ಅಂಕಿತ್ ಫಿಲಂಸ್ ಲಾಂಛನದಲ್ಲಿ ಭಾರತಿ ಜಗ್ಗಿ ನಿರ್ಮಾಣ ಮಾಡಿರುವ, ಕಿರಣ್ ಕುಮಾರ್ ವಿ ನಿರ್ದೇಶಿಸಿರುವ "ಮರ್ದಿನಿ" ಚಿತ್ರದ ಟ್ರೇಲರ್ ಹಾಗೂ ಹಾಡಿನ ಬಿಡುಗಡೆ ಸಮಾರಂಭ ಇತ್ತೀಚಿಗೆ ನಡೆಯಿತು.


COMMERCIAL BREAK
SCROLL TO CONTINUE READING

"ಮರ್ದಿನಿ" ಇದೊಂದು ಮಹಿಳಾ ಪ್ರಧಾನ ಚಿತ್ರ. ರಿತನ್ಯ ಹೂವಣ್ಣ "ಮರ್ದಿನಿ" ಪಾತ್ರದ ಮೂಲಕ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ.  ಅಡುಗೆಮನೆಯಿಂದ ಆರ್ಮಿ ತನಕ ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆ ಯಾರಿಗೂ ಕಡಿಮೆ ಇಲ್ಲದಂತೆ ಕಾರ್ಯ ನಿರ್ವಹಿಸುತ್ತಿದ್ದಾಳೆ. ಇತ್ತೀಚೆಗೆ ಕೊರೋನ ಸಮಯದಲ್ಲಿ ಸಾವಿರಾರು ಆಶಾ ಕಾರ್ಯಕರ್ತೆಯರು ತಮ್ಮ ಪ್ರಾಣಪಣಕ್ಕಿಟ್ಟು ಸೇವೆ ಸಲ್ಲಿಸಿದ್ದು ನಮ್ಮ ಕಣ್ಣ ಮುಂದೆ ಇದೆ. ಈ ಎಲ್ಲಾ ಅಂಶಗಳನಿಟ್ಟುಕೊಂಡು, ಇದರ ಜೊತೆಗೆ ಉತ್ತಮ ಮನೋರಂಜನೆ ಸಹಯಿರುವ ಸಿನಿಮಾ ಮಾಡಿದ್ದೀನಿ. ಚಿತ್ರ ಸೆಪ್ಟೆಂಬರ್ 16 ರಂದು ಬಿಡುಗಡೆಯಾಗುತ್ತಿದೆ. ಸಹಕಾರ ನೀಡಿದ್ದ ನಿರ್ಮಾಪಕರಿಗೆ ಹಾಗೂ ತಮ್ಮ ತಂಡಕ್ಕೆ ನಿರ್ದೇಶಕ ಕಿರಣ್ ಕುಮಾರ್ ಧನ್ಯವಾದ ತಿಳಿಸಿದರು.


ಇದನ್ನೂ ಓದಿ- ಕಿಚ್ಚನ ಬರ್ತ್ ಡೇಗೆ ಸುದೀಪಿಯನ್ಸ್ ಗೆ ಸ್ಪೆಷಲ್ ಗಿಫ್ಟ್.. Zee5 ಒಟಿಟಿಗೆ ಲಗ್ಗೆ ಇಡ್ತಿದ್ದಾನೆ ವಿಕ್ರಾಂತ್ ರೋಣ


ನಾನು ಸುದೀಪ್ ಅವರ ಅಭಿಮಾನಿ. ಕಳೆದ ಹದಿನೆಂಟು ವರ್ಷಗಳಿಂದ ಚಿತ್ರರಂಗದೊಂದಿಗೆ ನಂಟಿದೆ. ಸಾವಿರಾರು ಚಿತ್ರಗಳಿಗೆ ಸ್ಟ್ಯಾಂಡಿಸ್‌ ಹಾಗೂ ಬ್ಯಾನರ್ ಗಳನ್ನು ಮಾಡಿದ್ದೀನಿ. ಸಿನಿಮಾ ನಿರ್ಮಾಣ ಮಾಡಿ, ಹೊಸ ಕಲಾವಿದರಿಗೆ ಅವಕಾಶ ನೀಡಬೇಕೆಂದು ನನ್ನ ಆಸೆಯಿತ್ತು. "ಮರ್ದಿನಿ" ಚಿತ್ರದ ಮೂಲಕ ಈಡೇರಿದೆ. ನಿಮ್ಮೆಲ್ಲರ ಪ್ರೋತ್ಸಾಹ ಸದಾಯಿರಲಿ ಎನ್ನುತ್ತಾರೆ ನಿರ್ಮಾಪಕ ಜಗ್ಗಿ.


ಆಡಿಷನ್ ಮೂಲಕ ಆಯ್ಕೆಯಾದೆ. ಖಡಕ್ ಪೊಲೀಸ್ ಅಧಿಕಾರಿಯಾಗಿ‌ ಕಾಣಿಸಿಕೊಂಡಿದ್ದೀನಿ. ಈ ಪಾತ್ರಕ್ಕಾಗಿ ಸಾಕಷ್ಟು ತಯಾರಿಯನ್ನು ಮಾಡಿಕೊಂಡಿದ್ದೀನಿ‌ ಎಂದರು ನಾಯಕಿ ರಿತನ್ಯ ಹೂವಣ್ಣ.


ಇದನ್ನೂ ಓದಿ- ವೇಮಗಲ್ ಜಗನ್ನಾಥ ರಾವ್ ನಿರ್ದೇಶನದಲ್ಲಿ ಮೂಡಿ ಬರಲಿದೆ "ನನ್ನ ಹುಡುಕಿ ಕೊಡಿ"


ಚಿತ್ರಕ್ಕೆ ನಾನು ಕಥೆ ಬರೆದಿದ್ದೀನಿ ಹಾಗೂ ಮುಖ್ಯಪಾತ್ರದಲ್ಲೂ ಅಭಿನಯಿಸಿದ್ದೇನೆ ಎಂದು ಅಕ್ಷಯ್ ತಿಳಿಸಿದರು. ನಟಿ ಇಂಚರ ಹಾಗೂ ಸುಷ್ಮಿತ ಸಹ ತಮ್ಮ ಪಾತ್ರ ಪರಿಚಯ ಮಾಡಿಕೊಂಡರು.


ಸಂಗೀತ ನೀಡಿರುವ ಹಿತನ್ ಹಾಸನ್, ಸಂಕಲನಕಾರ ವಿಶ್ವ, ಸಂಭಾಷಣೆ ಬರೆದಿರುವ ಕರಣ್ ಗಜ , ವಿತರಕ ವೆಂಕಟ್ ಗೌಡ ಸೇರಿದಂತೆ ಅನೇಕ ಚಿತ್ರತಂಡದ ಸದಸ್ಯರು ಚಿತ್ರದ ಕುರಿತು ಮಾತನಾಡಿದರು.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.