ಅತ್ಯಾಚಾರದ ದೃಶ್ಯಕ್ಕೆ `ಸೆಕ್ಸ್ ಸೀನ್` ಅಂತ ಹೆಸರಿಟ್ಟ ನೆಟಿಜನ್ಸ್ : ನಿಮ್ಗೂ ಅಕ್ಕ-ತಂಗಿ ಇರ್ತಾರೆ ಎಂದ ನಟಿ..!
Sultan of Delhi : ʼಸುಲ್ತಾನ್ ಆಫ್ ದೆಹಲಿʼ ವೆಬ್ ಸಿರೀಸ್‌ನಲ್ಲಿ ಮೆಹ್ರೀನ್ ಸಂಜನಾ ಎಂಬ ಪಾತ್ರವನ್ನು ನಿರ್ವಹಿಸಿದ್ದಾರೆ. ಈ ಚಿತ್ರದಲ್ಲಿ ವೈವಾಹಿಕ ಅತ್ಯಾಚಾರದ ಭೀಕರ ದೃಶ್ಯವೊಂದಿದೆ. ಈ ಸೀನ್ ನೋಡಿದ ನೆಟ್ಟಿಗರು ʼಲೈಂಗಿಕ ದೃಶ್ಯʼ ಅಂತ ಕರೆಯಲಾರಂಭಿಸಿದ್ದಾರೆ.
Mehreen Pirzada : ಮಿಲನ್ ಲುಥ್ರಿಯಾ ನಿರ್ದೇಶನದ, ನಟಿ ಮೆಹ್ರೀನ್ ಪಿರ್ಜಾದಾ ಅಭಿನಯದ ವೆಬ್ ಸರಣಿ 'ಸುಲ್ತಾನ್ ಆಫ್ ದೆಹಲಿ' ಒಟಿಟಿ ಪಾದಾರ್ಪಣೆ ಮಾಡಿದೆ. ಈ ಚಿತ್ರದಲ್ಲಿ ವೈವಾಹಿಕ ಅತ್ಯಾಚಾರದ ದೃಶ್ಯವನ್ನು "ಸೆಕ್ಸ್" ಎಂದು ವಿವರಿಸಿದ್ದಕ್ಕಾಗಿ ಬೇಸರಗೊಂಡಿರುವ ನಟಿ ಮೆಹ್ರೀನ್ ನೆಟ್ಟಿಜನ್ಸ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಹೌದು.. ʼಸುಲ್ತಾನ್ ಆಫ್ ದೆಹಲಿʼ ವೆಬ್ ಸಿರೀಸ್‌ನಲ್ಲಿ ಮೆಹ್ರೀನ್ ಸಂಜನಾ ಎಂಬ ಪಾತ್ರವನ್ನು ನಿರ್ವಹಿಸಿದ್ದಾರೆ. ಈ ಚಿತ್ರದಲ್ಲಿ ವೈವಾಹಿಕ ಅತ್ಯಾಚಾರದ ಭೀಕರ ದೃಶ್ಯವೊಂದಿದೆ. ಈ ಸೀನ್ ನೋಡಿದ ನೆಟ್ಟಿಗರು ʼಲೈಂಗಿಕ ದೃಶ್ಯʼ ಅಂತ ಕರೆಯಲಾರಂಭಿಸಿದ್ದಾರೆ. ಇದಕ್ಕೆ ನಟಿ ಸೋಷಿಯಲ್ ಮೀಡಿಯಾದಲ್ಲಿ ಸುದೀರ್ಘ ಬರಹದ ಮೂಲಕ ಅಸಾಮಾಧಾನ ಹೊರಹಾಕಿದ್ದಾರೆ.
ಇದನ್ನೂ ಓದಿ:Bigg Boss 10 : ದೊಡ್ಮನೆಯಲ್ಲಿ ʼಪ್ರೀತಿ-ಸ್ನೇಹʼ ಸಮರ..! ವಿನಯ್ Vs ಸಂಗೀತ, ಕಾರ್ತಿಕ್ ಬೆಂಬಲ ಯಾರಿಗೆ..?
