'ಕೆಜಿಎಫ್‌-2' ದಿನವೇ 'ಜೆರ್ಸಿ' ರಿಲೀಸ್..!‌ ನಿರ್ಮಾಪಕ ಹೇಳಿದ್ದೇನು ಗೊತ್ತಾ..?

Written by - Malathesha M | Last Updated : Feb 16, 2022, 07:43 PM IST
  • 'ಜೆರ್ಸಿ' ಚಿತ್ರದ ರಿಲೀಸ್‌ ಬಗ್ಗೆ ಮಾತನಾಡಿರುವ ನಿರ್ಮಾಪಕ ಅಮನ್ ಗಿಲ್, ಎರಡೂ ಚಿತ್ರಗಳ ನಡುವೆ ಯಾವುದೇ ಸ್ಪರ್ಧೆಯಿಲ್ಲ. ಕೆಜಿಎಫ್‌-2 ಜೊತೆಗೆ ನಾವು ಸ್ಪರ್ಧಿಸಲು ಪ್ರಯತ್ನಿಸುತ್ತಿಲ್ಲ.ನಮಗೆ ಕೆಜಿಎಫ್‌-2 ಸ್ಪರ್ಧಿಯಲ್ಲ, ಎರಡೂ ಭಿನ್ನ ಆಯಾಮದ ಸಿನಿಮಾಗಳಾಗಿವೆ. ಈ ಎರಡೂ ಚಿತ್ರಗಳು ಗೆಲ್ಲುವ ವಿಶ್ವಾಸ ಹೊಂದಿದ್ದೇನೆ ಎಂದಿದ್ದಾರೆ.
'ಕೆಜಿಎಫ್‌-2' ದಿನವೇ 'ಜೆರ್ಸಿ' ರಿಲೀಸ್..!‌ ನಿರ್ಮಾಪಕ ಹೇಳಿದ್ದೇನು ಗೊತ್ತಾ..? title=

ಬೆಂಗಳೂರು: ದೊಡ್ಡ ಹಿಟ್‌ ಕಂಡು ಜಗತ್ತಿನಾದ್ಯಂತ ಸದ್ದು ಮಾಡಿದ್ದ ಕನ್ನಡ ಸಿನಿಮಾ ಕೆಜಿಎಫ್‌ ಇದೀಗ ಸೀಕ್ವೆಲ್‌ ಮೂಲಕ ರೀ ಎಂಟ್ರಿ ಆಗಲು ಸಜ್ಜಾಗಿದೆ. ಆದರೆ 'ಕೆಜಿಎಫ್‌-2' ಬಿಡುಗಡೆಯಾಗುತ್ತಿರುವ ದಿನವೇ ಮತ್ತೊಂದು ಹಿಂದಿ ಚಿತ್ರ ಕೂಡ ರಿಲೀಸ್‌ ಆಗುತ್ತಿದೆ. ಇನ್ನೂ ಆ ಚಿತ್ರದ ನಿರ್ಮಾಪಕರು ನಮಗೆ 'ಕೆಜಿಎಫ್‌-2' ಸ್ಪರ್ಧಿಯಲ್ಲ ಎಂದಿದ್ದಾರೆ.

ಹೌದು, 'ಕೆಜಿಎಫ್‌-2' ಎಷ್ಟು ಸದ್ದು ಮಾಡುತ್ತಿದೆ ಎಂದರೆ ಹಾಲಿವುಡ್‌ ಮೂವಿ ರೇಂಜ್‌ಗೆ ಯಶ್‌ ಸಿನಿಮಾ ಜಗತ್ತಿನಾದ್ಯಂತ ಹವಾ ಎಬ್ಬಿಸಿದೆ. ಭಾರತದಲ್ಲಿ ಮಾತ್ರವಲ್ಲ, ಜಗತ್ತಿನ ಮೂಲೆ ಮೂಲೆಯಲ್ಲೂ 'ಕೆಜಿಎಫ್‌-2' ಸಿನಿಮಾಗಾಗಿ ಕಾಯುತ್ತಿರುವ ಅಭಿಮಾನಿ ಬಳಗವಿದೆ. ಏಪ್ರಿಲ್ 14ರಂದು 'ಕೆಜಿಎಫ್‌-2' ಬೆಳ್ಳಿ ತೆರೆಯ ಮೇಲೆ ಬ್ಲಾಸ್ಟ್‌ ಆಗುತ್ತಿದೆ. ಆದರೆ ಇದೇ ದಿನ ಹಿಂದಿ ಸಿನಿಮಾ ಶಾಹಿದ್ ಕಪೂರ್ ಅಭಿನಯದ 'ಜೆರ್ಸಿ' ಕೂಡ ರಿಲೀಸ್‌ ಆಗುತ್ತಿದೆ..!

