ಬೆಂಗಳೂರು: ಚಾಲೆಂಜಿಂಗ್ ಸ್ಟಾರ್, ಡಿ ಬಾಸ್ ಖ್ಯಾತಿಯ ನಟ ದರ್ಶನ್ ಅವರ ‘ಕ್ರಾಂತಿ’ ಸಿನಿಮಾದ ಕೆಲಸಗಳು ಭರದಿಂದ ಸಾಗುತ್ತಿವೆ. ಈ ಮಧ್ಯೆ ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಅವರ ಹೊಸ ಚಿತ್ರವೊಂದರ ಮುಹೂರ್ತ ಸದ್ದಿಲ್ಲದೆ ನೆರವೇರಿದೆ. ರಾಕ್‍ಲೈನ್ ವೆಂಕಟೇಶ್ ನಿರ್ಮಾಣದ ಈ ಹೊಸ ಚಿತ್ರಕ್ಕೆ ತರುಣ್ ಸುಧೀರ್ ಆಕ್ಷನ್ ಕಟ್ ಹೇಳಲಿದ್ದಾರೆ.


COMMERCIAL BREAK
SCROLL TO CONTINUE READING

ಸ್ಯಾಂಡಲ್‍ವುಡ್‍ಗೆ ‘ಕನಸಿನ ರಾಣಿ’ಯ ಪುತ್ರಿಯ ಎಂಟ್ರಿ!


ಹೌದು, ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆಗೆ ನಾಯಕಿಯಾಗಿ ‘ಕನಸಿನ ರಾಣಿ’ ಮಾಲಾಶ್ರೀ ಪುತ್ರಿ ಸ್ಕ್ರೀನ್ ಶೇರ್ ಮಾಡಲಿದ್ದು, ಈ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲಿದ್ದಾರೆ. 90ರ ದಶಕದಲ್ಲಿ ಕನ್ನಡ ಚಿತ್ರರಂಗದ ಲೇಡಿ ಸೂಪರ್ ಸ್ಟಾರ್ ಆಗಿ ಮಿಂಚಿದ ನಟಿ ಮಾಲಾಶ್ರೀಯವರ ಮಗಳು ರಾಧನಾ ರಾಮ್ ಈ ಚಿತ್ರದ ನಾಯಕಿಯಾಗಿ ಸ್ಯಾಂಡಲ್‍ವುಡ್‍ಗೆ ಎಂಟ್ರಿ ಕೊಡಲಿದ್ದಾರೆ. ಖ್ಯಾತ ನಿರ್ಮಾಪಕ ದಿವಂಗತ ರಾಮುರವರ ಪುತ್ರಿ ದರ್ಶನ್ ಜೊತೆಗೆ ನಾಯಕಿಯಾಗಿ ಚಿತ್ರರಂಗಕ್ಕೆ ಕಾಲಿಡುತ್ತಿರುವುದು ವಿಶೇಷವಾಗಿದೆ.


ಗಾಳಿಪಟ -2 ಹಾಡಿಗೆ ಕಿಚ್ಚನ ಶಹಬ್ಬಾಶ್‌ಗಿರಿ: ʼಪ್ರಾಯಶಃʼ ಸಾಂಗ್‌ ಹಾಡಿದ ಅಭಿನಯ ಚಕ್ರವರ್ತಿ


ಈ ಚಿತ್ರದ ರಾಧನಾ ರಾಮ್ ಸ್ಯಾಂಡಲ್‍ವುಡ್‍ನಲ್ಲಿ ಕಮಾಲ್ ಮಾಡಲಿದ್ದಾರೆಯೇ ಎಂಬುದನ್ನು ಕಾದು ನೋಡಬೇಕಿದೆ. ಚಿತ್ರದ ಶೀರ್ಷಿಕೆ, ಪ್ರಮುಖ ಪಾತ್ರಗಳು ಸೇರಿದಂತೆ ಇನ್ನಿತರ ವಿಷಯಗಳನ್ನು ಸದ್ಯದಲ್ಲಿಯೇ ಬಹಿರಂಗಪಡಿಸುತ್ತೇವೆ ಎಂದು ಚಿತ್ರತಂಡವು ಹೇಳಿಕೊಂಡಿದೆ.


ಈಜುಡುಗೆಯಲ್ಲಿ ಸಮುದ್ರಕ್ಕೆ ಹಾರಿದ ಸುಶ್ಮಿತಾ ಸೇನ್! ಲಲಿತ್ ಮೋದಿ ಹೇಳಿದ್ದೇನು ಗೊತ್ತಾ..?


‘ಕ್ರಾಂತಿ’ ಡಬ್ಬಿಂಗ್ ಕಂಪ್ಲೀಟ್ ಮಾಡಿರುವ ದರ್ಶನ್!


ದರ್ಶನ್ ನಟನೆಯ ಬಹುನಿರೀಕ್ಷಿತ ಸಿನಿಮಾ ‘ಕ್ರಾಂತಿ’ ಪೋಸ್ಟರ್‌ನಿಂದಲೇ ಗಮನ ಸೆಳೆಯುತ್ತಿದೆ. ಈ ಪ್ಯಾನ್ ಇಂಡಿಯಾ ಚಿತ್ರಕ್ಕೆ ವಿ.ಹರಿಕೃಷ್ಣ ಆಕ್ಷನ್ ಕಟ್ ಹೇಳಿದ್ದು, ದರ್ಶನ್‌-ರಚಿತಾ ರಾಮ್‌ ಲೀಡ್‌ ರೋಲ್‌ಗಳಲ್ಲಿ ನಟಿಸಿದ್ದಾರೆ.  ಶೈಲಜಾ ನಾಗ್‌ ಹಾಗೂ ಬಿ.ಸುರೇಶ್ ದಂಪತಿ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಈ ಸಿನಿಮಾದ ಶೂಟಿಂಗ್ ಕಂಪ್ಲೀಟ್ ಆಗಿದ್ದು, ಇತ್ತೀಚೆಗಷ್ಟೇ ದರ್ಶನ್ ಡಬ್ಬಿಂಗ್ ಸಹ ಮುಗಿಸಿದ್ದಾರೆ.  


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.