ಆರ್ಯನ್ ಖಾನ್ ಜೈಲುಪಾಲು: ಮಗನ ಸ್ಥಿತಿ ಕಂಡು ಕಣ್ಣೀರಿಟ್ಟ ಗೌರಿ ಖಾನ್..!

ಎನ್‌ಸಿಬಿ ಅಧಿಕಾರಿಗಳು ಆರ್ಯನ್ ಖಾನ್(Aryan Khan)ನನ್ನು ಬಂಧಿಸಿದ ದಿನದಿಂದಲೂ ತಮ್ಮ ಪುತ್ರನಿಗೆ ಜಾಮೀನು ಪಡೆಯಲು ಗೌರಿಖಾನ್ ನಿರಂತರವಾಗಿ ಪ್ರಯತ್ನಿಸುತ್ತಲೇ ಇದ್ದಾರೆ.

Written by - Puttaraj K Alur | Last Updated : Oct 9, 2021, 09:37 PM IST
  • ಡ್ರಗ್ಸ್ ಪ್ರಕರಣದಲ್ಲಿ ಬಾಲಿವುಡ್ ಬಾದ್‌ಷಾ ಶಾರುಖ್ ಖಾನ್ ಪುತ್ರನಿಗೆ ಜೈಲೇ ಗತಿ
  • ಮಗನ ಪರಿಸ್ಥಿತಿ ಕಂಡು ಕಣ್ಣೀರಿಟ್ಟ ತಾಯಿ ಗೌರಿಖಾನ್ ವಿಡಿಯೋ ಸಖತ್ ವೈರಲ್
  • ಆರ್ಯನ್ ಖಾನ್ ಮತ್ತು ಇತರ 7 ಮಂದಿಗೆ ಮುಂಬೈ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ
ಆರ್ಯನ್ ಖಾನ್ ಜೈಲುಪಾಲು: ಮಗನ ಸ್ಥಿತಿ ಕಂಡು ಕಣ್ಣೀರಿಟ್ಟ ಗೌರಿ ಖಾನ್..!
ಮಗನ ಸ್ಥಿತಿ ಕಂಡು ಕಣ್ಣೀರಿಟ್ಟ ಗೌರಿ ಖಾನ್

ನವದೆಹಲಿ: ಬಾಲಿವುಡ್ ಬಾದ್‌ಷಾ, ಸೂಪರ್ ಸ್ಟಾರ್ ಶಾರುಖ್ ಖಾನ್(Shah Rukh Khan) ಪುತ್ರನಿಗೆ ಜಾಮೀನು ಭಾಗ್ಯ ಸಿಗದ ಕಾರಣ ಜೈಲೇ ಗತಿಯಾಗಿದೆ. ಡ್ರಗ್ಸ್ ಕೇಸ್‌(Aryan Khan Drug Case)ನಲ್ಲಿ ಸಿಲುಕಿರುವ ಆರ್ಯನ್ ಖಾನ್ ಮತ್ತು ಇತರ 7 ಮಂದಿಗೆ ಮುಂಬೈ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಡ್ರಗ್ಸ್ ಪ್ರಕರಣವನ್ನು ವಿಶೇಷ ಎನ್‌ಡಿಪಿಎಸ್‌ ನ್ಯಾಯಾಲಯ ವಿಚಾರಣೆ ನಡೆಸಲಿದೆ ಅಂತಾ ಮುಂಬೈನ ಕಿಲ್ಲಾ ಕೋರ್ಟ್ ತಿಳಿಸಿದೆ. ವೈದ್ಯಕೀಯ ಪರೀಕ್ಷೆ ಆರ್ಯನ್ ಖಾನ್ ಡ್ರಗ್ಸ್ ಸೇವಿಸಿರುವುದು ರುಜುವಾತಾದರೆ ಮತ್ತಷ್ಟು ಸಂಕಷ್ಟ ಎದುರಾಗಲಿದೆ.

