ಸಖತ್ ಸಿಂಪಲ್.. ಭಾರತದ ರಿಚ್ಚೆಸ್ಟ್ ಸ್ಟಾರ್ ಕಿಡ್.. 1350 ಕೋಟಿ ಆಸ್ತಿ ಜತೆಗೆ ಆಸ್ಕರ್ ಪ್ರಶಸ್ತಿ ವಿಜೇತ ಈ ನಟ
Richest Star Kid: 1350 ಕೋಟಿ ಮೌಲ್ಯದ ಆಸ್ತಿ ಹೊಂದಿರುವ ಭಾರತದ ಶ್ರೀಮಂತ ಸ್ಟಾರ್ ಕಿಡ್.. ಅತ್ಯಂತ ಸರಳವಾಗಿ ಜೀವನ ನಡೆಸುತ್ತಿರುವ ಸ್ಟಾರ್ ನಟನ ಕುರಿತಾಗಿ ಇದೀಗ ಮಾಹಿತಿಯೊಂದು ಹೊರಬಿದ್ದಿದೆ..
Megha Star Ram Charan: ಚಿತ್ರರಂಗದಲ್ಲಿ ಹತ್ತಾರು ಸ್ಟಾರ್ ಮಕ್ಕಳು ತೆರೆ ಮೇಲೆ ಆಳ್ವಿಕೆ ನಡೆಸುತ್ತಿದ್ದಾರೆ ಮತ್ತು ಇನ್ನೂ ಎಂಟ್ರಿ ಕೊಡುತ್ತಿದ್ದಾರೆ... ಈಗ ಪ್ರತಿ ಸ್ಟಾರ್ ಮಕ್ಕಳೂ ಹೀರೋ ಆಗುವ ಕನಸು ಕಾಣುತ್ತಾರೆ.. ನಟನೆ ಬಿಟ್ಟು ಬೇರೆ ದಾರಿ ಹುಡುಕುವವರು ಕಡಿಮೆ.
ಅಭಿಷೇಕ್ ಬಚ್ಚನ್, ತುಷಾರ್ ಕಪೂರ್, ಉದಯ್ ಚೋಪ್ರಾ ಅವರಂತಹ ದೊಡ್ಡ ಹೆಸರುಗಳು ಸೇರಿದಂತೆ ಅನೇಕ ಸ್ಟಾರ್ ಮಕ್ಕಳು ತಮ್ಮ ಪೋಷಕರಂತೆ ಸ್ಟಾರ್‌ಡಮ್ ಸಾಧಿಸಲು ಸಾಧ್ಯವಾಗುತ್ತಿಲ್ಲ ಎಂಬುದಂತೂ ನಿಜ. ಆದರೆ ಇಲ್ಲಿ ನಾವು ಸೌತ್ ಸೂಪರ್‌ಸ್ಟಾರ್ ಬಗ್ಗೆ ಮಾತನಾಡುತ್ತಿದ್ದೇವೆ.. ಈ ನಟನ ತಂದೆ 68 ನೇ ವಯಸ್ಸಿನಲ್ಲಿಯೂ ತೆರೆಯನ್ನು ಆಳುತ್ತಿರುವ ಮಹಾನ್ ನಟ. ಅವರೇ ಸರಳತೆಗೆ ಹೆಸರುವಾಸಿಯಾದ ಮೆಗಾಸ್ಟಾರ್ ಪುತ್ರ ರಾಮ್ ಚರಣ್..
