Udhayanidhi stalin : ಹೇಗೆ ಸೊಳ್ಳೆ, ಡೆಂಗ್ಯೂ, ಮಲೇರಿಯಾ, ಕರೋನಾ ಇತ್ಯಾದಿಗಳನ್ನು ನಿರ್ಮೂಲನೆ ಮಾಡಬೇಕೇ ಹೊರತು ಅವುಗಳನ್ನು ವಿರೋಧಿಸಲು ಸಾಧ್ಯವಿಲ್ಲವೊ, ಅದರಂತೆ ಸನಾತನವೂ ಹಾಗೆಯೇ, ಅದನ್ನು ವಿರೋಧಿಸಬಾರದು ನಿರ್ಮೂಲನೆ ಮಾಡಬೇಕು ಎಂದು ಸಚಿವ ಉದಯನಿಧಿ ಹೇಳಿರುವ ಹೇಳಿಕೆಗೆ ಬಿಜೆಪಿ ತೀರ್ವ ವಿರೋಧ ವ್ಯಕ್ತಪಡಿಸಿದೆ.


COMMERCIAL BREAK
SCROLL TO CONTINUE READING

ತಮಿಳು ನಟ, ಸಚಿವ ಉದಯನಿಧಿ ಸ್ಟಾಲಿನ್ ಅವರು ಚೆನ್ನೈನ ತೇನಂಪೇಟೆಯಲ್ಲಿ ನಡೆದ ಸನಾತನ ಧರ್ಮ ನಿರ್ಮೂಲನಾ ಸಮಾವೇಶದಲ್ಲಿ ಭಾಗವಹಿಸಿದ್ದರು. ಈ ವೇಳೆ, ಈ ಸಮ್ಮೇಳನಕ್ಕೆ ಸನಾತನ ವಿರೋಧಿ ಸಮಾವೇಶ ಎಂದು ಹೆಸರಿಡದೆ ಸನಾತನ ನಿರ್ಮೂಲನಾ ಸಮಾವೇಶ ಎಂದು ಹೆಸರಿಸಿರುವ ಸಂಘಟಕರನ್ನು ಅಭಿನಂದಿಸುತ್ತೇನೆ. ಕೆಲವನ್ನು ವಿರೋಧಿಸಲು ಸಾಧ್ಯವಿಲ್ಲ, ಸೊಳ್ಳೆ, ಡೆಂಗ್ಯೂ, ಮಲೇರಿಯಾ, ಕರೋನಾ ಇತ್ಯಾದಿಗಳನ್ನು ನಿರ್ಮೂಲನೆ ಮಾಡಬೇಕೆ ಹೊರತು ಅವುಗಳನ್ನು ವಿರೋಧಿಸಲು ಸಾಧ್ಯವಿಲ್ಲ ಎಂದು ಹೇಳಿದರು. 


ಇದನ್ನೂ ಓದಿ:5 ಅಫೇರ್, 2 ಮದುವೆ.. ಆದರೂ‌ ಒಂಟಿ ಜೀವನ ಕಳೆಯುತ್ತಿರುವ ಖ್ಯಾತ ನಟಿ


ಸನಾತನ ಸಮಾನತೆ ಮತ್ತು ಸಾಮಾಜಿಕ ನ್ಯಾಯದ ವಿರುದ್ಧವಾಗಿದೆ. ಸನಾತನ ಎಂಬ ಪದವು ಸಂಸ್ಕೃತದಿಂದ ಬಂದಿದೆ, ಅಂದರೆ ಸ್ಥಿರ ಮತ್ತು ಬದಲಾಗುವುದಿಲ್ಲ ಎಂದು ಅರ್ಥೈಸುತ್ತದೆ. ಆದರೆ ನಾವು ಎಲ್ಲವನ್ನೂ ಬದಲಾಯಿಸಬೇಕಾಗಿದೆ. ಯಾವುದೂ ಶಾಶ್ವತವಲ್ಲ. ಕಮ್ಯುನಿಸ್ಟ್ ಚಳವಳಿ ಮತ್ತು ದ್ರಾವಿಡ ಮುನ್ನೇತ್ರ ಕಳಗಂ ಎಲ್ಲವನ್ನು ಪ್ರಶ್ನಿಸಿ ಹುಟ್ಟು ಹಾಕಿರುವ ಚಳವಳಿ ಎಂದು ಹೇಳಿದರು. ಸಚಿವ ಉದಯನಿಧಿ ಭಾಷಣದ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗಿದೆ. ಇದರ ಬೆನ್ನಲ್ಲೇ ಸಚಿವ ಉದಯನಿಧಿ ಸ್ಟಾಲಿನ್ ಅವರ ಹೇಳಿಕೆಗೆ ಬಿಜೆಪಿ ಸೇರಿದಂತೆ ಹಲವು ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ. 


ಸೋನು ಶ್ರೀನಿವಾಸ್ ಗೌಡ ಹಾಟ್‌ ಅವತಾರ.. ಕೈಯಲ್ಲಿ ಗ್ಲಾಸ್‌, ಸಿಗರೇಟು.!


ನಿಮ್ಮ ಅಭಿಪ್ರಾಯ ಕ್ರಿಶ್ಚಿಯನ್‌ ಮಿಷನರಿಗಳಿಂದ ಹುಟ್ಟಿಕೊಂಡಿದೆ : ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಕೂಡ ಉದಯನಿಧಿ ಮಾತಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. ತಮ್ಮ ಟ್ವಿಟ್ಟರ್ ಪೋಸ್ಟ್‌ನಲ್ಲಿ, “ಗೋಪಾಲಪುರಂ ಕುಟುಂಬದ ಏಕೈಕ ಗುರಿ ರಾಜ್ಯದ ಜಿಡಿಪಿಯನ್ನು ಮೀರಿ ಸಂಪತ್ತನ್ನು ಸಂಗ್ರಹಿಸುವುದು. ಉದಯನಿಧಿ ಸ್ಟಾಲಿನ್ ಅವರ ನಿಮ್ಮ, ನಿಮ್ಮ ತಂದೆ ಅಥವಾ ನಿಮ್ಮಿಬ್ಬರ ಅಭಿಪ್ರಾಯಗಳು ಕ್ರಿಶ್ಚಿಯನ್ ಮಿಷನರಿಗಳಿಂದ ಹುಟ್ಟಿಕೊಂಡಿವೆ ಎಂದು ಗುಡುಗಿದ್ದಾರೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.