Dawood Ibrahim: ಬಾಲಿವುಡ್‌ ಖ್ಯಾತ ನಟಿಯ ಜೊತೆ ದಾವೂದ್ ಇಬ್ರಾಹಿಂ ಪ್ರೇಮ ಸಂಬಂಧ..!

Dawood Ibrahim Mandakini Love Affair: 1994ರಲ್ಲಿ ವೈರಲ್ ಆಗಿದ್ದ ದಾವೂದ್ ಜತೆಗಿನ ಮಂದಾಕಿನಿಯ ಫೋಟೋಗಳು ಬಾಲಿವುಡ್‌ನಲ್ಲಿ ಸಂಚಲನ ಮೂಡಿಸಿದ್ದವು. ದಾವೂದ್ ಮತ್ತು ಮಂದಾಕಿನಿ ಪ್ರೀತಿಯಲ್ಲಿದ್ದಾರೆ ಎಂದು ಹೇಳಲಾಗಿತ್ತು.

Written by - Chetana Devarmani | Last Updated : Dec 18, 2023, 04:31 PM IST
  • ದಾವೂದ್ ಇಬ್ರಾಹಿಂ ಪ್ರೇಮ ಸಂಬಂಧ
  • ಬಾಲಿವುಡ್‌ ನಟಿಯ ಜೊತೆ ಪ್ರೇಮ ಸಂಬಂಧ
  • ಬಾಲಿವುಡ್‌ನಲ್ಲಿ ಸಂಚಲನ ಮೂಡಿಸಿತ್ತು ಈ ಫೋಟೋ
Dawood Ibrahim: ಬಾಲಿವುಡ್‌ ಖ್ಯಾತ ನಟಿಯ ಜೊತೆ ದಾವೂದ್ ಇಬ್ರಾಹಿಂ ಪ್ರೇಮ ಸಂಬಂಧ..!   title=
Dawood Ibrahim

Dawood Ibrahim Mandakini Love Affair: ಮೋಸ್ಟ್ ವಾಂಟೆಡ್ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸದ್ಯ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ ಎನ್ನಲಾಗಿದೆ. ಪಾಕಿಸ್ತಾನದ ಕರಾಚಿಯಲ್ಲಿರುವ ಆಸ್ಪತ್ರೆಗೆ ದಾವೂದ್ ದಾಖಲಾಗಿದ್ದಾನೆ ಎಂದು ವರದಿಗಳು ತಿಳಿಸಿವೆ. ವರದಿಗಳ ಪ್ರಕಾರ, ವಿಷಪ್ರಾಶಾನದ ಶಂಕೆ ವ್ಯಕ್ತವಾಗಿದೆ ಎನ್ನಲಾಗಿದೆ. 

‘ರಾಮ್ ತೇರಿ ಗಂಗಾ ಮೈಲಿ’ ಸಿನಿಮಾದ ಮೂಲಕ ನಟಿ ಮಂದಾಕಿನಿ ರಾತ್ರೋರಾತ್ರಿ ಸ್ಟಾರ್ ಆದರು. ಭೂಗತ ಪಾತಕಿ ದಾವೂದ್ ಇಬ್ರಾಹಿಂ ಜೊತೆ ನಟಿ ಮಂದಾಕಿನಿ ಹೆಸರು ತಳಕು ಹಾಕಿಕೊಂಡಿತ್ತು. 1994ರಲ್ಲಿ ವೈರಲ್ ಆಗಿದ್ದ ದಾವೂದ್ ಜತೆಗಿನ ಮಂದಾಕಿನಿಯ ಫೋಟೋಗಳು ಬಾಲಿವುಡ್‌ನಲ್ಲಿ ಸಂಚಲನ ಮೂಡಿಸಿದ್ದವು. ದಾವೂದ್ ಮತ್ತು ಮಂದಾಕಿನಿ ಪ್ರೀತಿಯಲ್ಲಿದ್ದಾರೆ ಎಂದು ಹೇಳಲಾಗಿತ್ತು.

