ಕನ್ನಡಕ್ಕಾಗಿ ಒಂದನ್ನು ಒತ್ತಿ' ಅಂತಿದ್ದ ಕೃಷಿ ಈಗ ವಿಭಿನ್ನ ವೇಷದಲ್ಲಿ..!

'ಕನ್ನಡಕ್ಕಾಗಿ ಒಂದನ್ನು ಒತ್ತಿ' ಚಿತ್ರದ ನಾಯಕಿ ಹಾಗೂ 'ಬಿಗ್ ಬಾಸ್' ಖ್ಯಾತಿಯ ನಟಿ ಕೃಷಿ ತಾಪಂಡ ವಿಭಿನ್ನ ಕಥೆಯ ಮೂಲಕ ಮತ್ತೆ ಬೆಳ್ಳಿತೆರೆಗೆ ಬರಲು ಸಜ್ಜಾಗಿದ್ದಾರೆ.ಇನ್ನೇನು ಬಿಡುಗಡೆಗೂ ಸಿನಿಮಾ ಸಿದ್ಧವಾಗಿದ್ದು, ಕೃಷಿ ಖುಷಿ ಖುಷಿಯಾಗಿದ್ದಾರೆ.

Written by - Malathesha M | Last Updated : Feb 16, 2022, 09:26 PM IST
  • 'ಕನ್ನಡಕ್ಕಾಗಿ ಒಂದನ್ನು ಒತ್ತಿ' ಚಿತ್ರದ ನಾಯಕಿ ಹಾಗೂ 'ಬಿಗ್ ಬಾಸ್' ಖ್ಯಾತಿಯ ನಟಿ ಕೃಷಿ ತಾಪಂಡ ವಿಭಿನ್ನ ಕಥೆಯ ಮೂಲಕ ಮತ್ತೆ ಬೆಳ್ಳಿತೆರೆಗೆ ಬರಲು ಸಜ್ಜಾಗಿದ್ದಾರೆ.
  • ಇನ್ನೇನು ಬಿಡುಗಡೆಗೂ ಸಿನಿಮಾ ಸಿದ್ಧವಾಗಿದ್ದು, ಕೃಷಿ ಖುಷಿ ಖುಷಿಯಾಗಿದ್ದಾರೆ.
ಕನ್ನಡಕ್ಕಾಗಿ ಒಂದನ್ನು ಒತ್ತಿ' ಅಂತಿದ್ದ ಕೃಷಿ ಈಗ ವಿಭಿನ್ನ ವೇಷದಲ್ಲಿ..! title=

ಬೆಂಗಳೂರು: 'ಕನ್ನಡಕ್ಕಾಗಿ ಒಂದನ್ನು ಒತ್ತಿ' ಚಿತ್ರದ ನಾಯಕಿ ಹಾಗೂ 'ಬಿಗ್ ಬಾಸ್' ಖ್ಯಾತಿಯ ನಟಿ ಕೃಷಿ ತಾಪಂಡ ವಿಭಿನ್ನ ಕಥೆಯ ಮೂಲಕ ಮತ್ತೆ ಬೆಳ್ಳಿತೆರೆಗೆ ಬರಲು ಸಜ್ಜಾಗಿದ್ದಾರೆ.ಇನ್ನೇನು ಬಿಡುಗಡೆಗೂ ಸಿನಿಮಾ ಸಿದ್ಧವಾಗಿದ್ದು, ಕೃಷಿ ಖುಷಿ ಖುಷಿಯಾಗಿದ್ದಾರೆ.

'ಬ್ಲಾಂಕ್'.. ಹೆಸರೇ ವಿಭಿನ್ನ.. ಹೀಗೆ ಡಿಫರೆಂಟ್ ಟೈಟಲ್‌ನ ಸೈಕಲಾಜಿಕಲ್ ಥ್ರಿಲ್ಲರ್ ಕಥಾಹಂದರದ ಸಿನಿಮಾದಲ್ಲಿ ಕೃಷಿ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಕಳೆದ ವರ್ಷ ತೆರೆಕಂಡ 'ಲಂಕೆ' ಚಿತ್ರದಲ್ಲಿ ಕೃಷಿ ತಾಪಂಡ‌ ನಟಿಸಿದ್ದರು. ಇದೀಗ ಕೃಷಿ ಅಭಿನಯದ ಮತ್ತೊಂದು ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ.

