Aryan Khan ಜಾಮೀನು ಅರ್ಜಿಗೆ NCB ತೀವ್ರ ವಿರೋಧ , ಇಂಟರ್ ನ್ಯಾಷನಲ್ ಡ್ರಗ್ ಸಿಂಡಿಕೇಟ್ ಜೊತೆ ಸಂಬಂಧದ ಶಂಕೆ
ನ್ಯಾಯಾಲಯದಲ್ಲಿ ಆರ್ಯನ್ ಖಾನ್ ಜಾಮೀನು ಅರ್ಜಿಯನ್ನು ಎನ್‌ಸಿಬಿ ವಿರೋಧಿಸಿದೆ. ಆರ್ಯನ್ ಅಂತರಾಷ್ಟ್ರೀಯ ಡ್ರಗ್ ಸಿಂಡಿಕೇಟ್ ಜೊತೆ ಸಂಪರ್ಕ ಹೊಂದಿದ್ದಾನೆ ಎಂದು ಎನ್‌ಸಿಬಿ ಹೇಳಿದೆ.
ಮುಂಬೈ : ಮುಂಬೈನಲ್ಲಿ ನಡೆಯುತ್ತಿರುವ ಅತ್ಯುನ್ನತ ರೇವ್ ಪಾರ್ಟಿಯಲ್ಲಿ ಸಿಕ್ಕಿಬಿದ್ದ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ (Aryan Khan) ಜಾಮೀನು ಅರ್ಜಿಯ ವಿಚಾರಣೆ ನಡೆಯುತ್ತಿದೆ. ಈ ಸಂದರ್ಭದಲ್ಲಿ, ಶಾರುಖ್ ಮತ್ತು ಎನ್‌ಸಿಬಿಯ (NCB) ವಕೀಲರು ತಮ್ಮ ತಮ್ಮ ವಾದ ಮಂಡಿಸುತ್ತಿದ್ದಾರೆ.
ನ್ಯಾಯಾಲಯದಲ್ಲಿ ಆರ್ಯನ್ ಖಾನ್ ಜಾಮೀನು ಅರ್ಜಿಯನ್ನು ಎನ್‌ಸಿಬಿ (NCB) ವಿರೋಧಿಸಿದೆ. ಆರ್ಯನ್ ಅಂತರಾಷ್ಟ್ರೀಯ ಡ್ರಗ್ ಸಿಂಡಿಕೇಟ್ ಜೊತೆ ಸಂಪರ್ಕ ಹೊಂದಿದ್ದಾನೆ ಎಂದು ಎನ್‌ಸಿಬಿ ಹೇಳಿದೆ. ಈ ಪ್ರಕರಣದಲ್ಲಿ ಆರ್ಯನ್ ಸೇರಿದಂತೆ ಇನ್ನೂ ಅನೇಕ ಜನರು ಭಾಗಿಯಾಗಿದ್ದಾರೆ ಎಂದು ಅದು ಹೇಳಿದ್ದು, ಆರ್ಯನ್ ಖಾನ್ (Aryan Khan) ತನಿಖೆ ಇನ್ನೂ ನಡೆಯಬೇಕಿದೆ ಎಂದು ಹೇಳಿದೆ.
ಇದನ್ನೂ ಓದಿ : ಈಗ ಯಾಕೆ ವೈರಲ್ ಆಗುತ್ತಿದೆ ಆರ್ಯನ್ ಖಾನ್ ನ ಎರಡು ವರ್ಷಗಳ ಹಿಂದಿನ ಫೋಟೋ ? ಅಂಥದ್ದೇನಿದೆ ಅದರಲ್ಲಿ ?
ಆರ್ಯನಿಗೆ ಸಿಕ್ಕಿಲ್ಲ ಜಾಮೀನು :
ಡ್ರಗ್ಸ್ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವ ಶಾರುಖ್ ಖಾನ್ (Sharukh Khan) ಪುತ್ರ ಆರ್ಯನ್ ಖಾನ್ ಜಾಮೀನು ಅರ್ಜಿಯನ್ನು ಮುಂಬೈನ ಸೆಷನ್ಸ್ ನ್ಯಾಯಾಲಯದ ವಿಶೇಷ NDPS ನ್ಯಾಯಾಲಯವು ಬುಧವಾರ ಮಧ್ಯಾಹ್ನ 2.45 ಕ್ಕೆ ಕೈಗೆತ್ತಿಕೊಂಡಿತು. ಈ ಮೊದಲು, ಎನ್‌ಸಿಬಿ, ನ್ಯಾಯಾಲಯದಲ್ಲಿ ಈ ಜಾಮೀನು ಅರ್ಜಿಯ ಮೇಲೆ ತನ್ನ ಉತ್ತರವನ್ನು ಸಲ್ಲಿಸಿತು.
ಚಾರ್ಜ್ ಶೀಟ್ ಸಲ್ಲಿಸಿದ ಎನ್ ಸಿಬಿ :
ಆರ್ಯನ್ ಖಾನ್ ನಿಂದ ವಶಪಡಿಸಿಕೊಂಡ ಪುರಾವೆಗಳಿಂದ ಆತ ಡ್ರಗ್ಸ್ ಖರೀದಿ ಮತ್ತು ವಿತರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾನೆ ಎನ್ನುವುದನ್ನು ತೋರಿಸುತ್ತದೆ ಎಂದು ಪಾತ್ರವಿದೆ ಎಂದು ತೋರಿಸುತ್ತದೆ ಎಂದು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB) ತನ್ನ ಉತ್ತರದಲ್ಲಿ ಹೇಳಿದೆ.