26 ವರ್ಷಗಳ ಹಿಂದೆ, ರಾಜ್ ಕಪೂರ್ ಅವರು ಮಂದಾಕಿನಿಯನ್ನು ಗುರುತಿಸಿ 'ರಾಮ್ ತೇರಿ ಗಂಗಾ ಮೈಲಿ' ಚಿತ್ರದಲ್ಲಿ ಅವಕಾಶ ನೀಡಿದರು. ಈ ಸಿನಿಮಾ ಮೂಲಕ ಮಂದಾಕಿನಿ ಟಾಪ್‌ ನಟಿಯಾದರು. ಆಗ ಪ್ರತಿಯೊಬ್ಬ ನಿರ್ಮಾಪಕ-ನಿರ್ದೇಶಕರೂ ತಮ್ಮ ಸಿನಿಮಾದಲ್ಲಿ ಮಂದಾಕಿನಿಯನ್ನು ಹಾಕಿಕೊಳ್ಳಲು ಸಾಲುಗಟ್ಟಿ ನಿಂತರು. ಮಂದಾಕಿನಿಯ ಸೌಂದರ್ಯಕ್ಕೆ ಜನರು ಮನಸೋತರು. 

ಇದನ್ನೂ ಓದಿ: Aishwarya Rai: ವಿಚ್ಛೇದನ ವದಂತಿಗೆ ಬ್ರೇಕ್‌..‌ ನಮ್ಮ ಪ್ರೇಮ ಶಾಶ್ವತ ಎಂದ ಐಶ್ವರ್ಯ ಅಭಿಷೇಕ್! 

ಮಂದಾಕಿನಿಯ ಸೌಂದರ್ಯ ಕಂಡು ಅಂಡರ್ ವರ್ಲ್ಡ್ ಡಾನ್ ದಾವೂದ್ ಇಬ್ರಾಹಿಂ ಕೂಡ ಪ್ರೀತಿಯಲ್ಲಿ ಬಿದ್ದಿದ್ದ ಎನ್ನಲಾಗಿದೆ. ಮಂದಾಕಿನಿ ದಾವೂದ್ ಇಬ್ರಾಹಿಂ ರಹಸ್ಯ ಸಂಬಂಧ ಹೊಂದಿದ್ದರೆಂದು ಹೇಳಲಾಗುತ್ತದೆ. ದಾವೂದ್ ಇಬ್ರಾಹಿಂ ಜೊತೆಗಿನ ಸಂಬಂಧದಿಂದಲೇ ಮಂದಾಕಿನಿ ಸಿನಿಮಾಗಳಲ್ಲಿ ನಟಿಸುವುದನ್ನು ಸಹ ನಿಲ್ಲಿಸಿದರು ಎಂದು ಹೇಳಲಾಗುತ್ತದೆ.  

ಮಂದಾಕಿನಿ ಮತ್ತು ದಾವೂದ್ ನಡುವಿನ ಪ್ರೇಮದ ಬಗ್ಗೆ 1994 ರಲ್ಲಿ ಚರ್ಚೆಗಳು ಪ್ರಾರಂಭವಾದವು. ದಾವೂದ್ ಇಬ್ರಾಹಿಂ ಜೊತೆ ಮಂದಾಕಿನಿಯ ಹೆಸರು ತಳುಕು ಹಾಕಲು ಆರಂಭಿಸಿದ ತಕ್ಷಣ ಆಕೆಯ ಸಿನಿಮಾ ವೃತ್ತಿಜೀವನ ಅಧೋಗತಿಗೆ ಇಳಿಯತೊಡಗಿತು. 1994ರಲ್ಲಿ ಮಂದಾಕಿನಿ ಮತ್ತು ದಾವೂದ್ ಇಬ್ರಾಹಿಂ ಪ್ರೇಮದ ಬಗ್ಗೆ ಮಾತುಕತೆ ಶುರುವಾಗಿತ್ತು. ಆ ಸಮಯದಲ್ಲಿ ದುಬೈನ ಕ್ರಿಕೆಟ್ ಸ್ಟೇಡಿಯಂನಲ್ಲಿ ಮಂದಾಕಿನಿ ಮತ್ತು ದಾವೂದ್ ಇಬ್ರಾಹಿಂ ಒಟ್ಟಿಗೆ ಇದ್ದ ಫೋಟೋಗಳು ಹರಿದಾಡಿದವು. ಈ ಫೋಟೋ ಎಲ್ಲೆಡೆ ಸಂಚಲನ ಸೃಷ್ಟಿಸಿತ್ತು. 