ಇತ್ತೀಚೆಗೆ ನಾನು ಡಿಸ್ನಿ ಹಾಟ್‌ಸ್ಟಾರ್ "ಸುಲ್ತಾನ್ ಆಫ್ ದೆಹಲಿ" ವೆಬ್ ಸರಣಿಯ ಮೂಲಕ OTT ಪಾದಾರ್ಪಣೆ ಮಾಡಿದೆ. ನನ್ನ ಅಭಿಮಾನಿಗಳು ಈ ಸಿನಿಮಾವನ್ನು ವೀಕ್ಷಿಸಿ ಮೆಚ್ಚಿಕೊಂಡಿದ್ದಾರೆ ಎಂದು ನಾನು ಭಾವಿಸುತ್ತೇನೆ. ಕೆಲವೊಮ್ಮೆ ಸ್ಕ್ರಿಪ್ಟ್ ನಿಮ್ಮ ಸ್ವಂತ ನೈತಿಕತೆಗೆ ವಿರುದ್ಧವಾಗಿ ಹೋಗಬಹುದು. ಒಬ್ಬ ವೃತ್ತಿಪರ ನಟಿಯಾಗಿ ಕಥೆಯ ಭಾಗವಾಗಿ ಕೆಲವು ದೃಶ್ಯಗಳನ್ನು ಮಾಡಬೇಕಾಗುತ್ತದೆ.
ನಟ ಪವನ್ ಕಲ್ಯಾಣ್ ಮಾಜಿ ಪತ್ನಿ ರೇಣು ದೇಸಾಯಿ ಎರಡನೇ ಮದುವೆ..!?
ಈ ರೀತಿಯ ಕ್ರೂರತೆಗೆ ಕೆಲವು ಜನ ಲೈಂಗಿಕ ದೃಶ್ಯ ಅಂತ ಹೇಳುತ್ತಿದ್ದಾರೆ. ಈ ಜನರು ತಮಗೂ ಸಹೋದರಿಯರು ಮತ್ತು ಹೆಣ್ಣುಮಕ್ಕಳಿದ್ದಾರೆ ಎಂದು ಅರ್ಥಮಾಡಿಕೊಳ್ಳಬೇಕು. ಎಂದಿಗೂ ಅವರು ಇಂತಹ ಆಘಾತಕ್ಕೆ ಒಳಗಾಗಬಾರದು ಎಂದು ನಾನು ದೇವರನ್ನು ಪ್ರಾರ್ಥಿಸುತ್ತೇನೆ. ಇಂತಹ ಕ್ರೌರ್ಯ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯದ ಚಿಂತನೆಯು ಅಸಹ್ಯಕರವಾಗಿದೆ ಎಂದು ನಟಿ ಬೇಸರ ವ್ಯಕ್ತಪಡಿಸಿದ್ದಾರೆ.
ʼಸುಲ್ತಾನ್ ಆಫ್ ದೆಹಲಿʼ ಸಿನಿಮಾ ಅಕ್ಟೋಬರ್ 13 ರಂದು ಡಿಸ್ನಿ+ ಹಾಟ್‌ಸ್ಟಾರ್‌ನಲ್ಲಿ ಬಿಡುಗಡೆಯಾಯಿತು. ಇದು ಅರ್ನಾಬ್ ರೇ ಅವರ ಕಾದಂಬರಿ "ಸುಲ್ತಾನ್ ಆಫ್ ದೆಹಲಿ: ಅಸೆನ್ಶನ್" ಆಧರಿತ ಸಿನಿಮಾ ಆಗಿದೆ. ತಾಹಿರ್ ರಾಜ್ ಭಾಸಿನ್, ಮೌನಿ ರಾಯ್, ಅಂಜುಮ್ ಶರ್ಮಾ, ವಿನಯ್ ಪಾಠಕ್, ಅನುಪ್ರಿಯಾ ಗೋಯೆಂಕಾ, ನಿಶಾಂತ್ ದಹಿಯಾ, ಮೆಹ್ರೀನ್ ಪಿರ್ಜಾದಾ, ಹರ್ಲೀನ್ ಸೇಥಿ ಸೇರಿದಂತೆ ಹಲವು ಖ್ಯಾತ ನಟರ ದಂಡೇ ಈ ಸಿನಿಮಾದಲ್ಲಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.