ಸಿನಿಮಾ ಕಾರ್ಮಿಕರ ಕಷ್ಟಕ್ಕೆ ಸ್ಪಂದಿಸಿದ ಆಹಾರ ಖಾತೆ ಸಚಿವ
ಆಹಾರ ಮತ್ತು ನಾಗರಿಕ ಸಚಿವನಾಗಿ ಅವರ ಕಷ್ಟಕ್ಕೆ ಸ್ಪಂದಿಸುವುದು ನನ್ನ ಕರ್ತವ್ಯ. ಹಾಗಾಗಿ 800 ಕುಟುಂಬಕ್ಕೆ ಆಹಾರ ಕಿಟ್ ಗಳನ್ನ ವಿತರಣೆ ಮಾಡಲಾಗಿದೆ ಎಂದು ಗೋಪಾಲಯ್ಯ ಹೇಳಿದರು.
ಬೆಂಗಳೂರು: ದೇಶಾದ್ಯಂತ ಲಾಕ್‍ಡೌನ್ (Lockdown) ಜಾರಿಯಲ್ಲಿರುವುದರಿಂದ ಬಡವರು ಮತ್ತು ದಿನಗೂಲಿ ಕಾರ್ಮಿಕರು ಸಂಕಷ್ಟದಲ್ಲಿದ್ದಾರೆ. ಅದರಲ್ಲೂ ಚಿತ್ರರಂಗ ಸ್ಥಗಿತಗೊಂಡಿದ್ದು ನಟನೆಯನ್ನೆ ಜೀವನಕ್ಕೆ ದಾರಿ ಮಾಡಿಕೊಂಡಿದ್ದ ಅನೇಕ ದಿನಗೂಲಿ ಸಿನಿ ಕಾರ್ಮಿಕರ ಕುಟುಂಬಗಳಿಗೆ ದಿಕ್ಕೇ ತೋಚದಂತಾಗಿದೆ. ಹಾಗಾಗಿ ಬುಧವಾರ ಚಾಮರಾಜಪೇಟೆ ಚಲನಚಿತ್ರ ಕಾರ್ಮಿಕರ ಸಂಘದಲ್ಲಿ, ಸಿನಿಮಾ ಕಾರ್ಮಿಕರಿಗೆ ಸಚಿವ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ. ಗೋಪಾಲಯ್ಯ (K Gopalaiah) ಆಹಾರದ ಕಿಟ್ ಗಳನ್ನ ವಿತರಿಸಿದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಮಂಡ್ಯ ಸಂಸದೆ ಸುಮಲತಾ (Sumalatha) ಮಾತನಾಡಿ ಕಲಾವಿದರಿಗೆ ಕರೋನಾವೈರಸ್ (Coronavirus) ಲಾಕ್ ಡೌನ್ ಬಿಸಿ ತಟ್ಟಿರೋದು ನಿಜ. ಆದರೆ ಸರ್ಕಾರ ಮೊದಲಿನಿಂದಲೂ ನಮ್ಮ ಸಿನಿಮಾ ರಂಗಕ್ಕೆ ಸಹಾಯ ಮಾಡ್ತಿದೆ. ಅದರಂತೆ ಇಂದು ಗೋಪಾಲಯ್ಯ ಅವರು ಸಿನಿಮಾ ಕಾರ್ಮಿಕರಿಗೆ ಆಹಾರದ ಕಿಟ್ ಗಳನ್ನ ನೀಡುತ್ತಿದ್ದಾರೆ ಅವರಿಗೆ ಕೃತಜ್ಞತೆಗಳನ್ನು ಹೇಳುತ್ತೇನೆ ಎಂದರು.
ಸುಮಲತಾ ಮತ್ತು ರಾಕ್ ಲೈನ್ ವೆಂಕಟೇಶ್, ಸಿನಿಮಾ ಕ್ಷೇತ್ರದಲ್ಲಿ ಕೆಲವರು ನಟನೆಯಿಂದ ಜೀವನ ನಡೆಸಿತ್ತಿದ್ದರು. ಈಗ ಅವರಿಗೆ ಊಟಕ್ಕೂ ಕಷ್ಟವಾಗಿದೆ ಅನ್ನೋದನ್ನ ನನ್ನ ಗಮನಕ್ಕೆ ತಂದಿದ್ದರು.
ಆಹಾರ ಮತ್ತು ನಾಗರಿಕ ಸಚಿವನಾಗಿ ಅವರ ಕಷ್ಟಕ್ಕೆ ಸ್ಪಂದಿಸುವುದು ನನ್ನ ಕರ್ತವ್ಯ. ಹಾಗಾಗಿ 800 ಕುಟುಂಬಕ್ಕೆ ಆಹಾರ ಕಿಟ್ ಗಳನ್ನ ವಿತರಣೆ ಮಾಡಲಾಗಿದೆ ಎಂದು ಗೋಪಾಲಯ್ಯ ಹೇಳಿದರು.
ಈ ಸಂದರ್ಭದಲ್ಲಿ ನಾನು ಅಂಬರೀಶ್ ಅಣ್ಣ ಅವರನ್ನ ನೆನಪಿಸಿಕೊಳ್ಳುತ್ತೀನಿ. ಅವರು ವಸತಿ ಸಚಿವರಾಗಿದ್ದಾಗ ನನ್ನನ್ನು ಕರೆದು ನಿನಗೆ ಏನು ಬೇಕು ಗೋಪಾಲಯ್ಯ ಅಂತ ಕೇಳಿದ್ರು. ಇವತ್ತು ಸುಮಲತ ಅಂಬರೀಶ್ ಅವರು ಮತ್ತು ರಾಕ್ ಲೈನ್ ವೆಂಕಟೇಶ್ ಕೇಳಿಕೊಂಡಂತೆ ನನ್ನ ಕೈಲಾದಷ್ಟು ಸಹಾಯ ಮಾಡಿದ್ದೀನಿ ಎಂದರು.