Vikrant Rona: ವಿಕ್ರಾಂತ್ ರೋಣ ಸಿನಿಮಾದಲ್ಲಿ ಮಾಲಾಶ್ರೀ ಅಭಿನಯ! ಯಾವ ಪಾತ್ರ?
Vikrant Rona: ಬಹುನಿರೀಕ್ಷಿತ ವಿಕ್ರಾಂತ್ ರೋಣ ಸಿನಿಮಾಗೆ ಇನ್ನೇನು 15 ದಿನಗಳು ಮಾತ್ರ ಬಾಕಿಯಿವೆ. ಚಿತ್ರದ ಬಿಡುಗಡೆ ದಿನಾಂಕ ಹತ್ತಿರವಾದಂತೆ ಸಿನಿಮಾ ನೋಡುವ ಕಾತುರ ಅಭಿಮಾನಿಗಳಲ್ಲಿ ಹೆಚ್ಚಾಗಿದೆ.
Malashree in Vikrant Rona: ಬಹುನಿರೀಕ್ಷಿತ ವಿಕ್ರಾಂತ್ ರೋಣ ಸಿನಿಮಾಗೆ ಇನ್ನೇನು 15 ದಿನಗಳು ಮಾತ್ರ ಬಾಕಿಯಿವೆ. ಚಿತ್ರದ ಬಿಡುಗಡೆ ದಿನಾಂಕ ಹತ್ತಿರವಾದಂತೆ ಸಿನಿಮಾ ನೋಡುವ ಕಾತುರ ಅಭಿಮಾನಿಗಳಲ್ಲಿ ಹೆಚ್ಚಾಗಿದೆ. ಸಿನಿ ಪ್ರಿಯರ ಈ ಕುತೂಹಲಕ್ಕೆ ವಿಕ್ರಾಂತ್ ರೋಣ ತಂಡ ಸಹ ನೀರೆರೆಯುತ್ತಿದೆ. ಇಂದು ʻಹೇ ಫಕೀರಾʼ ಲಿರಿಕಲ್ ಸಾಂಗ್ ರಿಲೀಸ್ ಆಗಿದ್ದು, ಈ ವಿಡಿಯೋ ನೋಡಿದವರಿಗೆ ಮತ್ತೊಂದು ಪ್ರಶ್ನೆ ಹುಟ್ಟಿಕೊಂಡಿದೆ.
ಇದನ್ನೂ ಓದಿ: Hey Fakira: ʻವಿಕ್ರಾಂತ್ ರೋಣʼ ಸಿನಿಮಾದ ʻಹೇ ಫಕೀರಾʼ ಸಾಂಗ್ ರಿಲೀಸ್
ಹೌದು, ವಿಶ್ವಾದ್ಯಂತ ಬೇರೆ ಬೇರೆ ಭಾಷೆಗಳಲ್ಲಿ ರಿಲೀಸ್ ಆಗುತ್ತಿರುವ ಈ ಸಿನಿಮಾದಲ್ಲಿ ಕಿಚ್ಚ ಸುದೀಪ್ ವಿಕ್ರಾಂತ್ ರೋಣ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಜೊತೆಗೆ ಇದೇ ಮೊದಲ ಬಾರಿಗೆ ಶ್ರೀಲಂಕಾ ಬೆಡಗಿ ಜಾಕ್ವೆಲಿನ್ ಕನ್ನಡಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಅಲ್ಲದೇ ನಿರೂಪ್ ಭಂಡಾರಿ ಸಹ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಆದರೆ ಇವರ ಜೊತೆ ಕನಸಿನ ರಾಣಿ ಮಾಲಾಶ್ರೀ ಸಹ ಕಾಣಿಸಿಕೊಳ್ಳಲಿದ್ದಾರಾ ಎಂಬ ಪ್ರಶ್ನೆ ಇದೀಗ ಅಭಿಮಾನಿಗಳಲ್ಲಿ ಮೂಡಿದೆ. ಇದಕ್ಕೆ ಕಾರಣವೂ ಇದೆ.
ಇಂದು ರಿಲೀಸ್ ಆಗಿರುವ ವಿಕ್ರಾಂತ್ ರೋಣ ಸಿನಿಮಾದ ಮೂರನೇ ಲಿರಿಕಲ್ ಸಾಂಗ್‌ನಲ್ಲಿ ಮಾಲಾಶ್ರೀ ಕಾಣಿಸಿಕೊಂಡಿದ್ದಾರೆ. ಇದೇ ದೃಶ್ಯ ಇದೀಗ ಎಲ್ಲರ ತಲೆಯಲ್ಲೂ ಹುಳಬಿಟ್ಟಿದೆ. ಅನೇಕ ವಿಶೇಷತೆಗಳನ್ನು ಒಳಗೊಂಡಿರುವ ವಿಕ್ರಾಂತ್ ರೋಣ ಸಿನಿಮಾ ಇದೀಗ ಮತ್ತೊಂದು ಕುತೂಹಲಕ್ಕೆ ಕಾರಣವಾಗಿದೆ.
ಮಾಲಾಶ್ರೀ ಅವರ ಪಾತ್ರವೇನು?
ತನ್ನದೇ ಅಭಿನಯ ಶೈಲಿಯಿಂದ ಮಾಸ್ ಲುಕ್ ಮೂಲಕ ಎಲ್ಲರ ಮನಗೆದ್ದಿರುವ ಮಾಲಾಶ್ರೀಗೆ ಅವರದ್ದೇ ಆದ ಅಭಿಮಾನಿ ಬಳಗವಿದೆ. ಹಾಗೊಂದು ವೇಳೆ ಈ ಸಿನಿಮಾದಲ್ಲಿ ಮಾಲಾಶ್ರೀ ಕಾಣಿಸಿಕೊಂಡಿದ್ದರೆ ಅದು ಯಾವ ಪಾತ್ರದಲ್ಲಿ ಎಂಬು ಪ್ರಶ್ನೆ ಇದೀಗ ಎಲ್ಲರನ್ನೂ ಕಾಡುತ್ತಿದೆ.
Shiva Rajkumar Birthday: ಶಿವಣ್ಣ ನಟನೆಯ ʻಘೋಸ್ಟ್ʼ ಪೋಸ್ಟರ್ ರಿಲೀಸ್ ಮಾಡಿದ ಕಿಚ್ಚ ಸುದೀಪ್
ಶಾಲಿನಿ ಆರ್ಟ್ಸ್ ಬ್ಯಾನರ್ ಅಡಿ ಜಾಕ್ ಮಂಜು ಚಿತ್ರ ನಿರ್ಮಾಣ ಮಾಡಿದ್ದು, ಅಲಂಕಾರ್ ಪಾಂಡಿಯನ್ ಸಹ-ನಿರ್ಮಾಪಕರಾಗಿದ್ದಾರೆ. 'ವಿಕ್ರಾಂತ್ ರೋಣ' ಸಿನಿಮಾ ಹವಾ ಎಲ್ಲೆಲ್ಲೂ ಹಬ್ಬಿದ್ದು, ಮಾಲಾಶ್ರೀ ಅವರ ಪಾತ್ರವೇನು ಎಂಬುದು ಮಾತ್ರ ಎಲ್ಲರ ಕುತೂಹಲವಾಗಿಯೇ ಉಳಿದಿದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.