ಇದನ್ನೂ ಓದಿ :Deep Sidhu: ಕೆಂಪು ಕೋಟೆ ಗಲಭೆ ಆರೋಪಿ, ಪಂಜಾಬಿ ನಟ ದೀಪ್ ಸಿಧು ಅಪಘಾತದಲ್ಲಿ ದುರ್ಮರಣ

 ಸೈಕಲಾಜಿಕಲ್ ಥ್ರಿಲ್ಲರ್:

'ಬ್ಲಾಂಕ್' ಚಿತ್ರವನ್ನು ಫೆಬ್ರವರಿ 25 ರಂದು ರಿಲೀಸ್‌ ಮಾಡಲು ತಯಾರಿ ಸಾಗಿದೆ. ಮಂಜುನಾಥ್ ಪ್ರಸನ್ನ ಸಿನಿಮಾ ನಿರ್ಮಿಸಿದ್ದು, ಎಸ್. ಜಯ್ ನಿರ್ದೇಶಿಸಿದ್ದಾರೆ. ಕೊರೊನಾ ಕಾರ್ಮೋಡ ಕರಗಿದ ಬಳಿಕ ಸಾಲು ಸಾಲು ಸ್ಯಾಂಡಲ್‌ವುಡ್‌ ಸಿನಿಮಾಗಳು ರಿಲೀಸ್‌ಗೆ ರೆಡಿಯಾಗಿವೆ. ಈ ಸಾಲಿಗೆ ಸೈಕಲಾಜಿಕಲ್ ಥ್ರಿಲ್ಲರ್ 'ಬ್ಲಾಂಕ್' ಸಿನಿಮಾ ಕೂಡ ಸೇರ್ಪಡೆಯಾಗುತ್ತಿದೆ.

ಇದನ್ನೂ ಓದಿ : Kidney Food: ಆರೋಗ್ಯಕರ ಕಿಡ್ನಿಗಾಗಿ ಈ 5 ಆಹಾರಗಳನ್ನು ಮಿಸ್ ಮಾಡದೇ ನಿಮ್ಮ ಡಯಟ್ನಲ್ಲಿ ಸೇರಿಸಿ

ಈಗಾಗಲೇ ಕನ್ನಡದಲ್ಲಿ ಹಲವು ಸೈಕಲಾಜಿಕಲ್ ಥ್ರಿಲ್ಲರ್ ಸಿನಿಮಾಗಳು ಬಂದು, ಗಲ್ಲಾ ಪೆಟ್ಟಿಗೆಯಲ್ಲಿ ಸದ್ದು ಮಾಡಿವೆ. ಅದೇ ರೀತಿ 'ಬ್ಲಾಂಕ್' ಕೂಡ ವಿಭಿನ್ನ ಕಥೆ ಹಾಗೂ ಮೇಕಿಂಗ್‌ ಮೂಲಕ ಗಮನ ಸೆಳೆದಿದೆ.

ಒಟ್ಟಾರೆ ಹೊಸಬರೇ ಸೇರಿ ನಿರ್ಮಿಸಿರುವ ಸೈಕಲಾಜಿಕಲ್ ಥ್ರಿಲ್ಲರ್ 'ಬ್ಲಾಂಕ್' ಈಗಾಗಲೇ ಸಾಕಷ್ಟು ನಿರೀಕ್ಷೆ ಹುಟ್ಟಿಸಿದ್ದು, ಇನ್ನೇನು ಪ್ರೇಕ್ಷಕರ ಎದುರು ಬರಲು ಕೌಂಟ್‌ಡೌನ್‌ ಶುರುವಾಗಿದೆ. ಇದಕ್ಕಾಗಿ ಚಿತ್ರತಂಡ ಸಕಲ ಸಿದ್ಧತೆ ಮಾಡಿಕೊಂಡಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News