ಲೀಲಾವತಿ ಕೊನೆಯವರೆಗೂ ಇದೇ ಚಿಂತೆಯಲ್ಲಿ ನರಳಿದರಂತೆ.. ವಿನೋದ್ ರಾಜ್ ಬಿಚ್ಚಿಟ್ರು ಆ ಸತ್ಯ!
Vinod Raj On Leelavathi Life: ಈ ಹಿಂದಿ ಹಾಡಿನ ಅರ್ಥ ಮಾಡ್ಕೊಂಡ್ರೆ ಎಲ್ಲಾ ಗೊತ್ತಾಗುತ್ತೆ. ಪ್ರೀತಿ ಮಾಡಿದೀವಿ ಕಳ್ಳತನ ಮಾಡಿಲ್ಲ ಅನ್ನೋ ಅರ್ಥದ ಹಾಡು ಇದಾಗಿತ್ತು.
ನೆಲಮಂಗಲ: ಚಂದನವನದ ಹಿರಿಯ ನಟಿ ಲೀಲಾವತಿ ಅಗಲಿ 11ನೇ ದಿನ ಕಳೆದಿದೆ. ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿಯ ತೋಟದ ಮನೆಯಲ್ಲಿ ಮಗ ವಿನೋದ್ ರಾಜ್ ಮತ್ತು ಕುಟುಂಬಸ್ಥರು 11ನೇ ದಿನದ ಕಾರ್ಯವನ್ನು ಇಂದು ನೆರವೇರಿಸಿದರು. ಇದೇ ವೇಳೆ ಮಾತನಾಡಿದ ಲೀಲಾವತಿ ಪುತ್ರ ವಿನೋದ್ ರಾಜ್ ಸತ್ಯವೊಂದನ್ನ ಬಿಚ್ಚಿಟ್ಟಿದ್ದಾರೆ.
ತಾಯಿಯ 11ನೇ ದಿನದ ಕಾರ್ಯ ನೆರವೇರಿಸಿ ಬಳಿಕ ಮಾತನಾಡಿದ ನಟ ವಿನೋದ್ ರಾಜ್, ಜೀವನವೇ ಒಂದು ಭ್ರಮೆ ಅನ್ನಿಸ್ತಿದೆ. ಎಷ್ಟು ಧೈರ್ಯ ತುಂಬಿಕೊಂಡರೂ ದುಃಖದ ಕಟ್ಟೆ ಒಡೆದು ಹೋಗಿತ್ತೆ ಎಂದರು. ಇದೇ ವೇಳೆ ಅಮ್ಮನ ನೆನಪಲ್ಲಿ ವಿನೋದ್ ರಾಜ್ ಹಿಂದಿಯ ಹಾಡು ಹಾಡಿದರು.
ಇದನ್ನೂ ಓದಿ: Dawood Ibrahim: ಬಾಲಿವುಡ್ ಖ್ಯಾತ ನಟಿಯ ಜೊತೆ ದಾವೂದ್ ಇಬ್ರಾಹಿಂ ಪ್ರೇಮ ಸಂಬಂಧ..!
ಈ ಹಿಂದಿ ಹಾಡಿನ ಅರ್ಥ ಮಾಡ್ಕೊಂಡ್ರೆ ಎಲ್ಲಾ ಗೊತ್ತಾಗುತ್ತೆ. ಪ್ರೀತಿ ಮಾಡಿದೀವಿ ಕಳ್ಳತನ ಮಾಡಿಲ್ಲ ಅನ್ನೋ ಅರ್ಥದ ಹಾಡು ಇದಾಗಿತ್ತು.
ನನಗೆ ತಿರತಿರುಗಿ ಕಣ್ಣೀರು ಬರ್ತಿದೆ. ಅವರ ಸ್ಥಾನವನ್ನು ಹೇಗೆ ತುಂಬೋದು ಅಂತ ಭಯ ಶುರುವಾಗಿದೆ. ಸಮಯಕ್ಕೆ ಸರಿಯಾಗಿ ಅವರ ತರ ಕೆಲಸ ಮಾಡೋದು ಕಷ್ಟ. ಅವರು ಇಡೀ ಜೀವನ ಕಳೆದಿದ್ದು ಇನ್ನೊಬ್ಬರನ್ನು ನೋಯಿಸಿದ್ದೀನಾ ಅನ್ನೋ ಚಿಂತೆಯಲ್ಲೇ ಎಂದು ವಿನೋದ್ ರಾಜ್ ತಿಳಿಸಿದರು.
ಬಹುಶಃ ಇವತ್ತು ಅದಕ್ಕೇ ಅವರಿಗೆ ಈ ಸ್ಥಾನ ಬಂದಿದೆ. ಕನ್ನಡ ಸಿನಿರಂಗದ ಪರವಾಗಿ ನಾನು ಯಾವಾಗಲೂ ನಿಂತ್ಕೊಳ್ತೀನಿ ಅನ್ನೋ ಪ್ರತಿಯೊಬ್ಬರೂ ನನಗೆ ಧೈರ್ಯ ತುಂಬಿದ್ದಾರೆ. ನಾನು ಹಿಂದಿಯಲ್ಲಿ ಹಾಡು ಹಾಡಿದೆ ಅಲ್ವಾ ಅಂತ ಕೇಳ್ಬೋದು. ಆದ್ರೆ ಆ ಹಾಡಿನ ಅರ್ಥ ಅಷ್ಟು ಅಮೋಘವಾಗಿದೆ. ಕಟ್ಟೆ ಪೂಜೆ ವೇಳೆಯೂ ತೆಂಗಿನಕಾಯಿ ಚೆನ್ನಾಗಿ ಒಡೆದಿದೆ. ಬಹುಶಃ ಅಮ್ಮನ ಆತ್ಮಕ್ಕೆ ಶಾಂತಿ ಸಿಕ್ಕಿರಬಹುದು ಎಂದರು.
ಇದನ್ನೂ ಓದಿ: ಅನುಷ್ಕಾ ಶರ್ಮಾ ಈ ಒಂದು ಕಾರಣಕ್ಕೆ ವಿರಾಟ್ ಕೊಹ್ಲಿಯನ್ನು ಮದುವೆಯಾಗಿದ್ದಂತೆ!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.