ಇದನ್ನೂ ಓದಿ: Health Tips: ಕೆಮ್ಮು ಉಸಿರಾಟದ ಸಮಸ್ಯೆ ಇದ್ದರೆ ಎದುರಾಗಲಿದೆ ದೊಡ್ಡ ಗಂಡಾಂತರ..!

'ಕೆಜಿಎಫ್‌-2' vs 'ಜೆರ್ಸಿ'..?

ಈ ಹಿಂದೆ 'ಲಾಲ್ ಸಿಂಗ್ ಚಡ್ಡಾ' ಹಾಗೂ 'ಕೆಜಿಎಫ್‌-2' ಪೈಪೋಟಿಯನ್ನು ನಿರೀಕ್ಷಿಸಲಾಗಿತ್ತು. ಆದರೆ ದಿಢೀರ್‌ 'ಲಾಲ್ ಸಿಂಗ್ ಚಡ್ಡಾ' ಬಿಡುಗಡೆಯ ದಿನಾಂಕ ಮುಂದೂಡಲಾಗಿತ್ತು. 'ಕೆಜಿಎಫ್‌-1' ಬಿಡುಗಡೆ ಆದ ದಿನವೇ ಅಮೀರ್ ಖಾನ್‌ ನಟನೆಯ 'ಥಗ್ಸ್ ಆಫ್ ಹಿಂದುಸ್ತಾನ್' ರಿಲೀಸ್‌ ಆಗಿತ್ತು. ಆದರೆ ಗಲ್ಲಾ ಪೆಟ್ಟಿಗೆಯಲ್ಲಿ ಮಕಾಡೆ ಮಲಗಿತ್ತು ಅಮೀರ್‌ ಚಿತ್ರ. ಇದೀಗ 'ಲಾಲ್ ಸಿಂಗ್ ಚಡ್ಡಾ' ರಿಲೀಸ್‌ ಡೇಟ್ ಆಗಸ್ಟ್‌ಗೆ ಮುಂದೂಡಲಾಗಿದೆ. ಈ ನಡುವೆ 'ಕೆಜಿಎಫ್‌-2' ಬಿಡುಗಡೆಯಾಗುವ ದಿನವೇ ಶಾಹಿದ್ ಕಪೂರ್ ಮುಖ್ಯ ಭೂಮಿಕೆಯ 'ಜೆರ್ಸಿ' ರಿಲೀಸ್‌ ಆಗುತ್ತಿದೆ.

'ಜೆರ್ಸಿ' ಚಿತ್ರದ ರಿಲೀಸ್‌ ಬಗ್ಗೆ ಮಾತನಾಡಿರುವ ನಿರ್ಮಾಪಕ ಅಮನ್ ಗಿಲ್, ಎರಡೂ ಚಿತ್ರಗಳ ನಡುವೆ ಯಾವುದೇ ಸ್ಪರ್ಧೆಯಿಲ್ಲ. ಕೆಜಿಎಫ್‌-2 ಜೊತೆಗೆ ನಾವು ಸ್ಪರ್ಧಿಸಲು ಪ್ರಯತ್ನಿಸುತ್ತಿಲ್ಲ.ನಮಗೆ ಕೆಜಿಎಫ್‌-2 ಸ್ಪರ್ಧಿಯಲ್ಲ, ಎರಡೂ ಭಿನ್ನ ಆಯಾಮದ ಸಿನಿಮಾಗಳಾಗಿವೆ. ಈ ಎರಡೂ ಚಿತ್ರಗಳು ಗೆಲ್ಲುವ ವಿಶ್ವಾಸ ಹೊಂದಿದ್ದೇನೆ ಎಂದಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News