Bappi Lahiri Dies: ಬಾಲಿವುಡ್‌ಗೆ ಡಿಸ್ಕೋ ಸಂಗೀತ ನೀಡಿದ ಖ್ಯಾತ ಗಾಯಕ ಮತ್ತು ಸಂಗೀತ ನಿರ್ದೇಶಕ ಬಪ್ಪಿ ಲಾಹಿರಿ (Bappi Lahiri Dies) ಮುಂಬೈನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಮಾಹಿತಿಯ ಪ್ರಕಾರ, ಬಪ್ಪಿ ಲಾಹಿರಿ ನಿನ್ನೆ ರಾತ್ರಿ ಮನೆಯಲ್ಲಿದ್ದರು ಮತ್ತು ಅಸ್ವಸ್ಥರಾಗಿದ್ದರು, ನಂತರ ಅವರನ್ನು ಜುಹುದಲ್ಲಿನ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ.


COMMERCIAL BREAK
SCROLL TO CONTINUE READING

ದೀರ್ಘಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಬಪ್ಪಿ ಲಾಹಿರಿ (Bappi Lahiri) ಕಳೆದ ಒಂದು ತಿಂಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಮತ್ತು ಸೋಮವಾರವಷ್ಟೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ತೆರಳಿದ್ದರು. ಆದರೆ ಮಂಗಳವಾರ, ಅವರ ಆರೋಗ್ಯ ಹಠಾತ್ ಹದಗೆಟ್ಟ ಹಿನ್ನಲೆಯಲ್ಲಿ ಅವರ ಕುಟುಂಬದವರು ತಕ್ಷಣವೇ ವೈದ್ಯರನ್ನು ಮನೆಗೆ ಕರೆಸಿದ್ದಾರೆ. ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದ ಕಾರಣ ವೈದ್ಯರ ಸಲಹೆ ಮೇರೆಗೆ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅವರಿಗೆ ಅನೇಕ ಆರೋಗ್ಯ ಸಮಸ್ಯೆಗಳಿದ್ದವು.  ಕಳೆದ ರಾತ್ರಿ OSA (ಅಬ್ಸ್ಟ್ರಕ್ಟಿವ್ ಸ್ಲೀಪ್ ಅಪ್ನಿಯಾ) ನಿಂದಾಗಿ ಅವರು ನಿಧನರಾದರು ಎಂದು ಮೂಲಗಳು ತಿಳಿಸಿವೆ.


ಇದನ್ನೂ ಓದಿ- Bachchan Pandey: ಬಚ್ಚನ್ ಪಾಂಡೆ ಹೊಸ ಪೋಸ್ಟರ್ ರಿಲೀಸ್.. ಅಕ್ಷಯ್ ಕುಮಾರ್ ಲುಕ್ ಗೆ ಫ್ಯಾನ್ಸ್ ಫಿದಾ


69 ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ ಬಪ್ಪಿ ಲಾಹಿರಿ:
ಬಪ್ಪಿ ಲಾಹಿರಿ (Bappi Lahiri Dies) ಇಂದು ಮುಂಬೈನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ 69 ವರ್ಷ ವಯಸ್ಸಾಗಿತ್ತು. ಬಪ್ಪಿ ಲಾಹಿರಿ ಅವರು 1970-80ರ ದಶಕದ ಆರಂಭದಲ್ಲಿ 'ಚಲ್ತೇ ಚಲ್ತೆ', 'ಡಿಸ್ಕೋ ಡ್ಯಾನ್ಸರ್' ಮತ್ತು 'ಶರಾಬಿ'ಯಂತಹ ಹಲವಾರು ಚಲನಚಿತ್ರಗಳಲ್ಲಿ ಜನಪ್ರಿಯ ಹಾಡುಗಳಿಂದ ಹೆಸರುವಾಸಿಯಾಗಿದ್ದಾರೆ. ಅವರ ಕೊನೆಯ ಬಾಲಿವುಡ್ ಹಾಡು 'ಬ್ಯಾಂಕಸ್' 2020 ರ ಚಿತ್ರ 'ಬಾಘಿ 3' ಗಾಗಿ ಆಗಿತ್ತು.
 
ಇದನ್ನೂ ಓದಿ- PUSHPA SAREE:ಮಾರುಕಟ್ಟೆಗೆ ಬಂತು ಶ್ರೀವಲ್ಲಿ ಸೀರೆ.. ಹೆಂಗಳೆಯರ ಮನ ಗೆಲ್ಲುತ್ತಾ ಪುಷ್ಪ ಸಾರೀ!

ಬಪ್ಪಿ ಲಾಹಿರಿಯವರ ನಿಜವಾದ ಹೆಸರು:
ಬಪ್ಪಿ ಲಾಹಿರಿಯವರ ನಿಜವಾದ ಹೆಸರು ಅಲೋಕೇಶ್ ಲಾಹಿರಿ. ಅವರು 27 ನವೆಂಬರ್ 1952 ರಂದು ಪಶ್ಚಿಮ ಬಂಗಾಳದ ಜಲ್ಪೈಗುರಿಯಲ್ಲಿ ಜನಿಸಿದರು. ಅವರ ತಂದೆಯ ಹೆಸರು ಅಪರೇಶ್ ಲಾಹಿರಿ ಮತ್ತು ತಾಯಿಯ ಹೆಸರು ಬನ್ಸಾರಿ ಲಾಹಿರಿ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.