ಬೆಂಗಳೂರು : ಟಾಲಿವುಡ್‌ ಖ್ಯಾತ ನಟ ನಂದಮೂರಿ ಬಾಲಕೃಷ್ಣ ಅವರು ನಟಿ ರಶ್ಮಿಕಾ ಮಂದಣ್ಣ ಅವರನ್ನು ತಮ್ಮ ಕ್ರಶ್ ಎಂದು ಹೇಳಿಕೊಂಡಿದ್ದಾರೆ. ಓಟಿಟಿ ʼಆಹಾʼದಲ್ಲಿ ಪ್ರಸಾರವಾಗುತ್ತಿರುವ ʼಅನ್ ಸ್ಟಾಪೆಬಲ್‌ ಸೀಸನ್‌ʼ 2ರಲ್ಲಿ ಈ ವಿಚಾರ ಹಂಚಿಕೊಂಡಿದ್ದು, ಬಾಲಯ್ಯ ಅಭಿಮಾನಿಗಳಿಗೆ ಶಾಕ್‌ ನೀಡಿದೆ.


COMMERCIAL BREAK
SCROLL TO CONTINUE READING

ಆಂದ್ರ ಪ್ರದೇಶ ಮಾಜಿ ಸಿಎಂ ನಾರಾ ಚಂದ್ರಬಾಬು ನಾಯ್ಡು ಅವರು ಅನ್‌ಸ್ಟಾಪೆಬಲ್‌ ಎರಡನೇ ಸೀಸನ್‌ನ ಮೊದಲನೇ ಎಪಿಸೋಡ್‌ನಲ್ಲಿ ಬಾಗವಹಿಸಿದದ್ದರು. ಇನ್ನು ಎರಡನೇ ಎಪಿಸೋಡ್ ಪ್ರೋಮೋ ಹೊರಬಂದಿದೆ. ಈ ಪ್ರೋಮೋದಲ್ಲಿ ವಿಶ್ವಕ್ ಸೇನ್‌ ಮತ್ತು ಸಿದ್ದು ಜೊನ್ನಲಗಡ್ಡ ಭಾಗಿಯಾಗಿದ್ದಾರೆ. ಅಲ್ಲದೆ, ನಿರ್ಮಾಪಕ ನಾಗವಂಶಿ ಕೂಡ ಕಾಣಿಸಿಕೊಂಡಿದ್ದಾರೆ.


ಇದನ್ನೂ ಓದಿ: ಎಪಿ ಸಿಎಂ ಜಗನ್‌ಗೆ ಪವರ್‌ ವಾರ್ನಿಂಗ್‌ : ಪವನ್‌ ಕಲ್ಯಾಣ್‌ ಗೃಹ ಬಂಧನ..!


ಇನ್ನು ಯುವ ನಟರ ಜೊತೆ ಸಖತ್‌ ಟಾಕ್‌ ವಾರ್‌ ನಡೆಸಿದ ಬಾಲಯ್ಯ, ವಿಶ್ವಕ್.. ಮಾಸ್ ಕಾ ದಾಸ್.. ಸಿದ್ದು ಯಾಸ್ ಕಾ ಮಾಸ್.. ಆದರೆ ನೀವು ಯಾರೊಂದಿಗೆ ಇದ್ದಿರಾ ಗೊತ್ತಾ..? ಗಾಡ್ ಆಫ್ ಮಾಸ್ ಎಂದು ಬಾಲಯ್ಯ ಹೇಳಿಕೊಂಡರು. ಇನ್ನು ಕಾರ್ಯಕ್ರಮದಲ್ಲಿ ಸಿದ್ದು ಫೇವರಿಟ್ ಹೀರೋಯಿನ್ ಬಗ್ಗೆ ಬಾಲಯ್ಯ ಕೇಳಿದಾಗ, ಸಿದ್ದು, ಕಿಯಾರ ಅದ್ವಾಣಿ ಎಂದರೆ ಕ್ರಶ್‌ ಅಂತ ಹೇಳಿದ್ರು. ಆಗ ಸಿದ್ದು, ಸರ್‌ ನಿಮಗೆ ಯಾವ ಹೀರೋಯಿನ್‌ ಇಷ್ಟ ಎಂದು ಕೇಳಿದಾಗ, ರಶ್ಮಿಕ ಮಂದಣ್ಣ ಎಂದು ಬಾಲಯ್ಯ ಉತ್ತರಿಸಿದರು.


ಸದ್ಯ ಭವಿಷ್ಯದಲ್ಲಿ ರಶ್ಮಿಕಾ ಬಾಲಯ್ಯ ಸಿನಿಮಾದಲ್ಲಿ ನಟಿಸುತ್ತಾರಾ..? ನಟಿಸಿದ್ರು ಇಬ್ಬರ ಜೋಡಿ ಸ್ಕ್ರೀನ್‌ ಮೇಲೆ ಹೇಗಿರುತ್ತೆ ಅನ್ನೋದನ್ನ ಕಾಯ್ದು ನೋಡ್ಬೇಕು. ಅಲ್ಲದೆ, ರಶ್ಮಿಕಾಗೆ ಈಗ ನ್ಯಾಷನಲ್ ವೈಡ್‌ ಕ್ರೇಜ್ ಇದೆ. ಬಾಲಿವುಡ್‌ನಲ್ಲಿ ಸತತವಾಗಿ ಆಫರ್‌ಗಳು ಬರುತ್ತಿವೆ. ಇನ್ನು ಪುಷ್ಪ ಹೊಡೆತಕ್ಕೆ ಕ್ರೇಜ್ ಹೆಚ್ಚಾಗಿದೆ. ಈಗಲೂ ರಶ್ಮಿಕಾ ಅವರನ್ನು ಜನರು ಶ್ರೀವಲ್ಲಿಯಾಗಿಯೇ ಗುರ್ತಿಸುತ್ತಾರೆ. ಅಭಿಮಾನಿಗಳು ಕೂಡ ರಶ್ಮಿಕಾ ಅಂದಕ್ಕೆ ಮರುಳಾದಂತೆ ಬಾಲಯ್ಯ ಅವರು ಕೂಡ ಫಿದಾ ಆಗಿದ್ದಾರೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.