Vignesh Sivan-Nayanathara: ಸೌತ್ ಲೇಡಿ ಸೂಪರ್ಸ್ಟಾರ್ ನಯನತಾರಾ ಇತ್ತೀಚಿನ ದಿನಗಳಲ್ಲಿ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಸುದ್ದಿಯಲ್ಲಿದ್ದಾರೆ. ನಟಿಯ ವೈವಾಹಿಕ ಜೀವನ ಸರಿಯಾಗಿಲ್ಲ ಎಂಬ ವದಂತಿಗಳು ಕೇಳಿಬರುತ್ತಿವೆ. ನಟಿ ತಮ್ಮ ಪತಿ ನಿರ್ಮಾಪಕ ವಿಘ್ನೇಶ್ ಶಿವನ್ ಅವರನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಅನ್‌ಫಾಲೋ ಮಾಡಿದ್ದಾರೆ.. ವಿಚ್ಚೇಧನವನ್ನೂ ಪಡೆಯಲಿದ್ದಾರೆ ಎಂಬ ವರದಿಗಳು ಬಂದಿದ್ದವು.. 


COMMERCIAL BREAK
SCROLL TO CONTINUE READING

ಆದರೆ ಈ ವಿಚ್ಛೇದನದ ಸುದ್ದಿಯ ನಡುವೆ, ವಿಘ್ನೇಶ್ ತನ್ನ ಹೆಂಡತಿಯ ಫೋಟೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳುವ ಮೂಲಕ ಎಲ್ಲರನ್ನೂ ಮೂಕವಿಸ್ಮಿತಗೊಳಿಸಿದ್ದಾರೆ. ಅವರು ತಮ್ಮ ಇನ್‌ಸ್ಟಾ ಸ್ಟೋರಿಯಲ್ಲಿ ನಯನತಾರಾ ಅವರ ಇತ್ತೀಚಿನ ಫೋಟೋಶೂಟ್‌ನ ಪೋಟೋಗಳನ್ನು ಹಂಚಿಕೊಂಡಿದ್ದಾರೆ..


ಇದನ್ನೂ ಓದಿ-UI Song: ಯುಐ ಫಸ್ಟ್‌ ಸಾಂಗ್‌ ಔಟ್:‌ ಚೀಪ್‌ ಸಾಂಗ್‌ ಅಲ್ಲ ಟ್ರೋಲ್‌ ಸಾಂಗ್!


ಕೆಲವು ದಿನಗಳ ಹಿಂದೆ, ನಟಿ ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ರಹಸ್ಯವಾದ ಪೋಸ್ಟ್ ಅನ್ನು ಹಂಚಿಕೊಂಡಿದ್ದರು.. ಅದನ್ನು ನೋಡಿದ ನೆಟ್ಟಿಗರು ಈ ಕ್ಯೂಟ್‌ ಜೋಡಿ ದೂರವಾಗುತ್ತಿರುವುದು ಖಚಿತ ಎಂದು ಭಾವಿಸಿದ್ದರು.. ಆದರೆ ಅದೆಲ್ಲವೂ ಕೇವಲ ವದಂತಿ ಎಂದು ನಯನ್‌ ಪತಿ ವಿಘ್ನೇಶ್‌ ಪೋಸ್ಟ್‌ ಮೂಲಕ ಕ್ಲಾರಿಟಿ ನೀಡಿದ್ದಾರೆ.. 


 ಇನ್ನು ನಯನ್‌ ಹಾಗೂ ವಿಘ್ನೇಶ್‌ ಇಬ್ಬರೂ 2015 ರಲ್ಲಿ 'ನಾನುಮ್ ರೌಡಿ ಧಾನ್' ಸೆಟ್‌ನಲ್ಲಿ ಮೊದಲು ಭೇಟಿಯಾದರು.. ಚಿತ್ರದ ಶೂಟಿಂಗ್ ಸಮಯದಲ್ಲಿ ಇಬ್ಬರೂ ಪರಸ್ಪರ ಪ್ರೀತಿಸಿ.. ಸುಮಾರು 6 ವರ್ಷಗಳ ಕಾಲ ಪರಸ್ಪರ ಡೇಟಿಂಗ್ ಮಾಡಿದ ನಂತರ 2021 ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು. 2022 ರಲ್ಲಿ ವಿವಾಹವಾದರು... ನಯನತಾರಾ ಮತ್ತು ವಿಘ್ನೇಶ್ ಮದುವೆಯಾದ ಕೇವಲ ನಾಲ್ಕು ತಿಂಗಳ ನಂತರ ಎರಡು ಅವಳಿ ಮಕ್ಕಳನ್ನು ದತ್ತು ಪಡೆಯುವ ಮೂಲಕ ತಾಯ್ತನದ ಖುಷಿ ಅನುಭವಿಸುತ್ತಿದ್ದಾರೆ..  


ಇದನ್ನೂ ಓದಿ-ಹಿರಿಯ ನಿರ್ದೇಶಕರೊಂದಿಗೆ ಮದುವೆ.. ನಂತರ ವಿಚ್ಛೇದನ.. ಈಗ ಮತ್ತೊಂದು ಮದುವೆಯಾದ ಖ್ಯಾತ ನಟಿ ಈಕೆ!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