ಬೆಂಗಳೂರು : ಮೀರಾ ಜಾಸ್ಮಿನ್... ಈ ಹೆಸರು ಕೇಳಿದರೆ ಸಾಕು ಸಾಲು ಸಾಲು ಕನ್ನಡ ಸಿನಿಮಾಗಳು ಕಣ್ಣಮುಂದೆ ಬರುತ್ತವೆ. ಹೀಗೆ ಸ್ಯಾಂಡಲ್‌ವುಡ್‌ನಲ್ಲಿ ಮಿಂಚಿದ್ದ ಮೀರಾ ಈಗ ಕಾಣೆಯಾಗಿದ್ದಾರೆ ಅಂದುಕೊಂಡ್ರಾ..? ನೋ ಚಾನ್ಸ್.‌ ಮೀರಾ ಜಾಸ್ಮಿನ್‌ (Meera Jansmine)ಈಗಲೂ ಸಿನಿರಂಗದಲ್ಲಿ ಶೈನಿಂಗ್‌ ಸ್ಟಾರ್.‌ ಇದೀಗ ಮೀರಾ ಅವರ ಕೆಲವು ಹಾಟ್‌ ಫೋಟೋಗಳು ಸಖತ್‌ ಸದ್ದು ಮಾಡುತ್ತಿವೆ.


COMMERCIAL BREAK
SCROLL TO CONTINUE READING

ಪುನೀತ್ ರಾಜ್‌ಕುಮಾರ್ (Puneeth Rajkumar) ನಟಿಸಿದ್ದ 'ಮೌರ್ಯ' ಸಿನಿಮಾ ಮೂಲಕ ಕನ್ನಡದಲ್ಲಿ ನಟನೆ ಆರಂಭಿಸಿದ್ದ ಮೀರಾ ಜಾಸ್ಮಿನ್ ((Meera Jansmine)ಸ್ಯಾಂಡಲ್‌ವುಡ್‌ನಲ್ಲಿ ತಮ್ಮ ಕಂಪು ಹರಿಸಿದ್ದರು. ಅವರ ನಟನೆಗೆ ಕನ್ನಡಿಗರು ಮನಸೋತಿದ್ದರು. ಹೀಗೆ ಒಂದೇ ಸಿನಿಮಾ ಮೂಲಕ ಕನ್ನಡಿಗರ ಮನಸ್ಸು ಗೆದ್ದು ಸಾಲು ಸಾಲು ಸಿನಿಮಾಗಳಲ್ಲಿ ಮೀರಾ ಜಾಸ್ಮಿನ್‌ ಮಿಂಚಲು ಶುರುಮಾಡಿದ್ದರು.


ಇದನ್ನೂ ಓದಿ :  Shree Leela: ಶ್ರೀಲೀಲಾ ಜೊತೆ ರೊಮ್ಯಾನ್ಸ್: ರವಿಚಂದ್ರನ್ ಹೇಳಿದ್ದೇನು ಗೊತ್ತಾ..?‌


ಸೌತ್‌ ಸಿನಿ ಸುಂದರಿ..!
ಹೀಗೆ ಕೆಲ ವರ್ಷಗಳ ಹಿಂದೆ ಸ್ಯಾಂಡಲ್‌ವುಡ್‌ನಲ್ಲಿ (Sandalwood)ಬಹು ಬೇಡಿಕೆಯ ನಟಿಯಾಗಿದ್ದ ಮೀರಾ ಇತ್ತೀಚೆಗೆ ಯಾವ ಸಿನಿಮಾದಲ್ಲೂ ಕಾಣಿಸಿಕೊಂಡಿಲ್ಲ. ಹಾಗಂತಾ ಅವರು ಕಾಣೆಯಾಗಿದ್ದಾರೆ ಅಂತೇನು ಅಲ್ಲ. ಸೌತ್‌ ಸಿನಿ ರಂಗದಲ್ಲಿ ಮೀರಾ ಜಾಸ್ಮಿನ್‌ ಈಗಲೂ ಶೈನಿಂಗ್‌ ಸ್ಟಾರ್.‌ 


ಹೌದು, ಮೀರಾ ಜಾಸ್ಮಿನ್‌ ಇತ್ತೀಚೆಗೆ ಮಾಡಿರುವ ಹಾಟ್‌ ಫೋಟೋಶೂಟ್‌ (Meera Jasmine photoshoot)ಎಲ್ಲೆಡೆ ವೈರಲ್‌ ಆಗುತ್ತಿವೆ. ಸೋಷಿಯಲ್‌ ಮೀಡಿಯಾದಲ್ಲಿ ಫೋಟೋಗಳು ಸದ್ದು ಮಾಡುತ್ತಿವೆ. ಅಭಿಮಾನಿಗಳು ಮತ್ತೊಮ್ಮೆ ಮೀರಾ ಫೋಟೋಗಳಿಗೆ ಫಿದಾ ಆಗಿದ್ದಾರೆ. ಮಲಯಾಳಂ ನಟಿ ಮೀರಾ ಅವರ ಪ್ರತಿಭೆ ಹಾಗೂ ಸೌಂದರ್ಯವನ್ನು ಅಭಿಮಾನಿಗಳು ಸುಲಭವಾಗಿ ಮರೆಯಲು ಸಾಧ್ಯವೇ ಇಲ್ಲ. ದಿವಂಗತ ಅಪ್ಪು ಅವರ  'ಮೌರ್ಯ' ಸಿನಿಮಾ ನಂತರ, ಹಲವು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದರು ಮೀರಾ.‌ 'ದೇವರು ಕೊಟ್ಟ ತಂಗಿ' ಹಾಗೂ ರವಿಚಂದ್ರನ್ ಜೊತೆಗೆ 'ಹೂ' ಸಿನಿಮಾಗಳಲ್ಲೂ ಮೀರಾ ಮಿಂಚು ಹರಿಸಿದ್ದರು (Meera Jasmine Films). ಬಳಿಕ ಕೆಲ ಪರಭಾಷೆ ಸಿನಿಮಾಗಳಲ್ಲಿ ನಟಿಸಿ ಕೆಲವು ದಿನಗಳ ಕಾಲ ಮರೆಯಾಗಿದ್ದರು. ಇದೀಗ ಮತ್ತೆ ಸಿನಿ ರಂಗದತ್ತ ಹೊಸ ಪಯಣ ಆರಂಭಿಸಿದ್ದಾರೆ.


ಇದನ್ನೂ ಓದಿ : ಕನ್ನಡಕ್ಕಾಗಿ ಒಂದನ್ನು ಒತ್ತಿ' ಅಂತಿದ್ದ ಕೃಷಿ ಈಗ ವಿಭಿನ್ನ ವೇಷದಲ್ಲಿ..!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.