‘ಸ್ವಾತಿ ಮುತ್ತಿನ ಮಳೆ ಹನಿಯೇ’ ಚಿತ್ರದ ‘ಮೆಲ್ಲಗೆ’ ಸಾಂಗ್ ರಿಲೀಸ್!
Swati Muttina Male Haniye: ಇನ್ನೇನು ಬಿಡುಗಡೆಗೆ ಕೆಲವೇ ದಿನಗಳಿರುವಂತೆಯೇ, ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಚಿತ್ರದ ‘ಮೆಲ್ಲಗೆ’ ಎಂಬ ಮೊದಲ ಹಾಡನ್ನು ಇಂದು ಬಿಡುಗಡೆ ಮಾಡಲಾಗಿದೆ.
Swati Muttina Male Haniye Song: ರಾಜ್ ಬಿ ಶೆಟ್ಟಿ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಚಿತ್ರವನ್ನು ‘ಸ್ಯಾಂಡಲ್‌ವುಡ್ ಕ್ವೀನ್’ ರಮ್ಯಾ ಅವರು ತಮ್ಮ ಆಪಲ್ ಬಾಕ್ಸ್ ಸ್ಟುಡಿಯೋಸ್ ಮೂಲಕ ಇದೇ ಮೊದಲ ಬಾರಿಗೆ ನಿರ್ಮಿಸಿದ್ದಾರೆ. ಲೈಟರ್ ಬುದ್ಧ ಫಿಲಂಸ್ ಸಹಯೋಗದೊಂದಿಗೆ ನಿರ್ಮಾಣವಾಗಿರುವ ಈ ಚಿತ್ರವನ್ನು ನವೆಂಬರ್ 24ರಂದು ಕೆ.ಆರ್.ಜಿ. ಸ್ಟುಡಿಯೋಸ್ ಸಂಸ್ಥೆಯು ರಾಜ್ಯಾದ್ಯಂತ ಬಿಡುಗಡೆ ಮಾಡುತ್ತಿದೆ.
‘ಮೆಲ್ಲಗೆ’ ಹಾಡಿಗೆ ಮಿಥುನ್ ಮುಕುಂದನ್ ಸಂಗೀತ ಸಂಯೋಜಿಸಿದ್ದು, ಮಾಧುರಿ ಶೇಷಾದ್ರಿ ಹಾಡಿದ್ದಾರೆ. ಇನ್ನು, ಮಂಗಳೂರಿನಲ್ಲಿ ಓದುತ್ತಿರುವ ವಿದ್ಯಾರ್ಥಿ ಪೃಥ್ವಿ ಈ ಹಾಡನ್ನು ಬರೆದಿದ್ದಾರೆ. ಈ ಕುರಿತು ಮತನಾಡುವ ನಿರ್ದೇಶಕ ರಾಜ್ ಶೆಟ್ಟಿ, ‘ಇದು ಪ್ರೀತಿಯ ಕುರಿತ ಒಂದು ಮಹಿಳೆಯ ದೃಷ್ಟಿಕೋನದ ಹಾಡು'. ಈ ಪ್ರೀತಿಯನ್ನು ಮಹಿಳೆಯರು ಹೇಗೆ ಅನುಭವಿಸುತ್ತಾರೆ ಎನ್ನುವುದು ಬೇಕಾಗಿತ್ತು. ಹಾಗಾಗಿ, ಪೃಥ್ವಿ ಅವರಿಂದಲೇ ಬರೆಸಿದೆ’ ಎನ್ನುತ್ತಾರೆ ರಾಜ್.
ಇದನ್ನೂ ಓದಿ-ಗುಂಟೂರ್ ಕಾರಂ ಫಸ್ಟ್ ಸಿಂಗಲ್ ಔಟ್! ಮಾಸ್ ಲುಕ್‌ನಲ್ಲಿ ಪ್ರಿನ್ಸ್ ಮಹೇಶ್ ಬಾಬು..
ಈ ಹಾಡಿನಲ್ಲಿ ಶಾಸ್ತ್ರೀಯ ಸಂಗೀತದ ಸ್ಪರ್ಶ ಇದ್ದು, ಸಂಗೀತ ನಿರ್ದೇಶಕ ಮಿಥುನ್ ಮುಕುಂದನ್ ತಮ್ಮ ಸಂಯೋಜನೆಯಿಂದ ಮೋಡಿ ಮಾಡುತ್ತಾರೆ ಎನ್ನುತ್ತಾರೆ. ಸ್ವತಃ ಹಿನ್ನೆಲೆ ಗಾಯಕಿಯೂ ಆಗಿರುವ ನಾಯಕಿ ಸಿರಿ ರವಿಕುಮಾರ್ ಈ ಹಾಡಿನ ಅಭಿಮಾನಿಯಾಗಿದ್ದು, ಹಾಡನ್ನು ಪದೇಪದೇ ಕೇಳುತ್ತಿರುವುದಾಗಿ ಹೇಳಿಕೊಳ್ಳುತ್ತಾರೆ.
‘ಸ್ವಾತಿ ಮುತ್ತಿನ ಮಳೆ ಹನಿಯೇ’ ಚಿತ್ರದಲ್ಲಿ ರಾಜ್ ಮತ್ತು ಸಿರಿ ಜೊತೆಗೆ ಬಾಲಾಜಿ ಮನೋಹರ್, ಸೂರ್ಯ ವಸಿಷ್ಠ, ರೇಖಾ ಕೂಡ್ಲಿಗಿ, ಜೆ.ಪಿ. ತುಮ್ಮಿನಾಡು, ಸ್ನೇಹ ಶರ್ಮಾ ಮುಂತಾದವರು ಅಭಿನಯಿಸಿದ್ದಾರೆ. ಪ್ರವೀಣ್ ಶ್ರೀಯಾನ್ ಈ ಚಿತ್ರದ ಛಾಯಾಗ್ರಹಣದ ಜೊತೆಗೆ, ರಾಜ್ ಜೊತೆಗೆ ಸೇರಿ ಸಂಕಲನದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ.
ಇದನ್ನೂ ಓದಿ-Janhvi Kapoor: ಶ್ರೀದೇವಿ ಪುತ್ರಿಯ ಹಾಟನೆಸ್ ಅಬ್ಬರಕ್ಕೆ ಪಡ್ಡೆಹುಡುಗರ ಎದೆಯಲ್ಲಿ ತಕದಿಮಿತ.. ಪೋಟೋಸ್ ವೈರಲ್
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.