ಎನ್‌ಸಿಬಿ ಅಧಿಕಾರಿಗಳು ಆರ್ಯನ್ ಖಾನ್(Aryan Khan)ನನ್ನು ಬಂಧಿಸಿದ ದಿನದಿಂದಲೂ ತಮ್ಮ ಪುತ್ರನಿಗೆ ಜಾಮೀನು ಪಡೆಯಲು ಗೌರಿಖಾನ್ ನಿರಂತರವಾಗಿ ಪ್ರಯತ್ನಿಸುತ್ತಲೇ ಇದ್ದಾರೆ. ಆದರೆ ಅವರ ಪ್ರಯತ್ನ ಸಫಲವಾಗಿಲ್ಲ. ಬಾಲಿವುಡ್ ನ ಅನೇಕ ಸ್ಟಾರ್ ನಟ-ನಟಿಯರು ಆರ್ಯನ್ ಖಾನ್ ಪರ ಬ್ಯಾಟಿಂಗ್ ಮಾಡಿದರೂ ಪ್ರಯೋಜನವಾಗಿಲ್ಲ. ಪ್ರತಿವರ್ಷ ಪ್ರೀತಿಯ ಮಗ ಮತ್ತು ಕುಟುಂಬ ಸದಸ್ಯರೊಂದಿಗೆ ಅದ್ದೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದ ಗೌರಿ ಖಾನ್ ಶುಕ್ರವಾರ 51ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಆದರೆ ಈ ವರ್ಷ ಮಗನ ಬಂಧನದ ದುಃಖದಲ್ಲಿರುವುದರಿಂದ ಅವರಲ್ಲಿ ಹುಟ್ಟುಹಬ್ಬದ ಸಂಭ್ರಮ ಕಾಣೆಹಯಾಗಿತ್ತು. ಪ್ರೀತಿಯ ಮಗನ ಮುಂದಿನ ಭವಿಷ್ಯ ಏನಾಗುತ್ತೋ ಎಂದು ಆತಂಕದಲ್ಲಿರುವ ಗೌರಿ ಖಾನ್ ಮೊಗದಲ್ಲಿ ಖುಷಿಯ ಮಾಯವಾಗಿದೆ. ಮಗನ ಪರಿಸ್ಥಿತಿಯನ್ನು ನೆನೆದು ಅವರು ಕಣ್ಣೀರಿಟ್ಟಿರುವ ವಿಡಿಯೋವೊಂದು ವೈರಲ್ ಆಗುತ್ತಿದೆ.

ಇದನ್ನೂ ಓದಿ: ಪತ್ನಿಯ ರಹಸ್ಯ ಬಯಲು ಮಾಡಿದ Ranveer Singh, ಈ ಕೆಲಸ ಮಾಡುತ್ತಾರಂತೆ Deepika Padukone

ಪುತ್ರನ ಸ್ಥಿತಿ ಕಂಡು ದುಃಖದ ಕಟ್ಟೆ ಒಡೆಯಿತು

ಈ ವಿಡಿಯೋದಲ್ಲಿ ಗೌರಿಖಾನ್(Gauri Khan) ಕಾರಿನಲ್ಲಿ ಕುಳಿತಿದ್ದು, ತಮ್ಮ ಪುತ್ರನನ್ನು ನೆನೆದು ಅಳುತ್ತಿರುವುದು ಕಂಡುಬಂದಿದೆ. ಎರಡು ಬಾರಿ ಆರ್ಯನ್ ಖಾನ್ ಜಾಮೀನು ಅರ್ಜಿಯನ್ನು ತಿರಸ್ಕರಿಸಲಾಗಿದೆ. ವಿಡಿಯೋದಲ್ಲಿ ಆರ್ಯನ್ NCB ನ್ಯಾಯಾಲಯದಿಂದ ಹೊರಹೋಗುವುದನ್ನು ಕಾಣಬಹುದು. ಮುಂಭಾಗದಲ್ಲಿ ಒಂದು ಕಾರು ನಿಲ್ಲಿಸಿರುವುದು ಕಂಡುಬರುತ್ತದೆ. ಅದರೊಳಗೆ ಗೌರಿ ಖಾನ್ ಅಳುತ್ತಿರುವುದು ಕಂಡುಬಂದಿದೆ. ಅವರು ತಮ್ಮ ಕಣ್ಣುಗಳನ್ನು ಕೈಗಳಿಂದ ಮರೆಮಾಡಿ ನಿರಂತರವಾಗಿ ಅಳುತ್ತಿರುವುದನ್ನು ಕಾಣಬಹುದು.

