Valentine's Day:ಅರ್ಜುನ್ ಕಪೂರ್ "ನನ್ನವನು" ಎಂದ ಮಲೈಕಾ! ಬಿಗಿಯಾಗಿ ಅಪ್ಪಿಕೊಂಡ ಪೋಸ್ಟ್ ವೈರಲ್

ಅರ್ಜುನ್ ಕಪೂರ್ ಈ ಹಿಂದೆ ಮಲೈಕಾ ಅರೋರಾ ಜೊತೆಗಿನ ಬೇರ್ಪಡುವಿಕೆಯ ವದಂತಿಗಳನ್ನು ತಳ್ಳಿಹಾಕಿದ್ದರು. 

Edited by - Chetana Devarmani | Last Updated : Feb 14, 2022, 06:03 PM IST
  • ನಟಿ ಮಲೈಕಾ ಅರೋರಾ ಮತ್ತು ನಟ ಅರ್ಜುನ್ ಕಪೂರ್ ತಮ್ಮ ಪ್ರೀತಿಯನ್ನು ಬಿಚ್ಚಿಟ್ಟಿದ್ದಾರೆ
  • ಪ್ರೇಮಿಗಳ ದಿನದಂದು ತನ್ನ ಗೆಳೆಯ ಅರ್ಜುನ್‌ಗಾಗಿ ಮಲೈಕಾ Instagram ನಲ್ಲಿ ಪೋಸ್ಟ್ ಹಾಕಿದ್ದಾರೆ
  • ಅರ್ಜುನ್ ಕಪೂರ್ "ನನ್ನವನು" ಎಂದು ಮಲೈಕಾ ಹೇಳಿದ್ದಾರೆ
Valentine's Day:ಅರ್ಜುನ್ ಕಪೂರ್ "ನನ್ನವನು" ಎಂದ ಮಲೈಕಾ! ಬಿಗಿಯಾಗಿ ಅಪ್ಪಿಕೊಂಡ ಪೋಸ್ಟ್ ವೈರಲ್   title=
ನಟಿ ಮಲೈಕಾ ಅರೋರಾ ಮತ್ತು ನಟ ಅರ್ಜುನ್ ಕಪೂರ್

ನವದೆಹಲಿ: ರಿಯಾಲಿಟಿ ಶೋ ಜಡ್ಜ್ ಬಾಲಿವುಡ್ ನಟಿ ಮಲೈಕಾ ಅರೋರಾ (Malaika Arora) ಮತ್ತು ನಟ ಅರ್ಜುನ್ ಕಪೂರ್ ತಮ್ಮ ಪ್ರೀತಿಯನ್ನು ಬಿಚ್ಚಿಟ್ಟಿದ್ದಾರೆ. ಪ್ರೇಮಿಗಳ ದಿನದಂದು (Valentine's Day) ತನ್ನ ಗೆಳೆಯ ಅರ್ಜುನ್‌ಗಾಗಿ ಮಲೈಕಾ Instagram ನಲ್ಲಿ ಪೋಸ್ಟ್ ಹಾಕಿದ್ದಾರೆ. 

ಇದನ್ನೂ ಓದಿ:Radhe Shyam:ವ್ಯಾಲೆಂಟೈನ್ ಡೇ ಗಿಫ್ಟ್.. ಪೂಜಾ ಹೆಗ್ಡೆಗೆ ಮುದ್ದಾಗಿ ಪ್ರಪೋಸ್ ಮಾಡಿದ ಪ್ರಭಾಸ್!

ಅಲ್ಲದೆ ರೋಮ್ಯಾಂಟಿಕ್ ಫೋಟೋ ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಮಲೈಕಾ ತಮ್ಮ ಕಣ್ಣುಗಳನ್ನು ಮುಚ್ಚಿ ಅರ್ಜುನ್‌ ಅವರನ್ನು ಬಿಗಿಯಾಗಿ ಅಪ್ಪಿಕೊಂಡಿದ್ದಾರೆ. ಅರ್ಜುನ್ ಅವರ ಹಣೆಗೆ ಮುತ್ತಿಡುತ್ತಿದ್ದಾರೆ. 

ಮಲೈಕಾ ಕೆಂಪು ಹೃದಯದ ಎಮೋಜಿಯೊಂದಿಗೆ 'ನನ್ನದು' ಎಂದು ಶೀರ್ಷಿಕೆ ನೀಡಿ, ಈ ಫೋಟೋ ಹಂಚಿಕೊಂಡಿದ್ದಾರೆ.

 

 

ಅರ್ಜುನ್ (Arjun Kapoor) ಅವರ ಚಿಕ್ಕಮ್ಮ ಮತ್ತು 'ಫ್ಯಾಬುಲಸ್ ಲೈವ್ಸ್ ಆಫ್ ಬಾಲಿವುಡ್ ವೈವ್ಸ್' ಖ್ಯಾತಿಯ ಮಹೀಪ್ ಕಪೂರ್, ಹೃದಯದ ಎಮೋಜಿಯನ್ನು ಕಾಮೆಂಟ್ ಮಾಡಿದ್ದಾರೆ. ನಟ ಅಕ್ಷಯ್ ಕುಮಾರ್ ಅವರ ಪತ್ನಿ ಟ್ವಿಂಕಲ್ ಖನ್ನಾ ಅವರು ಕೆಂಪು ಹೃದಯದ ಎಮೋಜಿ ಕಾಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ:"ಮನಸ್ಸಿನಲ್ಲಿ ನಾನು ಈಗಾಗಲೇ ರಣಬೀರ್ ಕಪೂರ್ ಅವರನ್ನು ಮದುವೆಯಾಗಿದ್ದೇನೆ": ಆಲಿಯಾ ಭಟ್

ಇತ್ತ ಅರ್ಜುನ್ ಕಪೂರ್ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಪ್ರೀತಿಗೆ ಸಂಬಂಧಿಸಿದ ಸಾಲುಗಳನ್ನು ಹಂಚಿಕೊಂಡಿದ್ದಾರೆ. 

Arjun Kapoor Instagram Story

ಈ ಹಿಂದೆ ಇಬ್ಬರೂ ಮಾಲ್ಡೀವ್ಸ್‌ನಲ್ಲಿ ಒಟ್ಟಿಗೆ ಹೊಸ ವರ್ಷವನ್ನು ಆಚರಿಸಿದ್ದರು. ಬೀಚ್‌ವೇರ್‌ನಲ್ಲಿ ಮಲೈಕಾ ಅವರ ಫೋಟೋವನ್ನು ಹಂಚಿಕೊಂಡ ನಟ ಅರ್ಜುನ್ ಕಪೂರ್ ತಮ್ಮ ಅನುಯಾಯಿಗಳಿಗೆ 'ಹೊಸ ವರ್ಷದ ಶುಭಾಶಯಗಳು' ಎಂದು ಹಾರೈಸಿದ್ದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News