Dawood Ibrahim Mandakini

ಅದೇ ಸಮಯದಲ್ಲಿ ಮುಂಬೈ ಮಾಯಾನಗರಿ ಬಾಂಬ್ ಸ್ಫೋಟದಿಂದ ತತ್ತರಿಸಿತ್ತು. ಸ್ಫೋಟದ ಪ್ರಮುಖ ಆರೋಪಿ ದಾವೂದ್ ಇಬ್ರಾಹಿಂ ಆಗಿದ್ದ. ಆತ ಭಾರತದಿಂದ ತಲೆಮರೆಸಿಕೊಂಡಿದ್ದ. ಹೀಗಿರುವಾಗ ದಾವೂದ್ ಇಬ್ರಾಹಿಂ ಜೊತೆಗಿನ ಮಂದಾಕಿನಿಯ ಫೋಟೋ ವೈರಲ್ ಆಗಿದ್ದು ಎಲ್ಲರ ಮನದಲ್ಲಿ ಭಯ ಹುಟ್ಟಿಸಿತ್ತು.

ಇದನ್ನೂ ಓದಿ: Bigg Boss 10 ಕ್ಕೆ ಬರೋ ಆಸೆನೇ ಇರ್ಲಿಲ್ಲ, ಆದ್ರೆ ಸ್ನೇಹಿತ್‌ ಬಿಗ್‌ಬಾಸ್‌ಗೆ ಬಂದಿದ್ದೇ ಇವರಿಗಾಗಿ! 

ಆಗ ಬಾಲಿವುಡ್ ನಲ್ಲಿ ದಾವೂದ್ ಇಬ್ರಾಹಿಂ ಪ್ರಭಾವ ಹೆಚ್ಚಿತ್ತು. ಹಿಂದಿ ಚಿತ್ರರಂಗದಲ್ಲಿ ಆಕೆಯ ಪಾರ್ಟಿಗಳು ಸದಾ ಸುದ್ದಿಯಲ್ಲಿದ್ದವು. ಆದರೆ ಸಂದರ್ಶನವೊಂದರಲ್ಲಿ ಈ ವಿಚಾರದ ಬಗ್ಗೆ  ಮಂದಾಕಿನಿ ಅನ್ನು ಕೇಳಿದಾಗ, ಅದನ್ನು ನಿರಾಕರಿಸಿದರು. ದಾವೂದ್ ಇಬ್ರಾಹಿಂ ಜೊತೆ ಕೇವಲ ಸ್ನೇಹ ಸಂಬಂಧವನ್ನು ಹೊಂದಿದ್ದಾಗಿ ಅವರು ಹೇಳಿದರು. 

ಆ ಬಳಿಕ ಮಂದಾಕಿನಿ ಸಿನಿರಂಗವನ್ನು ತೊರೆದು ಬೌದ್ಧ ಸನ್ಯಾಸಿಯನ್ನು ವಿವಾಹವಾದರು. ಮಂದಾಕಿನಿ 1990 ರಲ್ಲಿ ಬೌದ್ಧ ಸನ್ಯಾಸಿ ಡಾ. ಕಗ್ಯೂರ್ ಟಿ ರಿಂಪೋಚೆ ಠಾಕೂರ್ ಅವರನ್ನು ಮದುವೆಯಾದರು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News