Shiva Rajkumar Birthday: ಶಿವಣ್ಣ ನಟನೆಯ ʻಘೋಸ್ಟ್ʼ ಪೋಸ್ಟರ್ ರಿಲೀಸ್ ಮಾಡಿದ ಕಿಚ್ಚ ಸುದೀಪ್‌ ‌

Ghost movie Poster : 60ನೇ ವರ್ಷದ ಜನ್ಮದಿನಕ್ಕೆ ಶಿವಣ್ಣನಿಗೆ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ. ಈ ವಿಶೇಷ ಸಂದರ್ಭದಲ್ಲಿ ಶಿವರಾಜ್‌ಕುಮಾರ್‌ ಅಭಿನಯದ, ನಿರ್ದೇಶಕ ಶ್ರೀನಿ ಆಕ್ಷನ್‌ ಕಟ್‌ ಹೇಳಲಿರುವ ಆಕ್ಷನ್ ಥ್ರಿಲ್ಲರ್‌ ಸಿನಿಮಾ ʻಘೋಸ್ಟ್‌ʼ ಚಿತ್ರದ ಪೋಸ್ಟರ್‌ ಬಿಡುಗಡೆ ಮಾಡಲಾಗಿದೆ.

Written by - Chetana Devarmani | Last Updated : Jul 12, 2022, 11:48 AM IST
  • ಸೆಂಚ್ಯೂರಿ ಸ್ಟಾರ್‌ ಶಿವರಾಜ್‌ಕುಮಾರ್‌ ಅವರಿಗೆ ಹುಟ್ಟುಹಬ್ಬದ ಸಂಭ್ರಮ
  • ಆಕ್ಷನ್ ಥ್ರಿಲ್ಲರ್‌ ಸಿನಿಮಾ ʻಘೋಸ್ಟ್‌ʼ ಚಿತ್ರದ ಪೋಸ್ಟರ್‌ ಬಿಡುಗಡೆ
  • ಪೋಸ್ಟರ್ ಬಿಡುಗಡೆ ಮಾಡಿದ ನಟ ಕಿಚ್ಚ ಸುದೀಪ್
Shiva Rajkumar Birthday: ಶಿವಣ್ಣ ನಟನೆಯ ʻಘೋಸ್ಟ್ʼ ಪೋಸ್ಟರ್ ರಿಲೀಸ್ ಮಾಡಿದ ಕಿಚ್ಚ ಸುದೀಪ್‌  ‌ title=
ಘೋಸ್ಟ್‌

Ghost Poster : ಇಂದು ಸೆಂಚ್ಯೂರಿ ಸ್ಟಾರ್‌ ಶಿವರಾಜ್‌ಕುಮಾರ್‌ ಅವರಿಗೆ ಹುಟ್ಟುಹಬ್ಬದ ಸಂಭ್ರಮ. 60ನೇ ವರ್ಷದ ಜನ್ಮದಿನಕ್ಕೆ ಶಿವಣ್ಣನಿಗೆ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ. ಈ ವಿಶೇಷ ಸಂದರ್ಭದಲ್ಲಿ ಶಿವರಾಜ್‌ಕುಮಾರ್‌ ಅಭಿನಯದ, ನಿರ್ದೇಶಕ ಶ್ರೀನಿ ಆಕ್ಷನ್‌ ಕಟ್‌ ಹೇಳಲಿರುವ ಆಕ್ಷನ್ ಥ್ರಿಲ್ಲರ್‌ ಸಿನಿಮಾ ʻಘೋಸ್ಟ್‌ʼ ಚಿತ್ರದ ಪೋಸ್ಟರ್‌ ಬಿಡುಗಡೆ ಮಾಡಲಾಗಿದೆ.

