ಏಪ್ರಿಲ್ 24 ವರನಟ ಡಾ. ರಾಜಕುಮಾರ್ ಹುಟ್ಟುಹಬ್ಬ. ಈ ಸಂದರ್ಭದಲ್ಲಿ ಏಪ್ರಿಲ್ 28ರ ಗುರುವಾರ ಸಂಜೆ 6.30ಕ್ಕೆ ಗಾನಗಂಧರ್ವ ಡಾ. ರಾಜಕುಮಾರ್ ನೆನಪಿನಲ್ಲಿ "ಮೈ ನೇಮ್ ಇಸ್ ರಾಜ್" ಎಂಬ ಸಂಗೀತ ಸಂಜೆ ಕಾರ್ಯಕ್ರಮ ನಡೆಯಲಿದೆ. ಕೆಲವು ವರ್ಷಗಳ ಹಿಂದೆ "ಸರಿಗಮಪ" ಮೂಲಕ ಮರಿ ಅಣ್ಣಾವ್ರು ಅಂತಲೇ ಹೆಸರಾಗಿದ್ದ ಮನೋಜವಂ‌ ಅತ್ರೇಯ ಸಾರಥ್ಯದಲ್ಲಿ ಈ ಸಂಗೀತ ಕಾರ್ಯಕ್ರಮ ನಡೆಯಲಿದೆ. 


COMMERCIAL BREAK
SCROLL TO CONTINUE READING

ಇದನ್ನು ಓದಿ: KGF 2: ಕನ್ನಡದಲ್ಲೇ ಕೆಜಿಎಫ್ ಚಾಪ್ಟರ್‌ 2 ವೀಕ್ಷಿಸಿದ ರಜನಿಕಾಂತ್


ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮನೋಜವಂ ಆತ್ರೇಯ ಮಾತನಾಡಿದರು. ನಾನು ಮೊದಲಿನಿಂದಲೂ ಅಣ್ಣಾವ್ರ ಅಭಿಮಾನಿ. "ಸರಿಗಮಪ"ನಲ್ಲೂ ನಾನು ಹೆಚ್ಚಾಗಿ ಅವರ ಹಾಡುಗಳನ್ನು ಹಾಡುತ್ತಿದ್ದೆ. ಎಲ್ಲರೂ ಮರಿ ಅಣ್ಣಾವ್ರು ಅಂತಲೇ ಕರೆಯುತ್ತಿದ್ದರು. ಈಗ ಡಾ. ರಾಜ್ ನೆನಪಿನಲ್ಲಿ "ಮೈ ನೇಮ್ ಇಸ್ ರಾಜ್" ಎಂಬ ಸಂಗೀತ ಕಾರ್ಯಕ್ರಮ ಟೀಮ್ ಆತ್ರೇಯ ಮೂಲಕ ಆಯೋಜಿಸಿದ್ದೇವೆ. ಏಪ್ರಿಲ್ 28ರ ಗುರುವಾರ ಸಂಜೆ 6.30ಕ್ಕೆ ಮಲ್ಲೇಶ್ವರಂನ ಚೌಡಯ್ಯ ಮೆಮೋರಿಯಲ್ ಹಾಲ್‌ನಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ರಾಜ್ ಅವರ ಆದರ್ಶಮಯ ವ್ಯಕ್ತಿತ್ವವನ್ನು ಸಂಗೀತದ ಮೂಲಕ ಪ್ರೇಕ್ಷಕರಿಗೆ ಉಣಬಡಿಸುವ ಕಾರ್ಯಕ್ರಮ ಇದಾಗಲಿದೆ. 


ನಾಡಿನ ಜನಪ್ರಿಯ ಗಾಯಕರು ಹಾಗೂ ವಾದ್ಯಗಾರರ ಸಮ್ಮಿಲನದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಹಿರಿಯ ನಿರ್ದೇಶಕ ಭಗವಾನ್ ಸೇರಿದಂತೆ ಚಿತ್ರರಂಗ ಹಾಗೂ ವಿವಿಧ ಕ್ಷೇತ್ರದ ಗಣ್ಯರು ಈ ಸಮಾರಂಭಕ್ಕೆ ಸಾಕ್ಷಿಯಾಗಲಿದ್ದಾರೆ. ಟಿಕೆಟ್ ದರ 350ರಿಂದ 500 ರೂಪಾಯಿಗಳಿಗೆ ನಿಗದಿ ಮಾಡಲಾಗಿದೆ. ಬುಕ್ ಮೈ ಶೋನಲ್ಲಿ ಟಿಕೆಟ್ ಬುಕ್ ಮಾಡಿಕೊಳ್ಳಬಹುದು.  ಈ ಕಾರ್ಯಕ್ರಮದಿಂದ ಬಂದ ಹಣವನ್ನು ಮೈಸೂರಿನ "ಶಕ್ತಿಧಾಮ" ಹಾಗೂ ಬೆಂಗಳೂರಿನ "ನವಚೇತನ" ಸಂಸ್ಥೆಗೆ ನೀಡುತ್ತೇವೆ ಎಂದು ಮಾಹಿತಿ ನೀಡಿದ ಮನೋಜವಂ ಆತ್ರೇಯ, ಇದೇ ಸಂದರ್ಭದಲ್ಲಿ ತಾವೇ ಬರೆದಿರುವ ಹಾಡೊಂದನ್ನು ಬಿಡುಗಡೆ ಮಾಡುವುದಾಗಿ ತಿಳಿಸಿದರು.


ಇದನ್ನು ಓದಿ: ನಟಿ ಸೌಂದರ್ಯ ಬಗ್ಗೆ ನಿಮಗೆ ಗೊತ್ತಿಲ್ಲದ ಇಂಟ್ರೆಂಸ್ಟಿಂಗ್‌ ಮಾಹಿತಿ..!


ಮನೋಜವಂ ಅವರ ತಂದೆ ಜನಾರ್ಧನ, ಟೀಮ್ ಆತ್ರೇಯ ಸದಸ್ಯರಾದ ಭರತ್, ಪ್ರಜ್ವಲ್ ಕಶ್ಯಪ್ ಹಾಗೂ ಮನೋಜ್ ಹೊಸ್ಮನೆ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು. ಸುದ್ದಿಗೋಷ್ಠಿಗೂ ಮುನ್ನ "ಮೈ ನೇಮ್ ಇಸ್ ರಾಜ್" ಸಂಗೀತ ಕಾರ್ಯಕ್ರಮಕ್ಕೆ ಸಿದ್ಧಪಡಿಸಿರುವ ಮೂರು ಪ್ರೋಮೋಗಳನ್ನು ಪ್ರದರ್ಶಿಸಲಾಯಿತು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.