ಜವಾನ್ ನಾಯಕಿಯಾಗಿ ಮೊದಲ ಆಯ್ಕೆ ನಯನತಾರ ಅಲ್ಲ..ಈ ಸೌತ್ ನಟಿ..!
South Actress name in Jawan : ಬಾಲಿವುಡ್ ಸೇರಿದಂತೆ ಎಲ್ಲ ಕಡೆಗಳಲ್ಲಿಯೂ ಜವಾನ್ ಚಿತ್ರದ ಕ್ರೇಜ್ ಹೆಚ್ಚುತ್ತಿದೆ. ಸದ್ಯ ಟ್ರೈಲರ್ ಬಿಡುಗಡೆಯಾಗಿ ಸಾಕಷ್ಟು ಸದ್ದು ಮಾಡುತ್ತಿದೆ. ಈ ನಡುವೆ ಈ ಚಿತ್ರದ ಮತ್ತೊಂದು ಸುದ್ದಿ ಸೋಷಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿದೆ. ಏನದು ಅಂತೀರಾ ಮುಂದೆ ಓದಿ..
Jawan : ಶಾರುಖ್ ಖಾನ್ ಅವರನ್ನು ಹೊರತು ಪಡಿಸಿ ದಕ್ಷಿಣ ಭಾರತದ ಸಾಕಷ್ಟು ನಟ ನಟಿಯರು ಪ್ರಮುಖ ಪಾತ್ರದಲ್ಲಿ ನಟಿಸಿರುವ ಜವಾನ್ ಸಿನಿಮಾದಿಂದ ಲೇಡಿ ಸೂಪರ್ ಸ್ಟಾರ್ ನಯನತಾರಾ ಬಾಲಿವುಡ್‌ಗೆ ಎಂಟ್ರಿ ಕೊಡುತ್ತಿದ್ದಾರೆ. ಪಾತ್ರ ವರ್ಗದಿಂದಲೇ ಗಮನ ಸೆಳೆದಿರುವ ಈ ಸಿನಿಮಾ ಸೆಪ್ಟೆಂಬರ್ 7 ರಂದು ತೆರೆಗೆ ಅಪ್ಪಳಿಸಲಿದೆ.
ಅಟ್ಲಿ ನಿರ್ದೇಶನದಡಿಯಲ್ಲಿ ಮೂಡಿ ಬರುತ್ತಿರುವ ಈ ಸಿನಿಮಾದಲ್ಲಿ ನಯನತಾರಾ ಶಾರುಖ್ ಖಾನ್ ಅವರಿಗೆ ಜೋಡಿಯಾಗಿ ನಟಿಸಿದ್ದಾರೆ. ಕೆಲವು ವರದಿಗಳ ಪ್ರಕಾರ ಬಹು ನಿರೀಕ್ಷಿತ ಜವಾನ್ ಸಿನಿಮಾದಲ್ಲಿ ನಾಯಕಿಯಾಗಿ ಮೊದಲ ಆಯ್ಕೆ ನಯನತಾರಾ ಆಗಿರಲಿಲ್ಲವಂತೆ. ಹೌದು ಈ ಜಾಗಕ್ಕೆ ಇನ್ನೊಬ್ಬ ಜನಪ್ರಿಯ ಸೌತ್ ನಟಿಯ ಹೆಸರು ಕೇಳಿಬಂದಿತ್ತು. ಆ ನಟಿ ಬೇರೆ ಯಾರು ಅಲ್ಲ ಸಮಂತಾ ರುತ್ ಪ್ರಭು.
ಹೌದು ಜವಾನ್ ಸಿನಿಮಾದಲ್ಲಿ ಶಾರುಖ್ ಖಾನ್‌ಗೆ ನಾಯಕಿಯಾಗಿ ಸಮಂತಾ ರುತ್ ಪ್ರಭು ಅವರು ಆಯ್ಕೆಯಾಗಿದ್ದರು. ಆದರೆ ಅಲ್ಲಿ ಬದಲಾವಣೆಯಾಗಿ ನಯನತಾರಾ ಕಿಂಗ್ ಖಾನ್‌ಗೆ ಜೋಡಿಯಾಗಲಿದ್ದಾರೆ. ಇದೀಗ ಅಭಿಮಾನಿಗಳ ತಲೆಯಲ್ಲಿ ಮೂಡುವುದು ಒಂದೇ ಪ್ರಶ್ನೆ ಅವಕಾಶವನ್ನು ನಟಿ ಸಮಂತಾ ನಿಕಾರಿಸಿದ್ದಾರಾ..ಅನ್ನೋದು.
