Shweta Tiwari is dating this famous young actor: 43 ವರ್ಷದ ಶ್ವೇತಾ ತಿವಾರಿ ಖ್ಯಾತ ನಟನೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿ ಹಬ್ಬಿತ್ತು.. 10 ವರ್ಷಗಳ ನಂತರ ಎರಡು ಮಕ್ಕಳ ತಾಯಿಯಾಗಿರುವ ಶ್ವೇತಾ ತಿವಾರಿ ಅವರೊಂದಿಗೆ ಡೇಟಿಂಗ್ ಮಾಡುವ ಬಗ್ಗೆ ನಟ ಅಂತಿಮವಾಗಿ ಮೌನ ಮುರಿದಿದ್ದಾರೆ.


COMMERCIAL BREAK
SCROLL TO CONTINUE READING

ಶ್ವೇತಾ ತಿವಾರಿ ಭೋಜ್‌ಪುರಿ ಚಲನಚಿತ್ರೋದ್ಯಮಕ್ಕಿಂತ ಟಿವಿಯಲ್ಲಿ ತನ್ನ ಛಾಪು ಮೂಡಿಸಿದ ನಂತರ, ನಟಿ ಒಟಿಟಿಯತ್ತ ಮುಖ ಮಾಡಿದರು. ಸದ್ಯ ಅಲ್ಲಿಯೂ ತನ್ನ ನಟನಾ ಕೌಶಲವನ್ನು ತೋರಿಸುತ್ತಿದ್ದಾರೆ.. ಶ್ವೇತಾ ತಿವಾರಿ ಟಿವಿಯ ಅತ್ಯಂತ ಜನಪ್ರಿಯ ಧಾರಾವಾಹಿ 'ಕಸೌತಿ ಜಿಂದಗಿ ಕಿ' ನಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿದ ನಂತರ ಅತೀ ಹೆಚ್ಚು ಜನಪ್ರಿಯತೆ ಗಳಿಸಿದರು. 


ಇದನ್ನೂ ಓದಿ-ಪಡ್ಡೆ ಹೈಕ್ಲ ಜಾನ್‌ ಈ ಜಾನ್ವಿ...! ಫೋಟೋ ನೋಡಿದ್ರೆ ದೇವರಾಣೆಗೂ ನಿದ್ದೆ ಬರಲ್ಲ...


ಇವರು ಕೇವಲ 12 ವರ್ಷದವಳಿದ್ದಾಗ ಉದ್ಯಮಕ್ಕೆ ಪ್ರವೇಶಿಸಿ.. ಭೋಜ್‌ಪುರಿ ಚಿತ್ರಗಳೊಂದಿಗೆ ತನ್ನ ವೃತ್ತಿಜೀವನವನ್ನು ಪ್ರಾರಂಭಿಸಿದ ನಂತರ, ನಟಿ ಧಾರಾವಾಹಿಗಳು ಮತ್ತು ಬಾಲಿವುಡ್ ಸಿನಿಮಾಗಳಲ್ಲಿಯೂ ಸಹ ಹೆಸರು ಮಾಡಿದರು.  


ಶ್ವೇತಾ ತಿವಾರಿ ತನ್ನ ಮಾಜಿ ಪತಿ ರಾಜಾ ಚೌಧರಿ ಜೊತೆಗಿನ ಸಂಬಂಧವು ಸ್ನೇಹದಿಂದ ಪ್ರಾರಂಭವಾಗಿ ಪ್ರೀತಿಗೆ ತಿರುಗಿತು. ಈ ಹಿನ್ನಲೆಯಲ್ಲಿ ಆಕೆ ತನ್ನ ಮನೆಯವರ ವಿರುದ್ಧ ಹರಿಹಾಯ್ದು ರಾಜಾ ಚೌಧರಿಯನ್ನು ಮದುವೆಯಾದಳು.  ಶ್ವೇತಾ ತಿವಾರಿ ರಾಜಾ ಚೌಧರಿ ಅವರನ್ನು ಮದುವೆಯಾದಾಗ ಅವರಿಗೆ ಕೇವಲ 18 ವರ್ಷ ವಯಸ್ಸಾಗಿತ್ತು ಮತ್ತು 20 ನೇ ವಯಸ್ಸಿನಲ್ಲಿ ಅವರು ತಾಯಿಯಾದರು. ಮಗಳು ಪಾಲಕ್ ತಿವಾರಿ ಹುಟ್ಟಿದ ಕೂಡಲೇ ನಟಿ ತನ್ನ ಪತಿಗೆ ವಿಚ್ಛೇದನ ನೀಡಿದರು. 


