ಹೇಗಿದ್ಲು... ಹೇಗಾದ್ಳು.. ವಿಶ್ವ ಸುಂದರಿ : ಹರ್ನಾಜ್ ಸಂಧು ವಿಡಿಯೋ ವೈರಲ್..!
ಮಿಸ್ ಯೂನಿವರ್ಸ್ ಹರ್ನಾಜ್ ಸಂಧು ತೂಕ ಹೆಚ್ಚಳದ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ. ಅವರು ತಮ್ಮ ಹೊಸ ವೀಡಿಯೊವನ್ನು ಬಿಡುಗಡೆ ಮಾಡಿದ ನಂತರ ಟೀಕೆಗಳನ್ನು ಎದುರಿಸುವಂತಾಗಿದೆ. ಇನ್ನು ವೈರಲ್ ವೀಡಿಯೋದಲ್ಲಿ ಹರ್ನಾಜ್ ಮುದ್ದಾಗಿ ಕಾಣುತ್ತಿದ್ದಾರೆ ಅದ್ರೆ, ಆಕೆಯ ತೂಕ ಹೆಚ್ಚಾಗಿದೆ, ಪ್ಯಾಟ್ ಆಗಿದ್ದಾರೆ ಎಂದು ಕೆಲವರು ಟೀಕಿಸುತ್ತಿದ್ದಾರೆ.
Miss Universe Harnaaz Sandhu : ಮಿಸ್ ಯೂನಿವರ್ಸ್ ಹರ್ನಾಜ್ ಸಂಧು ತೂಕ ಹೆಚ್ಚಳದ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ. ಅವರು ತಮ್ಮ ಹೊಸ ವೀಡಿಯೊವನ್ನು ಬಿಡುಗಡೆ ಮಾಡಿದ ನಂತರ ಟೀಕೆಗಳನ್ನು ಎದುರಿಸುವಂತಾಗಿದೆ. ಇನ್ನು ವೈರಲ್ ವೀಡಿಯೋದಲ್ಲಿ ಹರ್ನಾಜ್ ಮುದ್ದಾಗಿ ಕಾಣುತ್ತಿದ್ದಾರೆ ಅದ್ರೆ, ಆಕೆಯ ತೂಕ ಹೆಚ್ಚಾಗಿದೆ, ಪ್ಯಾಟ್ ಆಗಿದ್ದಾರೆ ಎಂದು ಕೆಲವರು ಟೀಕಿಸುತ್ತಿದ್ದಾರೆ.
ಹೌದು.. ನೆಟ್ಟಿಗರಿಗೆ ಟ್ರೋಲ್ ಮಾಡಲು ಒಂದು ಕಾರಣಬೇಕು. ಆದ್ರೆ ಅದರ ಹಿಂದಿನ ಸತ್ಯ ಮಾತ್ರ ಅವರಿಗೆ ಅರ್ಥವಾಗಲ್ಲ. ಇದೀಗ ಹರ್ನಾಜ್ ಅವರನ್ನೂ ಸಹ ಟ್ರೋಲ್ ಮಾಡಲಾಗಿದೆ. ಆದ್ರೆ ಇಲ್ಲಿ ಅವರ ಬಾಡಿ ಶೇಪ್ ಕುರಿತು ಮಾತನಾಡಿರುವುದು ನಿಜಕ್ಕೂ ಆಘಾತಕಾರಿ. ಏಕೆಂದ್ರೆ ಹರ್ನಾಜ್ ಅವರು ಉದರದ ಕಾಯಿಲೆಯಿಂದ ಬಳಲುತ್ತಿದ್ದಾರೆ. ಇದರಿಂದಾಗಿ ಅವರು ಗೋಧಿ ಹಿಟ್ಟು ಮತ್ತು ಇತರ ಅನೇಕ ವಸ್ತುಗಳನ್ನು ತಿನ್ನಲು ಸಾಧ್ಯವಿಲ್ಲ ಆದ್ದರಿಂದ ಅವರ ತೂಕ ಹೆಚ್ಚಾಗಿದೆ. ಇದನ್ನ ಅರಿಯದ ಜನ ವ್ಯಂಗ್ಯವಾಡುತ್ತಿದ್ದಾರೆ.
