ವಿಚ್ಛೇದನದ ವದಂತಿ ನಡುವೆಯೇ ʼಈʼ ಕಾರಣಕ್ಕೆ ದುಬೈ ತಲುಪಿದ ಅಭಿಷೇಕ್-ಐಶ್ವರ್ಯ..!

abhishek bachchan aishwarya rai at dubai airport: ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ವಿಚ್ಛೇದನದ ವದಂತಿಗಳಿಂದ ಬಹಳ ಸಮಯದಿಂದ ಸುದ್ದಿಯಲ್ಲಿದ್ದಾರೆ. ಇಬ್ಬರ ನಡುವೆ ಯಾವುದೂ ಸರಿಯಿಲ್ಲ ಎಂಬ ವರದಿಗಳಿವೆ. ಇದೆಲ್ಲದರ ಮಧ್ಯೆ ದುಬೈ ತಲುಪಿರುವ ದಂಪತಿಗಳ ವೀಡಿಯೊ ವೈರಲ್ ಆಗುತ್ತಿದೆ.

Written by - Savita M B | Last Updated : Sep 2, 2024, 03:14 PM IST
  • ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ವಿಚ್ಛೇದನದ ಸುದ್ದಿಯ ಬಗ್ಗೆ ಇಲ್ಲಿಯವರೆಗೆ ಮೌನ ವಹಿಸಿದ್ದಾರೆ
  • ಸದ್ಯ ಈ ಜೋಡಿಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಿಚ್ಛೇದನದ ವದಂತಿ ನಡುವೆಯೇ ʼಈʼ ಕಾರಣಕ್ಕೆ ದುಬೈ ತಲುಪಿದ ಅಭಿಷೇಕ್-ಐಶ್ವರ್ಯ..!   title=

abhishek bachchan aishwarya rai: ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ವಿಚ್ಛೇದನದ ಸುದ್ದಿಯ ಬಗ್ಗೆ ಇಲ್ಲಿಯವರೆಗೆ ಮೌನ ವಹಿಸಿದ್ದಾರೆ... ಈ ಬಗ್ಗೆ ಇಬ್ಬರೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದೇ ವೇಳೆ ದುಬೈ ವಿಮಾನ ನಿಲ್ದಾಣದಿಂದ ದಂಪತಿಯ ವಿಡಿಯೋವೊಂದು ಹೊರಬಿದ್ದಿದೆ. ಇದನ್ನು ನೋಡಿದ ಕೆಲ ಅಭಿಮಾನಿಗಳು ಖುಷಿಪಟ್ಟರೆ, ಕೆಲವರು ಹಳೆಯದು ಎಂದು ಹೇಳುತ್ತಿದ್ದಾರೆ..

 ಸದ್ಯ ವೈರಲ್‌ ಆಗುತ್ತಿರುವ ಈ ವೀಡಿಯೋದಲ್ಲಿ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ಒಟ್ಟಿಗೆ ತುಂಬಾ ಸಂತೋಷವಾಗಿ ಹೊರಟಿದ್ದಾರೆ.. ಆದರೆ ವಿಡಿಯೋ ಹೊರಬಿದ್ದ ಬೆನ್ನಲ್ಲೇ ಅಭಿಮಾನಿಗಳಿಗೆ ದೊಡ್ಡ ಶಾಕ್ ಕಾದಿತ್ತು. ಅದು ಹಳೆಯ ವಿಡಿಯೋ ಆಗಿದೆ.. 

ಇದನ್ನೂಓದಿ-ಬೆಸ್ಟ್ ಫ್ರೆಂಡ್ ಗಂಡನನ್ನೇ ಮದುವೆಯಾದ ಖ್ಯಾತ ನಟಿ !

ಸೋಷಿಯಲ್ ಮೀಡಿಯಾದಲ್ಲಿ ವೈರಲ್‌ ಆಗಿರುವ ಪ್ರಕಾರ ಅದು ಈ ವರ್ಷದ ಫೆಬ್ರವರಿಯಲ್ಲಿ ಹಂಚಿಕೊಳ್ಳಲಾದ ವಿಡಿಯೋ ಆಗಿದೆ.. ಆ ಸಮಯದಲ್ಲಿ ಕೂಡ, ವಿಚ್ಛೇದನದ ಸುದ್ದಿಯ ನಡುವೆ ದಂಪತಿಗಳು ದುಬೈನಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ ಎಂದು ವದಂತಿಗಳಿವೆ. ಸದ್ಯ ಈ ಜೋಡಿಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

 ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆಗೆ ಇಬ್ಬರೂ ಪ್ರತ್ಯೇಕವಾಗಿ ಆಗಮಿಸಿದಾಗ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ವಿಚ್ಛೇದನದ ಸುದ್ದಿ ಹೊರಬಿದ್ದಿತ್ತು. ಈ ಮದುವೆಯಲ್ಲಿ ಅಭಿಷೇಕ್ ತಮ್ಮ ಕುಟುಂಬದೊಂದಿಗೆ ಕಾಣಿಸಿಕೊಂಡಿದ್ದರು. ಮಗಳು ಆರಾಧ್ಯ ಅವರೊಂದಿಗೆ ಐಶ್ವರ್ಯಾ ರೈ ಆಗಮಿಸಿದ್ದರು.. ಇದೆಲ್ಲದರ ಹೊರತಾಗಿ, ನಟ ವಿಚ್ಛೇದನದ ಪೋಸ್ಟ್ ಅನ್ನು ಲೈಕ್ ಮಾಡಿದ್ದು ಈ ವದಂತಿಗಳಿಗೆ ಪುಷ್ಟಿ ನೀಡಿತು. ಆದರೆ, ಇಲ್ಲಿಯವರೆಗೂ ದಂಪತಿ ಈ ಬಗ್ಗೆ ಮೌನ ವಹಿಸಿದ್ದಾರೆ. 

ಇದನ್ನೂಓದಿ-ನಟನೆಯ ಹೊರತಾಗಿ ಕಿಚ್ಚ ಸುದೀಪ್‌ ಆಯ್ದುಕೊಂಡಿದ್ದ ದಾರಿ ಏನು ಗೊತ್ತಾ? ಅವರು ಮಾಡಿದ ವಿದ್ಯಾಭ್ಯಾಸ ಏನು ಅಂತಾ ಗೊತ್ತಾದ್ರೆ ನೀವು ಶಾಕ್‌ ಆಗ್ತೀರ!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News