ಆರ್ಯನ್ ಖಾನ್ ತನ್ನ ಸ್ನೇಹಿತ ಅರ್ಬಾಜ್ ಮರ್ಚೆಂಟ್ ಮತ್ತು ಇತರ ಮೂಲಗಳಿಂದ ಕಂಟ್ರಾಬ್ಯಾಂಡ್ ಹೆಸರಿನ ಡ್ರಗ್ಸ್ ಖರೀದಿಸುತ್ತಿದ್ದರು ಎನ್ನುವುದು ಪ್ರಾಥಮಿಕವಾಗಿ ತಿಳಿದುಬಂದಿದೆ ಎಂದು ಎನ್‌ಸಿಬಿ ಹೇಳಿದೆ. ದಾಳಿಯ ವೇಳೆ ಕೂಡಾ, ಅರ್ಬಾಜ್ ಮರ್ಚೆಂಟ್‌ನಿಂದ 6 ಗ್ರಾಂ ಚರಸ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಇವರಿಬ್ಬರೂ ಆಪ್ತ ಸ್ನೇಹಿತರು. ಆದ್ದರಿಂದ, NDPS ಕಾಯಿದೆಯ ಸೆಕ್ಷನ್ 29 ರ ಅಡಿಯಲ್ಲಿ ಆರ್ಯನ್ ಖಾನ್ ವಿರುದ್ಧ ಕ್ರಮಕ್ಕೆ ಅವಕಾಶವಿದೆ.
ಇದನ್ನೂ ಓದಿ : ನಿಮ್ಮ ಡೈವೋರ್ಸ್ ಯಾವಾಗ ಆಗುತ್ತೆ ಎಂದು ನಮಗೆ ಹೇಳಿ' ಎಂದ ವ್ಯಕ್ತಿಗೆ ನಟಿ ರಿಚಾ ಚಡ್ಡಾ ಹೇಳಿದ್ದೇನು ಗೊತ್ತೇ?
ಮೂಲಗಳ ಪ್ರಕಾರ, NCB ಇಂದು ನ್ಯಾಯಾಲಯದಲ್ಲಿ ಈ ಜಾಮೀನು ಅರ್ಜಿಯನ್ನು ವಿರೋಧಿಸಿತು. ಇತ್ತೀಚೆಗೆ, ಎನ್‌ಸಿಬಿ ಡ್ರಗ್ಸ್ ಕಾರ್ಟೆಲ್‌ಗೆ ಸಂಬಂಧಿಸಿದ ಇನ್ನೂ ಕೆಲವು ಜನರನ್ನು ಬಂಧಿಸಲಾಗಿದೆ. ಬಂಧಿತರ ವಿಚಾರಣೆಯಲ್ಲಿ ಹಲವು ಮಹತ್ವದ ಮಾಹಿತಿಗಳು ಸಿಕ್ಕಿದ್ದು, ಅದರ ಆಧಾರದ ಮೇಲೆ ಆರ್ಯನ್ ಖಾನ್ ಜಾಮೀನು (Aryan Khan bail) ಅರ್ಜಿಯನ್ನು ವಿರೋಧಿಸಲಾಯಿತು. ಇನ್ನು ಮಂಗಳವಾರ ಇಮ್ತಿಯಾಜ್ ಖಾತ್ರಿಯವರನ್ನು ಕೂಡಾ ಎನ್ ಸಿಬಿ ವಿಚಾರಣೆಗೆ ಒಳಪಡಿಸಿತ್ತು. ಈ ವಿಚಾರಣೆ ನಂತರ ಪ್ರಕರಣಕ್ಕೆ ಸಂಬಂಧಿಸಿದ ಹಲವು ಪ್ರಮುಖ ಕೊಂಡಿಗಳು ಮುಂಚೂಣಿಗೆ ಬಂದಿವೆ. ಗುರುವಾರ ಬೆಳಿಗ್ಗೆ 11 ಗಂಟೆಗೆ ಮರು ವಿಚಾರಣೆಗಾಗಿ ಇಮ್ತಿಯಾಜ್ ಖಾತ್ರಿ ಅವರನ್ನು NCB ಕರೆಸಿಕೊಂಡಿದೆ. ಇಮ್ತಿಯಾಜ್ ಖಾತ್ರಿ ಆರ್ಯನ್ ಖಾನ್ ಮತ್ತು ಅರ್ಬಾಜ್ ಮರ್ಚೆಂಟ್ ಜೊತೆ ಹಳೆಯ ಸ್ನೇಹ ಹೊಂದಿದ್ದಾರೆ. ಮತ್ತೊಂದೆಡೆ, ಈ ಮಾದಕದ್ರವ್ಯ ಪ್ರಕರಣದಲ್ಲಿ ಹೆಸರು ಬಂದಿರುವ ಪ್ರತೀಕ್ ಗಬಾ, ಇಮ್ತಿಯಾಜ್ ಖಾತ್ರಿಯವರ ನಿಕಟ ಸಂಪರ್ಕವನ್ನು ಹೊಂದಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.