ಇದನ್ನೂ ಓದಿ: ಅರ್ಜುನ್​ ಜನ್ಯ ಆಕ್ಷನ್‌ ಕಟ್‌ ಹೇಳಲಿರುವ ಶಿವಣ್ಣನ ಚಿತ್ರದ ಟೈಟಲ್​ ಅನೌನ್ಸ್​

ಸೆಂಚೂರಿ ಸ್ಟಾರ್ ಹುಟ್ಟುಹಬ್ಬದ ಅಂಗವಾಗಿ ಚಿತ್ರತಂಡ ಪೋಸ್ಟರ್ ಬಿಡುಗಡೆ ಮಾಡಿದೆ. ಪೋಸ್ಟರ್ ಅನ್ನು ನಟ ಕಿಚ್ಚ ಸುದೀಪ್ ಅಧಿಕೃತವಾಗಿ ಬಿಡುಗಡೆ ಮಾಡಿದ್ದಾರೆ. 'ಕಿಂಗ್ ಆಫ್ ಆಲ್‌ ಮಾಸಸ್' ಎಂಬ ಅಡಿಬರಹದೊಂದಿಗೆ ಪೋಸ್ಟರ್‌ನ್ನು ರಿಲೀಸ್‌ ಮಾಡಿದ್ದಾರೆ. ಈ ಪೋಸ್ಟರ್‌ನಲ್ಲಿ ರಿವಾಲ್ವರ್, ಜೈಲು, ಬೈಕ್‌ ಚೇಸ್‌, ಎತ್ತರದ ಕಟ್ಟಡಗಳು ಇವೆ. ಶಿವಣ್ಣನ ಹಣೆಯ ಮೇಲೆ ‘ಡೇಂಜರ್’ ಎಂಬ ಟ್ಯಾಟೂ ಇದೆ. 

 

 

ಸಂದೇಶ್ ಪ್ರೊಡಕ್ಷನ್ಸ್ ನಿರ್ಮಿಸುತ್ತಿರುವ ಈ ಬಹುಭಾಷಾ ಚಿತ್ರದ ಶೂಟಿಂಗ್ ಆಗಸ್ಟ್‌ನಲ್ಲಿ ಪ್ರಾರಂಭವಾಗಲಿದೆ. ಘೋಸ್ಟ್‌ಗೆ ಅರ್ಜುನ್ ಜನ್ಯ ಅವರ ಸಂಗೀತ ಮತ್ತು ಮಹೇಂದ್ರ ಸಿಂಹ ಅವರ ಛಾಯಾಗ್ರಹಣವಿದೆ. ಇದೊಂದು ಪಕ್ಕಾ ಮಾಸ್‌ ಸಿನಿಮಾ ಆಗಿರಲಿದೆ ಎಂಬುದು ಪೋಸ್ಟರ್‌ ಮೂಲಕವೇ ತಿಳಿದುಬರುತ್ತಿದೆ. 

ಇದನ್ನೂ ಓದಿ: Rashmika Mandanna: ಟೈಗರ್​ ಶ್ರಾಫ್ ಜೊತೆಗಿನ ಗಾಸಿ​ಪ್​ ನಿಜ ಎಂದ ರಶ್ಮಿಕಾ ಮಂದಣ್ಣ

ಘೋಸ್ಟ್ ಸಿನಿಮಾಗೆ ಮಾಸ್ತಿ ಮತ್ತು ಪ್ರಸನ್ನ ವಿ.ಎಂ ಸಂಭಾಷಣೆಗಳನ್ನು ಬರೆಯಲಿದ್ದಾರೆ. ಘೋಸ್ಟ್ ಚಿತ್ರದ ತಯಾರಿಯಲ್ಲಿ ನಿರತರಾಗಿರುವ ಶ್ರೀನಿ ಅವರು ತಮ್ಮ ಇನ್ನೊಂದು ಪ್ರಾಜೆಕ್ಟ್ ಬೀರ್ಬಲ್ 2 ಅನ್ನು ಇತ್ತೀಚೆಗೆ ಘೋಷಿಸಿದ್ದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
  

Trending News