ನಿರ್ದೇಶಕ ರಾಜಾ ಚೌಧರಿಯಿಂದ ವಿಚ್ಛೇದನ ಪಡೆದ ಹಲವು ವರ್ಷಗಳ ನಂತರ ನಟಿಯ ಜೀವನದಲ್ಲಿ ಪ್ರೀತಿ ಮತ್ತೆ ಚಿಗುರಿ... ಅವರು 2013 ರಲ್ಲಿ ಅಭಿನವ್ ಕೊಹ್ಲಿಯನ್ನು ಎರಡನೇ ಬಾರಿಗೆ ವಿವಾಹವಾದರು. ನಂತರ ಶ್ವೇತಾ ತಿವಾರಿಗೆ ಒಬ್ಬ ಮಗ ಜನಿಸಿದನು. ಆದರೆ ಮದುವೆಯಾಗಿ 6 ​​ವರ್ಷಗಳ ನಂತರ ಇಬ್ಬರೂ ದೂರವಾದರು.. ಎರಡು ಬಾರಿ ಪ್ರೀತಿಸಿ ಮೋಸ ಹೋದ ಶ್ವೇತಾ ಈಗ ಮಗಳು ಪಾಲಕ್ ತಿವಾರಿ ಹಾಗೂ ಮಗ ರೆಯಾನ್ಶ್ ಕೊಹ್ಲಿ ಜತೆ ಒಂಟಿಯಾಗಿ ವಾಸಿಸುತ್ತಿದ್ದಾರೆ. ಇದರ ಮಧ್ಯೆ ಅವರ ಖ್ಯಾತ ನಟನೊಂದಿಗೆ ಡೇಟಿಂಗ್‌ ಮಾಡುತ್ತಿದ್ದಾರೆ ಎನ್ನುವ ವದಂತಿ ಹಬ್ಬಿತ್ತು... ಈ ಬಗ್ಗೆ ಆ ನಟನೇ ಮೌನ ಮುರಿದಿದ್ದಾರೆ.. 


ಇದನ್ನೂ ಓದಿ-ಅದನ್ನ ಮಾಡಲ್ಲ ಅಂತ ಹೇಳಿದ್ದೆ, ಆದರೂ ಒಂದೇರಡು ಬಾರಿ ಆ ತಪ್ಪು ಮಾಡಿದ್ದೇನೆ..! ಖ್ಯಾತ ನಟಿ ಶಾಕಿಂಗ್‌ ಹೇಳಿಕೆ


ಕಿರುತೆರೆ ನಟ ಫಹಮಾನ್ ಖಾನ್ ಪ್ರಸ್ತುತ 'ಕೃಷ್ಣ ಮೋಹಿನಿ' ಧಾರಾವಾಹಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಡೇಟಿಂಗ್ ಮಾತುಕತೆಯಿಂದಾಗಿ ಗಮನ ಸೆಳೆದಿದ್ದರು. ಈ ಬಗ್ಗೆ ಫಾಹ್ಮಾನ್‌ ಪ್ರತಿಕ್ರಿಯಿಸಿದ್ದಾರೆ.. ಸಿದ್ಧಾರ್ಥ್ ಕಾನನ್ ಅವರೊಂದಿಗಿನ ಸಂದರ್ಶನದಲ್ಲಿ, 'ಮೇರೆ ಡ್ಯಾಡ್ ಕಿ ದುಲ್ಹನ್' ಸಮಯದಲ್ಲಿ ಶ್ವೇತಾ ತಿವಾರಿ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾನೆ ಎಂಬ ವದಂತಿಗಳಿವೆ ಎಂದು ಫಹ್ಮಾನ್ ಅವರನ್ನು ಕೇಳಲಾಯಿತು. ಇದಕ್ಕೆ ಫಹ್ಮಾನ್ ಸ್ಪಷ್ಟ ಉತ್ತರ ನೀಡಿದ್ದಾರೆ..


ಇದು ನಿಜವಲ್ಲ.. ನಾನು ಅವರನ್ನು ನಮ್ಮ ಗುರು ಎಂದು ಕರೆಯುತ್ತೇನೆ. ಇವೆಲ್ಲವೂ ಕೇಲವ ವದಂತಿಗಳು ಮತ್ತು ಸುಳ್ಳು.. ನಮ್ಮ ಬಾಂಧವ್ಯ ಚೆನ್ನಾಗಿತ್ತು. ಕೋವಿಡ್ ಸಮಯದಲ್ಲಿ ನಾನು ಅವರನ್ನು ಅವರ ಮನೆಯ ಕೆಳಗೆ ಭೇಟಿಯಾಗುತ್ತಿದ್ದೆ. ನಮ್ಮಿಬ್ಬರ ಮಧ್ಯೆ ಅಂತಹದ್ದೇನು ಇಲ್ಲ.. ನಾನು ತುಂಬಾ ಖಾಸಗಿ ವ್ಯಕ್ತಿ ಮತ್ತು ನನ್ನ ವೈಯಕ್ತಿಕ ಜೀವನವನ್ನು ಸಾರ್ವಜನಿಕಗೊಳಿಸುವುದಿಲ್ಲ" ಎಂದು ಹೇಳಿದ್ದಾರೆ... 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.