ಹಿರಿಯ ನಿರ್ದೇಶಕರೊಂದಿಗೆ ಮದುವೆ.. ನಂತರ ವಿಚ್ಛೇದನ.. ಈಗ ಮತ್ತೊಂದು ಮದುವೆಯಾದ ಖ್ಯಾತ ನಟಿ ಈಕೆ!

South Actress: ಚಿತ್ರರಂಗದಲ್ಲಿ ತಮಗಿಂತ ಹಿರಿಯರನ್ನು ಮದುವೆಯಾದ ಅನೇಕ ತಾರೆಯರಿದ್ದಾರೆ. ಹಲವರ ಮದುವೆ ಯಶಸ್ವಿಯಾಗಿದ್ದರೂ ಹಲವರ ಬಾಂಧವ್ಯ ಹೆಚ್ಚು ಕಾಲ ಉಳಿಯಲಿಲ್ಲ. ಇಂದು ನಾವು ತನಗಿಂತ 12 ವರ್ಷ ಹಿರಿಯ ನಿರ್ದೇಶಕರನ್ನು ಮದುವೆಯಾಗಿ ವಿಚ್ಚೇಧನ ಪಡೆದು ಮತ್ತೊಂದು ಮದುವೆಯಾಗಿ ತಾಯಿಯಾಗುತ್ತಿರುವ ಸೌತ್‌ ನಟಿಯ ಬಗ್ಗೆ ಹೇಳಲಿದ್ದೇವೆ.. 

Written by - Savita M B | Last Updated : Mar 5, 2024, 01:02 PM IST
  • ತಮಿಳು, ಮಲಯಾಳಂ ಮತ್ತು ತೆಲುಗು ಚಿತ್ರರಂಗದ ನಟಿ ಅಮಲಾ ಪೌಲ್ ಅವರಿಗೆ ಇಂದು ಯಾವುದೇ ಗುರುತು ಅಗತ್ಯವಿಲ್ಲ
  • ಇವರು ಬಾಲಿವುಡ್ ಚಿತ್ರಗಳಲ್ಲೂ ಕೆಲಸ ಮಾಡಿದ್ದಾರೆ.
  • ಇದೀಗ ಈ ನಟಿಯ ಜೀವನಕ್ಕೆ ಸಂಬಂಧಿಸಿದ ವಿಷಯಗಳನ್ನು ಇಂದು ನಾವು ತಿಳಿಯೋಣ.
ಹಿರಿಯ ನಿರ್ದೇಶಕರೊಂದಿಗೆ ಮದುವೆ.. ನಂತರ ವಿಚ್ಛೇದನ.. ಈಗ ಮತ್ತೊಂದು ಮದುವೆಯಾದ ಖ್ಯಾತ ನಟಿ ಈಕೆ!    title=

South Actress Amala Paul: ತಮಿಳು, ಮಲಯಾಳಂ ಮತ್ತು ತೆಲುಗು ಚಿತ್ರರಂಗದ ನಟಿ ಅಮಲಾ ಪೌಲ್ ಅವರಿಗೆ ಇಂದು ಯಾವುದೇ ಗುರುತು ಅಗತ್ಯವಿಲ್ಲ. ಇವರು ಬಾಲಿವುಡ್ ಚಿತ್ರಗಳಲ್ಲೂ ಕೆಲಸ ಮಾಡಿದ್ದಾರೆ. ಇದೀಗ ಈ ನಟಿಯ ಜೀವನಕ್ಕೆ ಸಂಬಂಧಿಸಿದ ವಿಷಯಗಳನ್ನು  ಇಂದು ನಾವು ತಿಳಿಯೋಣ.

1991 ರಲ್ಲಿ ಜನಿಸಿದ ಅಮಲಾ ಪೌಲ್, ಮಲಯಾಳಂ ಚಿತ್ರ 'ನೀಲತಮರ' (2009) ಮೂಲಕ ತಮ್ಮ ನಟನಾ ವೃತ್ತಿಯನ್ನು ಪ್ರಾರಂಭಿಸಿದರು. ಅಮಲಾ ಪೌಲ್ 2023 ರಲ್ಲಿ ಅಜಯ್ ದೇವಗನ್ ಅವರ 'ಭೋಲಾ' ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ತಮ್ಮ ವೃತ್ತಿಜೀವನದ ಆರಂಭದಲ್ಲಿ, ಅಮಲಾ ಪೌಲ್ 2011 ರಲ್ಲಿ 'ದೈವ ತಿರುಮಗಳ್' ಚಿತ್ರದಲ್ಲಿ ಕೆಲಸ ಮಾಡಿದರು. ಆ ಸಮಯದಲ್ಲಿ, ಅವರು ನಿರ್ದೇಶಕ ಎಎಲ್ ವಿಜಯ್ ಅವರೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದರು.. 

ಇದನ್ನೂ ಓದಿ-Thalapathy Vijay: 'ದಳಪತಿ' ವಿಜಯ್ ಕೊನೆಯ ಚಿತ್ರಕ್ಕೆ ಆಯ್ಕೆಯಾಗಿರುವ ನಟಿ ಯಾರು ಗೊತ್ತೇ.??

ಆದರೆ ಇಬ್ಬರೂ ಪರಸ್ಪರ ಡೇಟಿಂಗ್ ಮಾಡದೇ ಜೂನ್ 2014 ರಲ್ಲಿ, ಎಎಲ್ ವಿಜಯ್ ಮತ್ತು ಅಮಲಾ ಪೌಲ್ ಚೆನ್ನೈ ಮೇಯರ್ ರಾಮನಾಥನ್ ಚೆಟ್ಟಿಯಾರ್ ಹಾಲ್ನಲ್ಲಿ ಮದುವೆಯಾದರು.. ಅಮಲಾ ಮತ್ತು ವಿಜಯ್ ಅವರ ಸಂಬಂಧ ಚೆನ್ನಾಗಿ ಉಳಿದುಕೊಳ್ಳಿಲ್ಲ.. ಹೀಗಾಗಿ 2017 ರಲ್ಲಿ ವಿಚ್ಛೇದನ ಪಡೆದರು. ನಂತರ ನವೆಂಬರ್ 2023 ರಲ್ಲಿ, ಅಮಲಾ ಪೌಲ್ ಅವರು ಜಗತ್ ದೇಸಾಯಿ ಅವರನ್ನು ಎರಡನೇ ಬಾರಿಗೆ ವಿವಾಹವಾದರು.

ಸೋಷಿಯಲ್‌ ಮಿಡಿಯಾದಲ್ಲಿ ಆಕ್ಟೀವ್‌ ಆಗಿರುವ ಈ ಜೋಡಿ ಶೀಘ್ರದಲ್ಲೇ ಪೋಷಕರಾಗಲಿದ್ದು... ಇತ್ತೀಚೆಗೆ ನಟಿ ತನ್ನ ಬೇಬಿ ಬಂಪನ್ನು ತೋರಿಸುತ್ತಿರುವ ಪೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ... ಪೋಟೋಗಳಿಗೆ ಅಭಿಮಾನಿಗಳಿಂದ ಕಾಮೆಂಟ್‌ಗಳ ಸುರಿಮಳೆಯೇ ಸುರಿದಿದೆ.

ಇದನ್ನೂ ಓದಿ-Sagar Biligowda:ಪತ್ನಿಯ ಸೀಮಂತವನ್ನು ಅದ್ದೂರಿಯಾಗಿ ನೆರೆವೇರಿಸಿದ ಸತ್ಯ ಸೀರಿಯಲ್‌ ಅಮೂಲ್‌ ಬೇಬಿ!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News