರೆವಾದಾಗ ಬಹಳ ಸೀಮಿತ ಸಿಬ್ಬಂದಿಯೊಂದಿಗೆ ಶೂಟಿಂಗ್ ಕಾರ್ಯ ಆರಂಭಿಸಲಾಗಿತ್ತು.
ನವದೆಹಲಿ : ಕೋವಿಡ್ ಸಾಂಕ್ರಮಣದ (Coronavirus) ಕಾರಣ ಸಿನಿಮಾ ಇಂಡಷ್ಟ್ರೀ ಬಹಳಷ್ಟು ನಷ್ಟ ಅನುಭವಿಸುವಂತಾಗಿದೆ. ಒಂದೆಡೆ, ಚಿತ್ರಮಂದಿರಗಳಿಗೆ ಬೀಗ ಹಾಕಲಾಗಿದ್ದರೆ, ಮತ್ತೊಂದೆಡೆ, ಕಲಾವಿದರು ಮತ್ತು ಚಲನಚಿತ್ರ ನಿರ್ಮಾಪಕರ ಮೇಲೆ ಕೂಡಾ ಕೆಲವು ನಿರ್ಬಂಧಗಳನ್ನು ಹೇರಲಾಗಿದೆ. ಅಲ್ಲದೆ ಕೋವಿಡದ ಭಯವಂತೂ ಎಲ್ಲರನ್ನೂ ಕಾಡುತ್ತಿದೆ. ಬಾಲಿವುಡ್‌ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಬಹಳ ಸಮಯದಿಂದ ತೆರೆಯ ಮೇಲೆ ಕಾಣಿಸಿಕೊಂಡಿಲ್ಲ. ಅಮೀರ್ ಖಾನ್ (Aamir Khan) ಅಭಿನಯದ ಲಾಲ್ ಸಿಂಗ್ ಚಡ್ಡಾ (Laal Singh Chaddha) ಕೂಡ ಕೋವಿಡ್ ಕಾರಣದಿಂದಾಗಿ ತೆರೆ ಕಾಣುವುದು ವಿಳಂಬವಾಗಿದೆ.
ಶೀಘ್ರದಲ್ಲೇ ಪ್ರಾರಂಭವಾಗಲಿದೆ ಚಿತ್ರದ ಶೂಟಿಂಗ್ :
ಕಳೆದ ವರ್ಷ ಲಾಕ್ ಡೌನ್ ವೇಳೆ, ಅಮೀರ್ ಖಾನ್ (Aamir Khan) ಮತ್ತು ಕರೀನಾ ಕಪೂರ್ ಖಾನ್ (Kareena Kapoor Khan) ಅಭಿನಯದ ಲಾಲ್ ಸಿಂಗ್ ಚಡ್ಡಾದ (Laal Singh Chaddha) ಚಿತ್ರೀಕರಣ ಪಂಜಾಬ್‌ನಲ್ಲಿ ನಡೆಯುತ್ತಿತ್ತು. ಲಾಕ್‌ಡೌನ್ ತೆರೆವಾದಾಗ ಬಹಳ ಸೀಮಿತ ಸಿಬ್ಬಂದಿಯೊಂದಿಗೆ ಶೂಟಿಂಗ್ ಕಾರ್ಯ ಆರಂಭಿಸಲಾಗಿತ್ತು. ಇದೀಗ ಚಿತ್ರದ ಶೂಟಿಂಗ್ ಶೀಘ್ರ ಮುಕ್ತಾಯವಾಗಲಿದೆ ಎನ್ನಲಾಗಿದೆ. ಸದ್ಯದಲ್ಲೇ ಲಡಾಖ್ ನಲ್ಲಿ (Laddakh) ಚಿತ್ರದ ಯುದ್ಧದ ಸೀನ್ ಚಿತ್ರೀಕರಣ ನಡೆಯಲಿದೆ ಎನ್ನಲಾಗಿದೆ. ತಯಾರಕರು ಶೀಘ್ರದಲ್ಲೇ ಲಡಾಖ್ ನಲ್ಲಿ ಯುದ್ಧದ ದೃಶ್ಯವನ್ನು ಚಿತ್ರೀಕರಿಸಲು ಹೊರಟಿದ್ದಾರೆ ಎಂದು ವರದಿಯಾಗಿದೆ.
Bikramjeet Kanwarpal : ಖ್ಯಾತ ಬಾಲಿವುಡ್ ನಟ ಬಿಕ್ರಮ್‌ಜೀತ್ ಕನ್ವರ್‌ಪಾಲ್ ಕೊರೋನಾಗೆ ಬಲಿ!
ಲೋಕೇಶನ್ ಹುಡುಕಾಟದಲ್ಲಿ ಅಮೀರ್ ತಂಡ :
ವರದಿಯ ಪ್ರಕಾರ, ಲಾಲ್ ಸಿಂಗ್ ಚಡ್ಡಾ ಚಿತ್ರದ ಚಿತ್ರೀಕರಣ ಶೀಘ್ರದಲ್ಲೇ ಪುನರಾರಂಭಗೊಳ್ಳಲಿದೆ. ಚಿತ್ರದ ಯುದ್ಧದ (War) ದೃಶ್ಯವನ್ನು ಲಡಾಕ್‌ನ ಕಾರ್ಗಿಲ್‌ನಲ್ಲಿ ಚಿತ್ರೀಕರಿಸಲಾಗುವುದು. ಮಾಹಿತಿಯ ಪ್ರಕಾರ, ತಂಡವು ಈ ಪ್ರದೇಶದಲ್ಲಿ ಯುದ್ಧದ ದೃಶ್ಯವನ್ನು ಚಿತ್ರೀಕರಿಸಲಿದೆ. ಈ ಚಿತ್ರದ ಮೂಲಕ ಸ್ಟಾರ್ ನಾಗ ಚೈತನ್ಯ (Naga Chaitanya) ಕೂಡ ಬಾಲಿವುಡ್‌ಗೆ ಪಾದಾರ್ಪಣೆ ಮಾಡಲಿದ್ದಾರೆ ಎಂದು ವರದಿಯಾಗಿದೆ.
ಲಾಲ್ ಸಿಂಗ್ ಚಡ್ಡಾ ಈ ಚಿತ್ರದ ರಿಮೇಕ್ :
ಮಾಧ್ಯಮ ವರದಿಗಳ ಪ್ರಕಾರ, ಇದು 45 ದಿನಗಳ ಶೆಡ್ಯೂಲ್ ಆಗಿದೆ. ಇದರಲ್ಲಿ ಬಹಳಷ್ಟು ಆಕ್ಶನ್ ದೃಶ್ಯಗಳು ಮತ್ತು ಯುದ್ದ ದೃಶ್ಯಗಳು ಒಳಗೊಂಡಿದೆ. ಅದ್ವೈತ್ ಚಂದನ್ ನಿರ್ದೇಶನದ ಈ ಚಿತ್ರ ಟಾಮ್ ಹ್ಯಾಂಕ್ ಅವರ ಬ್ಲಾಕ್ಬಸ್ಟರ್ ಹಾಲಿವುಡ್ ಚಿತ್ರ ಫಾರೆಸ್ಟ್ ಗಂಪ್ ನ (Forrest Gump) ಹಿಂದಿ ರಿಮೇಕ್ ಆಗಿದೆ.
ಇದನ್ನೂ ಓದಿ : Rashmika Mandana ಅವರ ನೆಚ್ಚಿನ ಐಪಿಎಲ್ ತಂಡ ಯಾವುದು ಗೊತ್ತೇ?
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.