ಇದನ್ನೂ ಓದಿ: Rajamouli on Kantara: ಕಾಂತಾರ ಯಶಸ್ಸಿನ ಬಗ್ಗೆ ಡೈರೆಕ್ಟರ್ ರಾಜಮೌಳಿ ಹೀಗಂದಿದ್ದೇಕೆ?
ಜಿಲೆಬಿ ಕುಕ್ ಮಾಡುವ ವೀಡಿಯೊವನ್ನು ಹರ್ನಾಜ್ ತಮ್ಮ ಇನ್‌ಸ್ಟಾಗ್ರಾಮ್ ಪ್ರೊಫೈಲ್‌ನಲ್ಲಿ ಹಂಚಿಕೊಂಡಿದ್ದಾರೆ. ಇನ್ನು ವಿಡಿಯೋ ನೋಡಿದ ಇನ್‌ಸ್ಟಾಗ್ರಾಮ್ ಬಳಕೆದಾರರು, ʼನಿಮ್ಮನ್ನು ನೋಡಿದರೆ, ಮಿಸ್ ಯೂನಿವರ್ಸ್‌ನಂತೆ ಅನಿಸುವುದಿಲ್ಲ ಎಂದು ಬಾಡಿ ಶೇಪ್ ಕುರಿತು ವ್ಯಂಗ್ಯವಾಡಿದ್ದಾರೆ. ಅಲ್ಲದೆ, ಅವರ ಅಭಿಮಾನಿಗಳು, ನೀವು ದಿನದಿಂದ ದಿನಕ್ಕೆ ಬ್ಯೂಟಿಫುಲ್ ಆಗುತಿದ್ದೀರಿ ಎಂದು ಹೊಗಳಿದ್ದಾರೆ. ಇನ್ನೊಬ್ಬರು ʼಬೋಹೋತ್ ಮೋಟಾ ಹೋ ಗೆಯೆ ಹೋ ಆಪ್ ಮೇಡಮ್ʼ ಎಂದು ಕಾಮೆಂಟ್ ಮಾಡಿದ್ದಾರೆ.
ತನ್ನ ತೂಕ ಹೆಚ್ಚಳ ವಿಚಾರ ಟ್ರೋಲ್ ಆಗಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹರ್ನಾಜ್, ನಾನು ಎಷ್ಟೋ ಸರಿ ಇಂತಹ ವಿಚಾರಗಳಿಂದ ಆತ್ಮ ವಿಶ್ವಾಸ ಕಳೆದುಕೊಂಡಿದ್ದೇನೆ. ಕೆಲವೊಂದು ಸರಿ ಅಕಸ್ಮಾತಾಗಿ ವೇದಿಕೆ ಮೇಲೆ ಹೋದಾಗ ಇಂತಹ ಮಾತುಗಳೆಲ್ಲ ಮನಸ್ಸಿಗೆ ಬರುತ್ತವೆ. ಈ ವಿಚಾರಗಳು ನನ್ನನ್ನು ದುಃಖಿತಳನ್ನಾಗುವಂತೆ ಮಾಡುತ್ತವೆ ಎಂದು ನೋವು ತೋಡಿಕೊಂಡಿದ್ದಾರೆ. ಇದೀಗ ಹರ್ನಾಜ್ ಅವರು ಪಂಜಾಬಿ ಚಿತ್ರ ʼಬಾಯಿ ಜಿ ಕುಟ್ಟಂಗೆʼ ಮೂಲಕ ಸಿನಿರಂಗ ಪ್ರವೇಶ ಮಾಡಲಿದ್ದಾರೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.