ಇದನ್ನೂ ಓದಿ-Bollywood : 5 ಅಫೇರ್, 2 ಮದುವೆ.. ಆದರೂ ಒಂಟಿ ಜೀವನ ಕಳೆಯುತ್ತಿರುವ ಖ್ಯಾತ ನಟಿ
ಹೌದು ನಟಿ ಸಮಂತಾ ಜವಾನ್ ಚಿತ್ರದಲ್ಲಿ ನಟಿಸಲು ನಿರಾಕರಿಸಿದ್ದಾರೆ!. ಸಿನಿಮಾದಲ್ಲಿ ನಟಿಸುವ ಅವಕಾಶ ಬಂದಾಗ ಅವರು ತಮ್ಮ ಪತಿ ನಾಗ ಚೈತನ್ಯ ಅವರೊಂದಿಗೆ ಸಮಯ ಕಳೆಯಲು ಬಯಸುತ್ತಿದ್ದರು ಎಂದು ವರದಿ ಮಾಡಲಾಗಿದೆ. ಸಮಂತಾ ಅವರಿಗೆ ಈ ಸಿನಿಮಾದಲ್ಲಿ ನಟಿಸಿಲು 2019 ರಲ್ಲಿಯೇ ಕೇಳಲಾಗಿತ್ತು.
ಇನ್ನು ಈ ಬಗ್ಗೆ ಯಾವುದೇ ಅಧಿಕೃತ ದೃಢೀಕರಣಗಳಿಲ್ಲ. ಆದರೆ ಸಮಂತಾ ಅವರಿಗೆ ಜವಾನ್ ಚಿತ್ರದಲ್ಲಿ ನಟಿಸಲು ಆಫರ್ ಬಂದಿದ್ದು ಕೆಲ ಮಟ್ಟಿಗೆ ನಿಜವೂ ಇರಬಹುದು ಇದನ್ನು ನಂಬಲೂಬಹುದು ಏಕೆಂದರೆ ಜವಾನ್ ಚಿತ್ರದ ನಿರ್ದೇಶಕ ಅಟ್ಲಿ ಅವರೊಂದಿಗೆ ಸಮಂತಾ ಉತ್ತಮ ಬಾಂಧವ್ಯ ಹೊಂದಿದ್ದಾರೆ.
ಸಮಂತಾ ಜವಾನ್ ಅನ್ನು ತಿರಸ್ಕರಿಸಲು ಇದೇ ಕಾರಣವೇ ಅಥವಾ ಆಕೆಗೆ ಮೊದಲು ಚಿತ್ರವನ್ನು ಆಫರ್ ಮಾಡಲಾಗಿದೆಯೇ ಎಂಬ ಬಗ್ಗೆ ಯಾವುದೇ ಅಧಿಕೃತ ದೃಢೀಕರಣವಿಲ್ಲ. ಆದರೆ ಸಮಂತಾಗೆ ಜವಾನ್ ಆಫರ್ ಬಂದಿದೆ ಎಂಬ ಸುದ್ದಿಯನ್ನು ನಂಬುವುದು ಕಷ್ಟವೇನಲ್ಲ. ಏಕೆಂದರೆ, ಸಮಂತಾ ಚಿತ್ರದ ಜವಾನ್ ನಿರ್ದೇಶಕ ಅಟ್ಲಿ ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ.
ಇದನ್ನೂ ಓದಿ-ಸೋನು ಶ್ರೀನಿವಾಸ್ ಗೌಡ ಹಾಟ್ ಅವತಾರ.. ಕೈಯಲ್ಲಿ ಗ್ಲಾಸ್, ಸಿಗರೇಟು.!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.