ಗೌರಿಖಾನ್ ಅಳು ನಿಲ್ಲುತ್ತಿಲ್ಲ

ಈ ವಿಡಿಯೋವನ್ನು ಫೇಸ್‌ಬುಕ್ ನಲ್ಲಿ ಹಂಚಿಕೊಳ್ಳಲಾಗಿದೆ. ವಿಡಿಯೋದಲ್ಲಿ ಗೌರಿಖಾನ್(Gauri Khan) ಬಿಳಿ ಶರ್ಟ್ ಮತ್ತು ನೀಲಿ ಜೀನ್ಸ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಮಗನ ಪರಿಸ್ಥಿತಿಯಿಂದ ಕಂಗಾಲಾಗಿರುವ ಗೌರಿಖಾನ್ ನಿರಂತರವಾಗಿ ಕಣ್ಣೀರು ಹಾಕಿದ್ದಾರೆ. ಅವರಿಗೆ ಮಗನ ಮುಂದಿನ ಭವಿಷ್ಯದ ಬಗ್ಗೆ ಹೆಚ್ಚು ಆತಂಕವಾಗಿದೆ. ಹೀಗಾಗಿ ತುಂಬಾ ಬೇಸರದಲ್ಲಿಯೇ ದಿನದೂಡುವ ಪರಿಸ್ಥಿತಿ ಎದುರಾಗಿದೆ.    ಈ ವಿಡಿಯೋ ನೋಡಿದ ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ಭಾವುಕರಾಗಿದ್ದಾರೆ. ಗೌರಿಖಾನ್ ಜನ್ಮದಿನದಿಂದು ಅವರ ಮಗ NCB ವಶದಲ್ಲಿದ್ದು, ತಾಯಿಯಿಂದ ದೂರವಾಗಿದ್ದಾನೆ. ಇಂತಹ ಕಠಿಣ ಪರಿಸ್ಥಿತಿಯಲ್ಲಿ ಗೌರಿಯವರನ್ನು ನಾವು ಬೆಂಬಲಿಸಬೇಕೆಂದು ಅನೇಕರು ಕಾಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: ಅನೈತಿಕ ಸಂಬಂಧದ ಕುರಿತ ವದಂತಿಗಳಿಗೆ ನಟಿ ಸಮಂತಾ ಹೇಳಿದ್ದೇನು ಗೊತ್ತೇ?

ಐಷಾರಾಮಿ ಹಡಗಿನಲ್ಲಿ ಭರ್ಜರಿ ಡ್ರಗ್ಸ್ ಪಾರ್ಟಿ

ಮುಂಬೈನ ಐಷಾರಾಮಿ ಹಡಗಿನಲ್ಲಿ ಡ್ರಗ್ಸ್ ಪಾರ್ಟಿ ನಡೆಯುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಅಕ್ಟೋಬರ್ 2ರ ರಾತ್ರಿ ಎನ್‌ಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ಬಾಲಿವುಡ್‌ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಸೇರಿದಂತೆ 8ಕ್ಕೂ ಹೆಚ್ಚು ಮಂದಿಯನ್ನು ಎನ್‌ಸಿಬಿ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಐಷಾರಾಮಿ ಹಡಗಿನಲ್ಲಿ ಅಪಾರ ಪ್ರಮಾಣದ ಮಾದಕ ವಸ್ತುಗಳು ಪತ್ತೆಯಾಗಿದ್ದವು. ಈ ಬಗ್ಗೆ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

More Stories

Trending News