ಇದನ್ನೂ ಓದಿ-ಪ್ರಭಾಸ್, ಶಾರುಖ್, ಅಲ್ಲು ಅರ್ಜುನ್ ಮೂವರು ಅಲ್ಲ.. ಭಾರತದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯುತ್ತಾರೆ 73 ವರ್ಷದ ಈ ನಟ
ಸೌತ್ ಚಿತ್ರರಂಗಕ್ಕೆ ಹಲವು ಬ್ಲಾಕ್ ಬಸ್ಟರ್ ಚಿತ್ರಗಳನ್ನು ನೀಡಿರುವ ಮೆಗಾಸ್ಟಾರ್ ಪುತ್ರ ರಾಮ್ ಚರಣ್ ಅವರು ಪರದೆಯ ಮೇಲೆ ಕೆಲಸ ಮಾಡುವುದಲ್ಲದೆ, ನಿರ್ಮಾಪಕ ಮತ್ತು ಉದ್ಯಮಿಯೂ ಆಗಿದ್ದಾರೆ. ಇವರು ಮುಖ್ಯವಾಗಿ ತೆಲುಗು ಚಲನಚಿತ್ರಗಳಲ್ಲಿ ನಟಿಸುತ್ತಾರೆ.. ಭಾರತೀಯ ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಒಬ್ಬರಾದ ರಾಮ್ ಚರಣ್ ಅವರು ಮೂರು ಫಿಲ್ಮ್ ಫೇರ್ ಪ್ರಶಸ್ತಿಗಳು ಮತ್ತು ಎರಡು ನಂದಿ ಪ್ರಶಸ್ತಿಗಳನ್ನು ಗೆದ್ದಿದ್ದಾರೆ...
ರಾಮ್ ಚರಣ್ ಆಕ್ಷನ್ ಚಿತ್ರ ಚಿರುತಾ (2007) ನೊಂದಿಗೆ ನಟನೆಗೆ ಪಾದಾರ್ಪಣೆ ಮಾಡಿದರು.. ಇದು ಬಾಕ್ಸ್ ಆಫೀಸ್ ಹಿಟ್ ಆಗಿತ್ತು. ಇದಕ್ಕಾಗಿ ಅವರು ಅತ್ಯುತ್ತಮ ಚೊಚ್ಚಲ ನಟ ಪ್ರಶಸ್ತಿಯನ್ನು ಪಡೆದರು.. ಇದಾದ ನಂತರ ಎಸ್.ಎಸ್. ರಾಜಮೌಳಿಯ ಫ್ಯಾಂಟಸಿ ಆಕ್ಷನ್ ಚಿತ್ರ ಮಗಧೀರ (2009) ದೊಂದಿಗೆ ಅವರು ಅಪಾರ ಜನಪ್ರಿಯತೆಯನ್ನು ಗಳಿಸಿದರು. ಮಗಧೀರ ಆ ಸಮಯದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ತೆಲುಗು ಚಿತ್ರವಾಗಿತ್ತು..
ಚಿರಂಜೀವಿ ಅವರ ಮಗ ರಾಮ್ ಚರಣ್ ಭಾರತದ ಶ್ರೀಮಂತ 'ಸ್ಟಾರ್ ಕಿಡ್' ಎಂಬುದು ನಮಗೆಲ್ಲರಿಗೂ ಗೊತ್ತಿರುವ ವಿಚಾರ.. ಹಲವಾರು ವರದಿಗಳ ಪ್ರಕಾರ, ಯಶಸ್ವಿ ನಟನ ಮೌಲ್ಯ 1350 ಕೋಟಿ (ಅಂದಾಜು $160 ಮಿಲಿಯನ್). ನಟನಾಗಿ.. ನಿರ್ಮಾಪಕರಾಗಿ.. ವೃತ್ತಿಜೀವನದ ಆಧಾರದ ಮೇಲೆ ಈ ಸಂಪತ್ತನ್ನು ಸಂಗ್ರಹಿಸಿದ್ದಾರೆ ಎನ್ನಲಾಗಿದೆ... ಆದರೆ, ಇದೆಲ್ಲದರ ಹೊರತಾಗಿಯೂ, ನಟ ತುಂಬಾ ಸರಳ ಜೀವನವನ್ನು ನಡೆಸುತ್ತಿದ್ದು.. ಸಿಂಪ್ಲಿಸಿಟಿಗೆ ಹೆಸರುವಾಸಿಯಾಗಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