ಕನ್ನಡ ಆಯ್ತು.. ತೆಲುಗಿನಲ್ಲೂ ಡಿಮ್ಯಾಂಡ್.. ಲಕ್ಷ್ಮೀ ಬಾರಮ್ಮ ಸಿರೀಯಲ್ ನಟಿ ಭೂಮಿಕಾ ನಿಜಕ್ಕೂ ಯಾರು ಗೊತ್ತೇ?
Lakshmi Baramma Kannada serial Actress: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಲಕ್ಷ್ಮೀಬಾರಮ್ಮ ಸಿರೀಯಲ್ ದಿನದಿಂದ ದಿನಕ್ಕೆ ರೋಚಕತೆಯನ್ನು ಪಡೆದುಕೊಳ್ಳುತ್ತಿದೆ.. ಸದ್ಯ ಲಕ್ಷ್ಮೀ ಕೀರ್ತಿಯಾಗಿ ಬದಲಾಗಿದ್ದು, ಆಕೆಯನ್ನು ಕಂಡು ಎಲ್ಲರೂ ಭಯಪಡುತ್ತಿದ್ದಾರೆ. ಇದೀಗ ಲಕ್ಷ್ಮೀ ಪಾತ್ರಧಾರಿಯಾಗಿ ನಟಿಸುತ್ತಿರುವ ಭೂಮಿಕಾ ಅವರ ವೈಯಕ್ತಿಕ ಜೀವನದ ಕೆಲವು ಇಂಟ್ರೆಸ್ಟಿಂಗ್ ಮಾಹಿತಿಯನ್ನು ತಿಳಿದುಕೊಳ್ಳೋಣ..
Lakshmi Baramma Kannada serial: ಲಕ್ಷ್ಮೀ ಬಾರಮ್ಮ ಸಿರೀಯಲ್ ಈಗ ಭಾರೀ ಕುತೂಹಲ ಮೂಡಿಸಿದೆ.. ಸದ್ಯ ಕಾವೇರಿ ಸಂಚಿಗೆ ಕೀರ್ತಿ ಬಲಿಯಾಗಿದ್ದಾರೆ.. ಇತ್ತ ಲಕ್ಷ್ಮೀಗೂ ಹೊಂಚುಹಾಕುತ್ತಿದ್ದಾಳೆ ಕಾವೇರಿಗೆ ಶಾಕ್‌ವೊಂದು ಎದುರಾಗಿದೆ.. ಹೌದು ಸದ್ಯ ಕೀರ್ತಿಯ ಆತ್ಮ ಲಕ್ಷ್ಮೀಯವರನ್ನು ಸೇರಿದೆ.. ಈ ಮೂಲಕ ಕಾವೇರಿ ಮೇಲೆ ಕೀರ್ತಿ ಸೇಡು ತೀರಿಸಿಕೊಳ್ಳುತ್ತಿದ್ದಾಳೆ..
ಸದ್ಯ ಲಕ್ಷ್ಮೀ ಪಾತ್ರಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.. ಪಾತ್ರಧಾರಿ ಯಾರು?ಅವರ ಹಿನ್ನಲೆ ಏನು? ಎನ್ನುವ ಹಲವಾರು ಚರ್ಚೆಗಳು ಸೋಷಿಯಲ್ ಮಿಡಿಯಾದಲ್ಲಿ ನಡೆಯುತ್ತಿದ್ದು, ಜೊತೆಗೆ ಅವರ ಬಗ್ಗೆ ತಿಳಿದುಕೊಳ್ಳಲು ಜನ ಆಸಕ್ತಿ ತೋರುತ್ತಿದ್ದಾರೆ..
ಇದನ್ನೂ ಓದಿ-ವಿಚ್ಛೇದನದ ವದಂತಿ ನಡುವೆಯೇ ʼಈʼ ಕಾರಣಕ್ಕೆ ದುಬೈ ತಲುಪಿದ ಅಭಿಷೇಕ್-ಐಶ್ವರ್ಯ..!
ಲಕ್ಷ್ಮೀ ಅಲಿಯಾಸ್ ಭೂಮಿಕಾ ರಮೇಶ್ ಮೂಲತಃ ಮೈಸೂರಿನವರು.. ಇವರ ತಂದೆಯ ಹೆಸರು ರಮೇಶ್.. ರಿಯಾಲಿಟಿ ಶೋಗಳ ಮೂಲಕ ಕಿರುತೆರೆಗೆ ಬಂದವರು.. ತದನಂತರ ಭೂಮಿಕಾ ಸಿರೀಯಲ್‌ಗೆ ಬಂದವರು.. ನಾಲಕ್ಕನೇ ತರಗತಿಯಲ್ಲೇ ಭೂಮಿಕಾ ಡಾನ್ಸ್ ಡಿಯಾಲಿಟಿ ಶೋ, ಸೈ ಅಂಟೆ ಸೈ ಮಲ್ಟಿರಿಯಾಲಿಟಿ ಶೋನಲ್ಲೂ ನಟಿ ಭಾಗವಹಿಸಿದ್ದರು.. ಚಿಕ್ಕ ವಯಸ್ಸಿನಲ್ಲೇ ಕನ್ನಡದ ಡಾನ್ಸಿಂಗ್ ಸ್ಟಾರ್‌ನಲ್ಲೂ ಇವರು ಮಿಂಚಿದ್ದರು.. ವಿಶೇಷವೆಂದರೇ ಇವರು ಭರತನಾಟ್ಯ ಪ್ರವೀಣೆಯೂ ಹೌದು..
ಇದನ್ನೂ ಓದಿ-ನನ್ನ ಮೇಲೆ ಗ್ಯಾಂಗ್ ರೇಪ್ʼಗೆ ಯತ್ನ ನಡೆದಿತ್ತು.. ಸ್ಟಾರ್ ನಟಿಯ ಗಂಭೀರ ಆರೋಪ
ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುತ್ತಾ ಬಂದ ನಟಿ ಭೂಮಿಕಾ ತಂದೆ ತಾಯಿಯ ಪ್ರೋತ್ಸಾಹದಿಂದ ನಟನಾ ಲೋಕದಲ್ಲೂ ಹೆಸರು ಮಾಡುತ್ತಿದ್ದಾರೆ.. ಸದ್ಯ ನಟಿ ತೆಲುಗು ಹಾಗೂ ಕನ್ನಡ ಸಿರೀಯಲ್‌ನಲ್ಲಿ ಲೀಡ್ ಹಿರೋಯಿನ್‌ಆಗಿ ಮಿಂಚುತ್ತಿದ್ದಾರೆ.. ಬರೀ ೨೦ ವಯಸ್ಸಿಗೆ ಬಹುಬೇಡಿಕೆಯ ನಟಿಯಾಗಿ ತೆರೆಮೇಲೆ ರಾರಾಜಿಸುತ್ತಿದ್ದಾರೆ..
ಲಕ್ಷ್ಮೀಬಾರಮ್ಮ ಸಿರೀಯಲ್‌ಜೊತೆಗೆ ತೆಲುಗಿನ ಮೇಘಸಂದೇಶಂ ಎಂಬ ಧಾರವಾಹಿಯಲ್ಲೂ ಪ್ರಮುಖ ಪಾತ್ರದಲ್ಲಿ ಭೂಮಿಕಾ ರಮೇಶ್ ನಟಿಸುತ್ತಿದ್ದು, ಅಲ್ಲಿಯೂ ತಮ್ಮ ಅದ್ಭುತ ನಟನೆಯಿಂದ ಎಲ್ಲರ ಗಮನ ಸೆಳೆದಿದ್ದಾರೆ..
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.